ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ನಗರದಹಬ್ಬುವಾಡ ರಸ್ತೆಗೆ(Habbuwada Road) ಹಿಡಿದ ಶನಿ ಇನ್ನೂ ತೊಲಗಿಲ್ಲ. ಇದೀಗ ಇಲ್ಲಿನ ಕಾಂಕ್ರೀಟ್  ರಸ್ತೆಗೆ(Concrete Road) ಡಾಂಬರ್ ಸುರಿದು ಮತ್ತೆ ಶನಿ ಒಕ್ಕರಿಸಿಕೊಂಡಿದೆ.

ಹೌದು. ಕಾರವಾರದಿಂದ ಕೈಗಾಕ್ಕೆ(Karwar to Kaiga) ತೆರಳುವ ರಸ್ತೆ ಕಳೆದ ಕೆಲ ವರ್ಷಗಳಿಂದ ಸುದ್ದಿಯಲ್ಲಿದೆ. ನಾಲ್ಕೈದು ವರ್ಷಗಳ ಹಿಂದೆ ಇಲ್ಲಿ ರಸ್ತೆ ಅವ್ಯವಸ್ಥೆ ಆದಾಗ ಹೊಸ ರಸ್ತೆಗೆ ಜನ ಬೇಡಿಕೆ ಇಟ್ಟಿದ್ದರು. ಅದೇ ರೀತಿ ಕಾರವಾರದ ರಾಮಶ್ರೀ ಕನ್ಸಟ್ರಕ್ಷನ್(Karwar Ramashree Construction) ವತಿಯಿಂದ ಉತ್ತಮವಾದ ಕಾಂಕ್ರೀಟ್ ರಸ್ತೆ(Concrete Road) ಮಾಡಲಾಗಿತ್ತು. ವಾಹನ ಸವಾರರು ಖುಷಿಯಾಗಿದ್ದರು.

ಬಳಿಕ ಡಿವೈಡರ್ ಹಾಕುವ ಯೋಜನೆ ಮಾಡಿದಾಗ ನಾಗರಿಕರು ವಿರೋಧಿಸಿದ್ದರು. ಇರುವ ರಸ್ತೆಯ ನಡುವೆ ಡಿವೈಡರ್(Devider) ಹಾಕಿದ್ರೆ ತೊಂದರೆಯಾಗುತ್ತೆ. ಹೀಗಾಗಿ ಡಿವೈಡರ್ ಅಲ್ಲಿಗೆ ನಿಂತು ಇದ್ದ ರಸ್ತೆಯನ್ನ ಸಾರ್ವಜನಿಕರು ಬಳಸಿಕೊಳ್ಳುತ್ತಿದ್ದರು.

ನಂತರ ಮುಂದುವರಿದ ರಸ್ತೆ ಸಂಪೂರ್ಣ ಹಾಳಾಗಿ ಆಟೋ ಚಾಲಕರು , ಶಾಲೆಯ ಮಕ್ಕಳು(School Childrens) ಕಷ್ಟ ಅನುಭವಿಸಿದಾಗ ಜನರು ಪ್ರತಿಭಟನೆ ನಡೆಸಿದ್ದರು. ಅಂತೂ ಪ್ರತಿಭಟನೆ ಹೋರಾಟಕ್ಕೆ ಮಣಿದ ಇಲಾಖೆ ರಸ್ತೆ ಕಾಮಗಾರಿ ಮಾಡಿದೆ.

ಆದರೆ ಈ ಮಾರ್ಗದಲ್ಲಿ ಆಗಬೇಕಾಗಿರೋದು ಗಟಾರ ವ್ಯವಸ್ಥೆ. ಅಲ್ಲಲ್ಲಿ ಗಟಾರಗಳು(Drainage) ಒಪನ್ ಆಗಿ ತೊಂದರೆ ಉಂಟಾಗುತ್ತಿದೆ. ಮಳೆಗಾಲದಲ್ಲಿ ವಾಹನ ಸವಾರರು ಭಯದಿಂದ ವಾಹನಗಳನ್ನ ಓಡಿಸುತ್ತಾರೆ. ಅವುಗಳ ಕಾಮಗಾರಿ ಸಂಬಂಧಪಟ್ಟ ಇಲಾಖೆಗಳಿಂದವಾಗಬೇಕಾಗಿದೆ.

ಆದರೆ ಗುತ್ತಿಗೆದಾರ ಸರ್ಕಾರದ ಹಣವನ್ನ ಪೋಲು(Government Money misuse) ಮಾಡಿದ ಹಾಗೆ ಕಾಣಿಸುತ್ತಿದೆ. ಮಂಗಳವಾರ ಬೆಳಿಗ್ಗೆ ಹಬ್ಬುವಾಡ ರಸ್ತೆ(Habbuwada Road) ಆರಂಭದಲ್ಲಿ ಡಾಂಬರ್ ಬಿಸಿ ಮಾಡಲು ಆರಂಭಿಸಿದಾಗ ಜನರಿಗೆ ಡೌಟ್ ಆಗಿದೆ. ಬಿಸಿ ಮಾಡಿದ ಡಾಂಬರನ್ನ ಕಾಂಕ್ರೀಟ್ ರಸ್ತೆಗೆ ಹಾಕಿದಾಗ ಜನ ಕೂಡ ಇದ್ಯಾವ ಸೀಮೆ ಎಂಜಿನಿಯರ್, ಅಧಿಕಾರಿ ಕಾರವಾರಕ್ಕೆ ಬಂದಿದ್ದಾನಪ್ಪ ಅಂದುಕೊಂಡ್ರು. ಹೀಗೆ ಹಬ್ಬುವಾಡದ ಪಿಡಬ್ಲುಡಿ ಕ್ವಾಟ್ರಸ್(PWD Qutras) ಮುಂಬದಿಯಿಂದ ಕಾರ್ಮಿಕರು(Labours) ಡಾಂಬರ್ ಹಾಕುತ್ತಾ ಸಾಗಿದ್ದಾರೆ. ಸ್ವಲ್ಪ ದೂರದಲ್ಲಿ ಡಾಂಬರ್ ಹಾಕಿ ಬಳಿಕ ಮುಂದೆ ಸ್ವಲ್ಪ ದೂರದಲ್ಲಿ ಡಾಂಬರೀಕರಣ(Damber) ಮಾಡುವಾಗ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು. ನಗರಸಭೆ ಅಧಿಕಾರಿಗಳು ಬಂದು ವಿಚಾರಿಸಿದರೆ ಸ್ಪಷ್ಟ ಉತ್ತರವಿಲ್ಲ.  ಅಲ್ಲದೇ ಗುತ್ತಿಗೆದಾರನಿಗೆ(Contractor) ಸ್ಪಷ್ಟ ಮಾಹಿತಿ ಇಲ್ಲದೇ ಡಾಂಬರೀಕರಣ ಮಾಡಿದ್ದಾನೆ ಎಂದು ಅಧಿಕಾರಿಗಳು ಉತ್ತರ ನೀಡಿದ್ದಾರೆ.

ಇದು ಪಿಡಬ್ಲುಡಿ ಇಲಾಖೆಯ(PWD Department) ಕೆಶಿಪ್ ಯೋಜನೆಯಲ್ಲಿ(Keship Project) ಮಾಡಿದ ಕಾಮಗಾರಿ ಎಂದು ತಿಳಿಸಿದ್ದಾರೆ. ಆದರೆ ಅಗತ್ಯವಿರುವ ಕಡೆ ಡಾಂಬರ್ ಹಾಕಿ ಹೊಂಡ ಮುಚ್ಚುವ ಬದಲು. ಇದ್ದ ಚೆನ್ನಾಗಿರುವ ರಸ್ತೆಯನ್ನ ಗುತ್ತಿಗೆದಾರ ಹಾಳು ಮಾಡಿದ್ದಕ್ಕೆ ಅಧಿಕಾರಿಗಳು , ಜನಪ್ರತಿನಿಧಿಗಳು ಯಾವ ಉತ್ತರ ನೀಡ್ತಾರೆ. ಸರ್ಕಾರದ ಹಣವನ್ನ ಲೂಟಿ ಮಾಡುವ ಪ್ರಯತ್ನ ಎಂದು ಸಾರ್ವಜನಿಕರು ಆಡಿಕೊಳ್ತಿದ್ದಾರೆ.