ಹೊನ್ನಾವರ : ತಾಲೂಕಿನ ಆಳಂಕಿ ಗ್ರಾಮದಲ್ಲಿ ಜಿಲ್ಲೆಯಲ್ಲಿ ಮೊದಲ ಸೂಪರ್ ಸ್ಪೆಷಾಲಿಟಿ‌ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.

ಬಂಗಾರಮಕ್ಕಿ ವಿಶ್ವ ವೀರಾಂಜನೇಯ ಮಹಾಸಂಸ್ಥಾನದ ಧರ್ಮದರ್ಶಿಗಳಾದ ಶ್ರೀ ಮಾರುತಿ ಗುರುಜೀ ಅವರು ಇಂದು ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ಬೆಂಗಳೂರಿನ ಸುಧಿಕ್ಷಾ ಹೆಲ್ತ್ ಕೇರ್ ಗ್ರೂಪ್ ಸಹಯೋಗದಲ್ಲಿ‌ ಆಸ್ಪತ್ರೆ ನಿರ್ಮಾಣವಾಗಲಿದ್ದು ಗ್ರೂಪ್ ನ ಎಂಡಿ ಸುಬ್ರಹ್ಮಣ್ಯ ಶರ್ಮಾ ಈ ಸಂದರ್ಭದಲ್ಲಿ ಹಾಜರಿದ್ದರು.

ಉತ್ತರ ಕನ್ನಡ ಜಿಲ್ಲೆಯ ಜನರ ಹಲವು ದಿನದ ಬೇಡಿಕೆಯಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇನ್ನೂ ಎರಡು ವರ್ಷದಲ್ಲಿ ನಿರ್ಮಾಣವಾಗಲಿದೆ. ವೀರಾಂಜನೇಯ ದೇವಸ್ಥಾನದ ವತಿಯಿಂದ ನಾಲ್ಕು ಎಕ್ರೆ ಜಮೀನು ನೀಡಲಾಗಿದೆ. ಆರಂಭದಲ್ಲಿ 150ರಿಂದ 200 ಹಾಸಿಗೆ ಆಸ್ಪತ್ರೆ ಮಾಡಿ ಬಳಿಕ ಹಂತಹಂತವಾಗಿ ಆಸ್ಪತ್ರೆ ಮೇಲ್ದರ್ಜಗೇರಲಿದೆ ಎಂದು ಮಾರುತಿ ಗುರುಜೀ ಹೇಳಿದ್ದಾರೆ.