ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಭಟ್ಕಳ(Bhatkal) : ತಾಲೂಕಿನ ಮುಂಡಳ್ಳಿಯಲ್ಲಿ ಅರಬ್ಬಿ ಸಮುದ್ರದಲ್ಲಿ(Mundalli Ocean Sea) ಮುಳುಗಿ(Drowning) ಇಬ್ಬರು ಯುವಕರು ಮೃತಪಟ್ಟ ಘಟನೆ ಸಂಭವಿಸಿದೆ.

ಉತ್ತರಪ್ರದೇಶ ಮೂಲದ(Uttarapradesh Native) ಮಹಮ್ಮದ್ ಅಫ್ರೋಜ್ ನೂರ್ ಮೊಹಮ್ಮದ್ (34)  ರಿಜ್ವಾನ್ ಮಹ್ಮದ ಸಾಕಿರ್ (27) ಮೃತ ದುರ್ದೈವಿಗಳು. ಮೃತರು  ಸ್ಥಳೀಯ ಗಾರ್ಮೆಂಟ್ಸ್ ಅಂಗಡಿಯಲ್ಲಿ(Garments Shops) ಕೆಲಸ ಮಾಡುತ್ತಿದ್ದ ಮಾಡುತ್ತಿದ್ದರು ಎನ್ನಲಾಗಿದೆ.

ಬುಧವಾರ ಸಂಜೆ  ಮುಂಡಳ್ಳಿಯ ನಸ್ತಾರ್ ಬೀಚ್(Nastar Beach)   ಏಳು ಜನ ಯುವಕರ ತಂಡ ವಾಯು ವಿಹಾರಕ್ಕಾಗಿ ತೆರಳಿತ್ತು. ಏಳು ಜನರ ತಂಡದ ಸಮುದ್ರ ತೆರಳಿದರು ಎನ್ನಲಾಗಿದೆ. ಮೂವರು ಸಮುದ್ರ ತೀರದಲ್ಲಿ(Seasore) ಕುಳಿತಿದ್ದರು.   ನಾಲ್ವರು ಸಮೀಪದ ಬಂಡೆ ಪ್ರದೇಶಕ್ಕೆ(Rock Area) ಏರಿ ಸಮುದ್ರದ ಸೌಂದರ್ಯ ವೀಕ್ಷಿಸುತ್ತಿದ್ದರು ಎನ್ನಲಾಗಿದೆ.   ಅಬ್ಬರದ ಅಲೆಯೊಂದು   ಬಂಡೆಗೆ ಅಪ್ಪಳಿಸಿದ್ದರಿಂದ   ಇಬ್ಬರು ಸಮುದ್ರಕ್ಕೆ ಬಿದ್ದಿದ್ದಾರೆ.

ಘಟನೆಯ ಸುದ್ದಿ ಹರಡಿ  ಸ್ಥಳದಲ್ಲಿ  ನೂರಾರು ಜನರು ಜಮಾಯಿಸಿದರು. ಸಾಮಾಜಿಕ ಕಾರ್ಯಕರ್ತ ಸೌದ್ ಗೌವಾಯಿ ಅವರು ಸಿಯಾನ್ ಹಾಗೂ ಸಾಜಪ್ ಸೇರಿ ಮೂವರೊಂದಿಗೆ ಪ್ರಾಣಾಪಾಯ ಲೆಕ್ಕಿಸದೆ ಸಮುದ್ರಕ್ಕಿಳಿದು ರಕ್ಷಣಾ ಕಾರ್ಯಕ್ಕೆ(Rescue Operations) ಮುಂದಾದರೂ, ಪ್ರಯೋಜನವಾಗಲಿಲ್ಲ.

ರಕ್ಷಣಾ ತಂಡ ಇಬ್ಬರ ಮೃತದೇಹಗಳನ್ನು ಸಮುದ್ರದಿಂದ ಹೊರ ತೆಗೆಯಲಾಯಿತು. ಮಾಹಿತಿ ಪಡೆದ ಭಟ್ಕಳ ಡಿವೈಎಸ್ಪಿ(Bhatkal DYSP) ಗಿರೀಶ್, ಗ್ರಾಮೀಣ ಪೊಲೀಸ್ ಠಾಣೆಯ(Rural Police Station) ಇನ್ಸ್‌ಪೆಕ್ಟರ್ ವೆಂಕಟೇಶ್ ಹಾಗೂ ಕರಾವಳಿ ಭದ್ರತಾ ಪೊಲೀಸ್(Coastal Security Police) ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಭಟ್ಕಳ ಗ್ರಾಮೀಣ ಠಾಣೆಯಲ್ಲಿ(Bhatkal Rural Station)  ಪ್ರಕರಣ ದಾಖಲಾಗಿದ್ದು,  ತನಿಖೆ ಆರಂಭಿಸಲಾಗಿದೆ.