ಕಾರವಾರ (KARWAR): ಉತ್ತರಕನ್ನಡ ಜಿಲ್ಲೆಯ ಯುವ ಜನತೆಗಾಗಿ ಕೈಗಾರಿಕೆ ಸ್ಥಾಪಿಸುವಂತೆ ಕೇಂದ್ರ ಬೃಹತ್ ಕೈಗಾರಿಕೆ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ(H D KUMARASWAMI) ಅವರಿಗೆ ಉತ್ತರಕನ್ನಡ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಹಾಗೂ ಜೆಡಿಎಸ್ ಮುಖಂಡರಾದ ಚೈತ್ರಾ ಕೊಠಾರಕರ್(CHAITRA KOTHARAKAR) ಮನವಿ ಮಾಡಿದರು.
ದೆಹಲಿಯ ಸಚಿವರ ಕಚೇರಿಯಲ್ಲಿ ಕುಮಾರಸ್ವಾಮಿ(KUMARASWAMI) ಅವರನ್ನು ಭೇಟಿ ಮಾಡಿದ ಚೈತ್ರಾ, ಕುಮಾರಸ್ವಾಮಿ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಉತ್ತರಕನ್ನಡ(UTTARKANNADA) ಜಿಲ್ಲೆಯ ಕಾರವಾರ-ಅಂಕೋಲಾ(KARWAR -ANKOLA) ಕ್ಷೇತ್ರದ ಅಭಿವೃದ್ಧಿಯ ಕುರಿತು ಹಲವಾರು ವಿಚಾರಗಳ ಕುರಿತು ಚರ್ಚಿಸಿದರು. ನಿರುದ್ಯೋಗ, ಕೈಗಾರಿಕೆ ಇಲ್ಲದಿರುವಿಕೆ ಸೇರಿದಂತೆ ಪ್ರಮುಖ ಜ್ವಲಂತ ಸಮಸ್ಯೆಗಳ ಕುರಿತು ಗಮನಕ್ಕೆ ತಂದಿದ್ದು, ಈ ಬಗ್ಗೆ ಮನವಿ ಸಲ್ಲಿಸುವ ಮೂಲಕ ಮನವರಿಕೆ ಮಾಡಿದರು.
ಉತ್ತರಕನ್ನಡ ಜಿಲ್ಲೆಯು ಭೌಗೋಳಿಕವಾಗಿಯೂ ರಾಜ್ಯದ ಅತೀ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದ್ದು, ಹೇರಳವಾದ ನೈಸರ್ಗಿಕ ಸಂಪತ್ತನ್ನು ಹೊಂದಿದೆ. ವಿಭಿನ್ನ ಭೌಗೋಳಿಕ ಲಕ್ಷಣಗಳನ್ನು ಒಳಗೊಂಡಿರುವ ಜಿಲ್ಲೆಯು ಒಟ್ಟು 12 ತಾಲೂಕುಗಳನ್ನ ಹೊಂದಿದೆ ಜೊತೆಗೆ ಸುಮಾರು 140 ಕಿ. ಮೀ. ಉದ್ದದ ಕರಾವಳಿ ತೀರವನ್ನು ಹೊಂದಿದೆ. ತಾವು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉತ್ತರಕನ್ನಡ ಜಿಲ್ಲೆಗೆ ಹಲವು ಮಹತ್ವದ ಕೊಡುಗೆಗಳನ್ನ ನೀಡಿದ್ದೀರಿ. ಇಂದಿಗೂ ಕೂಡ ಜನರು ನಿಮ್ಮನ್ನು ನೆನೆಸಿಕೊಳ್ಳುತ್ತಿದ್ದಾರೆಂದು ಹೇಳಿದ ಚೈತ್ರಾ, ಜಿಲ್ಲೆಯಲ್ಲಿ ನಿರುದ್ಯೋಗ(UNEMPLOYAMENT) ಸಮಸ್ಯೆಯಿಂದ ನಮ್ಮ ಯುವಜನತೆ (YOUTHS) ಪರದಾಡುತ್ತಿದ್ದಾರೆ. ಉದ್ಯೋಗಕ್ಕಾಗಿ ಪರ ಜಿಲ್ಲೆ, ಪರ ರಾಜ್ಯಕ್ಕೆ ಅಲೆದಾಡುತ್ತಿದ್ದು, ಉತ್ತರಕನ್ನಡ ಜಿಲ್ಲೆಯಲ್ಲಿ ಒಂದು ಕೈಗಾರಿಕೆಗಳಿಲ್ಲದಿರುವುದರಿಂದ ಸಮಸ್ಯೆ ಜೀವಂತವಾಗಿದೆ.
ಉತ್ತರಕನ್ನಡ ಜಿಲ್ಲೆಯ ಅದರಲ್ಲೂ ಕಾರವಾರ-ಅಂಕೋಲಾ ಕ್ಷೇತ್ರವು ಜಲವಿದ್ಯುತ್ ಯೋಜನೆಗೆ(WATER PROJECT), ಸೀಬರ್ಡ್ ನೌಕಾನೆಲೆ, ಕೊಂಕಣ ರೈಲ್ವೆಗೆ(KONKAN RAILWAY), ಕೈಗಾ ಅಣುವಿದ್ಯುತ್ ಸ್ಥಾವರಕ್ಕೆ(KAIGA PLANT) ಜನರು ಆಸ್ತಿಪಾಸ್ತಿ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಇಲ್ಲಿಯ ಜನ ತಮ್ಮ ಅಮೂಲ್ಯ ಜೀವನವನ್ನು ತ್ಯಾಗ ಮಾಡಿದ್ದಾರೆ. ಈ ಕುಟುಂಬಗಳ ವಿದ್ಯಾವಂತರಿಗೆ ಆಯಾ ಯೋಜನೆಗಳಲ್ಲಿ ಇದುವರೆಗೂ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗದಿರುವುದು ವಿಷಾಧನೀಯವಾಗಿದೆ. ಕಾರವಾರ(KARWAR) ತಾಲೂಕಿನ ಮುಡಗೇರಿ ಗ್ರಾಮದಲ್ಲಿ ಕೈಗಾರಿಕಾ ಇಲಾಖೆ ಪಡೆದುಕೊಂಡಿದ್ದ ಸಾಕಷ್ಟು ಜಮೀನು ಈಗಾಗಲೇ ಲಭ್ಯವಿದ್ದು, ಕೈಗಾರಿಕೆಗಳಿಗೆ ಅನುಕೂಲವಾಗಿದೆ. ಹೀಗಾಗಿ ಜಿಲ್ಲೆಯ ಯುವ ಜನರ ಅನುಕೂಲಕ್ಕಾಗಿ ಯಾವುದಾದರೂ ಪರಿಸರ ಪೂರಕವಾಗಿರುವ ಕೈಗಾರಿಕೆಗಳನ್ನು ಜಿಲ್ಲೆಗೆ ಕೊಡುಗೆಯಾಗಿ ನೀಡಿದರೆ ಈ ಭಾಗದ ಯುವಕರು ಅನ್ಯ ರಾಜ್ಯಗಳಿಗೆ ಉದ್ಯೋಗಕ್ಕೆ ಹೋಗುವುದು ತಪ್ಪುತ್ತದೆ. ಯಾಕೆಂದರೆ ತಮ್ಮ ತಂದೆ-ತಾಯಿಯ ಜೊತೆಗೆ ಮನೆಯಲ್ಲಿದ್ದು, ಉದ್ಯೋಗ ಮಾಡಲು ಅನುಕೂಲವಾಗಲಿದೆ.
ಹೀಗಾಗಿ ತಾವು ಧೃಢ ನಿರ್ಧಾರ ಮಾಡಿ ಉತ್ತರಕನ್ನಡ ಜಿಲ್ಲೆಯ ಕಾರವಾರ-ಅಂಕೋಲಾ ಭಾಗದಲ್ಲಿ ಸಾವಿರಾರು ಕೈಗಳಿಗೆ ಉದ್ಯೋಗ ನೀಡುವ ಕೈಗಾರಿಕೆ(INDUSTRY) ಮಂಜೂರು ಮಾಡಬೇಕೆಂದು ಮನವಿ ಮೂಲಕ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಉದ್ಯಮಿ ಚಂದ್ರಹಾಸ ಕೊಠಾರಕರ್ ಇದ್ದರು.
ಇದನ್ನು ಓದಿ: ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಗೆ ಕಟ್ಟುನಿಟ್ಟಿನ ಸೂಚನೆ