ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news):ಬೆಂಗಳೂರು(Bangalore): ಹೈಕಮಾಂಡ್ ಸೂಚನೆಗೆ ಸಿಎಂ ಸಿದ್ದರಾಮಯ್ಯ(CM Siddaramaiha) ತಮ್ಮ ಸ್ಥಾನಕ್ಕೆ ರಾಜೀನಾಮೆ(Resign) ನೀಡಿದ್ದಾರೆ.

ಗುರುವಾರ ಬೆಳಗ್ಗೆ ಅಧಿಕೃತ ನಿವಾಸ ಕಾವೇರಿಯಲ್ಲಿ(Kaveri) ನಡೆದ ಉಪಾಹಾರ ಕೂಟಕ್ಕೆ ಸಂಪುಟದ ಸಚಿವರೆಲ್ಲರೂ  ಹಾಜರಾಗಿದ್ದರು. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್(DCM D K Shivakumar)   ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ(Siddaramaiha), ನನಗೆ ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ(Resigned) ನೀಡುತ್ತಿದ್ದೇನೆ ಎಂದು  ಘೋಷಣೆ ಮಾಡಿದರು. ಈ ವೇಳೆ ಭಾವೋದ್ವೇಗಕ್ಕೆ ಒಳಗಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ.

ಉಪಾಹಾರದ ಸಂದರ್ಭದಲ್ಲಿ ಸಿದ್ದರಾಮಯ್ಯ(Siddaramaiha) ಅವರು ಸಚಿವರನ್ನು ಉದ್ದೇಶಿಸಿ ಔಪಚಾರಿಕವಾಗಿ ಮಾತನಾಡಿದ್ದು, ಈವರೆಗೂ ಉತ್ತಮ ಆಡಳಿತ ನೀಡಲು ಸಹಕರಿಸಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ. ರಾಜಕಾರಣಕ್ಕೆ ಹೊಸ ಮುಖಗಳು, ಹೊಸ ಆಲೋಚನೆಗಳು ಬರಬೇಕು. ಜನ ಕಾಂಗ್ರೆಸ್ ಪಕ್ಷದ(Congress Party) ಮೇಲೆ ಅಪಾರ ವಿಶ್ವಾಸ ಇರಿಸಿದ್ದು, ಅದನ್ನು ಮುಂದಿನ ದಿನಗಳಲ್ಲಿ ಉಳಿಸಿಕೊಳ್ಳಬೇಕು. ಕೋಮುವಾದಿ ಹಾಗೂ ವಿಚ್ಛಿದ್ರಕಾರಿ ಶಕ್ತಿಗಳು, ಜನರ ಶಾಂತಿ, ನೆಮ್ಮದಿ ಕೆಡಿಸಲು ಅವಕಾಶ ನೀಡಬಾರದು ಎಂದು ಅವರು ಸಲಹೆ ನೀಡಿದ್ದಾರೆ.

ತಾವು ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ. ದೈಹಿಕ ಸಾಮರ್ಥ್ಯ ಇರುವವರೆಗೂ ಜನರ ಸೇವೆ ಮಾಡುತ್ತೇನೆ. ರಾಜಕೀಯವಾಗಿ ನನಗೆ ಈವರೆಗೂ ಸಹಕಾರ, ಸಲಹೆ ನೀಡಿದ ಎಲ್ಲರನ್ನು ಸರಿಸಿಕೊಳ್ಳುವುದಾಗಿ ಸಿದ್ದರಾಮಯ್ಯ(Siddaramaiha) ಹೇಳಿದ್ದಾರೆ.

ಇದನ್ನು ಓದಿ : ಕೊಲೆ ಯತ್ನ ಆರೋಪಿಗಳ ಸುಳಿವು ನೀಡಿದರೇ 25 ಸಾ. ರೂ. ಬಹುಮಾನ.