ಹೊನ್ನಾವರ (Honnavar): ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಚಿರತೆ (Leopard) ಹಾವಳಿ ಜಾಸ್ತಿಯಾಗಿದೆ. ಚಿರತೆ ಕಾಟದಿಂದ ಜನತೆ ಕಂಗಾಲಾಗಿದ್ದು ಸಂತೇಗುಳಿ(Santeguli) ಸಮೀಪ ಬೈಕ್ ಲ್ಲಿ ತೆರಳುತ್ತಿದ್ದ ವ್ಯಕ್ತಿಯೊರ್ವರ ಮೇಲೆ ಚಿರತೆ ದಾಳಿ(Leopard attack) ನಡೆಸಿದೆ.
ಕೆರೆಕೋಣ ನಿವಾಸಿ ಪ್ರಶಾಂತ ಭಟ್ ಎಂಬುವವರ ಮೇಲೆ ಚಿರತೆ ದಾಳಿ ನಡೆಸಿದೆ. ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಶಾಂತ ಭಟ್ ಅವರು ಹೊನ್ನಾವರದಿಂದ ವಾಪಾಸ್ ತೆರಳುತ್ತಿದ್ದಾಗ ಚಿರತೆ ದಾಳಿ(Leopard attack) ಮಾಡಿದೆ. ಪರಿಣಾಮವಾಗಿ ಅವರ ಕಾಲಿನ ಭಾಗಕ್ಕೆ ಗಾಯವಾಗಿದೆ.
ಸಂತೆಗುಳಿ(Santeguli) ಸಮೀಪ ಘಟನೆ ನಡೆದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅರಣ್ಯ ಇಲಾಖೆಗೆ ವಿಷಯ ತಿಳಿಸಲಾಗಿದ್ದು ಅಧಿಕಾರಿಗಳು ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಚಿರತೆ ಹೆಚ್ಚಾಗಿದ್ದು ಜಾನುವಾರುಗಳ (Cattle) ಮೇಲೆ ದಾಳಿ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರೀ ದೂರಿದ್ದರು. ಇನ್ನೂ ಸಂಜೆಯಾಗುತ್ತಿದ್ದಂತೆ ಜನ ಓಡಾಡಲು ಭಯ ಪಡುವಂತಾಗಿದೆ.
ಇದನ್ನು ಓದಿ : ಬೀಚ್ ಪ್ರವಾಸೋದ್ಯಕ್ಕೆ ಹೆಚ್ಚು ಒತ್ತು ನೀಡಿ
ಭಟ್ಕಳದಲ್ಲಿ ಪೊಲೀಸರ ಮುಂದುವರಿದ ಕಾರ್ಯಾಚರಣೆ