ಶಿರಸಿ(Sirsi) : ತಾಲೂಕಿನ ಸುಗಾವಿ– ಬಿದ್ರಳ್ಲಿ ರಸ್ತೆಯಲ್ಲಿ (Sugavi-bidralli Road) ಕಳೆದೆರಡು ದಿನಗಳಿಂದ ಜನರಿಗೆ ಚಿರತೆ(Leopard) ಪ್ರತ್ಯಕ್ಷವಾಗುತ್ತಿದ್ದು ಗ್ರಾಮಸ್ಥರ ಆತಂಕ ಹೆಚ್ಚಿಸಿದೆ.
ಚಿರತೆ(Leopard) ಓಡಾಟದಿಂದ ಸಾರ್ವಜನಿಕರು ದಿನ ನಿತ್ಯ ಭಯದಲ್ಲಿಯೇ ಓಡಾಡುವ ಪರಸ್ಥಿತಿ ನಿರ್ಮಾಣವಾಗಿದೆ. ಬದನಗೋಡ ಗ್ರಾಮ ಪಂಚಾಯತ್(Badanagod Grama Panchayat) ಸಿಬ್ಬಂದಿ ಪರಮೇಶ್ವರ್ ಅವರು ಇದೇ ಮಾರ್ಗದಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಚಿರತೆ ಎದುರಾಗಿದೆ.
ಚಿರತೆಯ(Leopard) ನಡಿಗೆಯ ದೃಶ್ಯವನ್ನ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.
ಹೀಗಾಗಿ ಅರಣ್ಯ ಇಲಾಖೆ ಗಮನಹರಿಸಿ ಚಿರತೆಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕೆಂದು ಆಗ್ರಹ ವ್ಯಕ್ತವಾಗಿದೆ.
ಇದನ್ನು ಓದಿ : ಮಲ್ಲಾಪುರದಲ್ಲಿ ಯೋಧನ ಅನುಮಾನಾಸ್ಪದ ಸಾವು
ಶಿರೂರು ಗುಡ್ಡ ಕುಸಿತ. ಎರಡು ಕುಟುಂಬಗಳಿಗೆ ಪರಿಹಾರ
ಭಟ್ಕಳ ಪೊಲೀಸರ ಮಿಂಚಿನ ಕಾರ್ಯಾಚರಣೆ