ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಮಧ್ಯಪ್ರದೇಶ(Madhyapradesh) : 14ವರ್ಷಗಳ ಕಾಲ ಜೀವಾವಧಿ ಶಿಕ್ಷೆ (Life Imprisonment) ಅನುಭವಿಸಿ ಬಿಡುಗಡೆ ಹೊಂದಿದ್ದ ವ್ಯಕ್ತಿಯೋರ್ವನನ್ನು ಜೈಲಿನಲ್ಲಿ ಉಪ ಜೈಲು ಅಧಿಕಾರಿಯಾಗಿ(Subjail Officer) ಸೇವೆ ಸಲ್ಲಿಸುತ್ತಿದ್ದ ಮಹಿಳಾ ಅಧಿಕಾರಿಯೊಬ್ಬರು ವಿವಾಹವಾಗಿದ್ದಾರೆ.
ಮಧ್ಯಪ್ರದೇಶದ(Madhyapradesh) ಸತ್ನಾ ಕೇಂದ್ರ ಕಾರಾಗೃಹದ(Satna Central Jail) ಜೈಲರ್ ಫಿರೋಜಾ ಖಾತುನ್ ಅವರು ಮಾಜಿ ಕೈದಿ(Prisoner) ಧರ್ಮೇಂದ್ರ ಸಿಂಗ್ ಅವರನ್ನು ಇತ್ತೀಚೆಗೆ ವಿವಾಹವಾಗಿದ್ದಾರೆ.
ಕೊಲೆ ಪ್ರಕರಣದಲ್ಲಿ ಧರ್ಮೇಂದ್ರ ಸಿಂಗ್ ಬರೋಬ್ಬರಿ 14 ವರ್ಷಗಳ ಕಾಲ ಜೀವಾವಧಿ ಶಿಕ್ಷೆ(Life Imprisonment) ಅನುಭವಿಸಿ ಹೊರಬಂದಿದ್ದರು. ಆ ವೇಳೆಯೆ ಫಿರೋಜಾ ಜೊತೆ ಸ್ನೇಹ ಬೆಳೆದು ಪ್ರೀತಿ(Love) ಅಂಕುರವಾಗಿದೆ. ನಾಲ್ಕು ವರ್ಷಗಳ ಹಿಂದೆ ಧರ್ಮೇಂದ್ರ ಬಿಡುಗಡೆಯಾದ ನಂತರವೂ ಇವರ ಸಂಬಂಧ ಮುಂದುವರಿದಿದೆ. ಇದೀಗ ಧರ್ಮೇಂದ್ರ ಸಿಂಗ್ ಮತ್ತು ಫಿರೊಲೋಜಾ ಸತಿ-ಪತಿಗಳಾಗಿದ್ದಾರೆ.
ಮೇ 5, 2026 ರಂದು ಛತ್ತರ್‌ಪುರ ಜಿಲ್ಲೆಯಲ್ಲಿ(Chattarpur District) ಇಬ್ಬರೂ ಹಿಂದೂ ಸಂಪ್ರದಾಯದಂತೆ(Hindus tradition) ವಿವಾಹವಾದರು. ಫಿರೋಜಾ ಮುಸ್ಲಿಂ(Muslim) ಮತ್ತು ಧರ್ಮೇಂದ್ರ ಹಿಂದೂ(Hindu) ಆಗಿದ್ದರಿಂದ ಫಿರೋಜಾ ಕುಟುಂಬದವರು ಮದುವೆಗೆ ಹಾಜರಾಗಿರಲಿಲ್ಲ. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ನ(Vishwa Hindu Parishad) ಪದಾಧಿಕಾರಿಗಳು ಫಿರೋಜಾ ಅವರ ಪರವಾಗಿ ‘ಕನ್ಯಾದಾನ’ ಮಾಡುವ ಮೂಲಕ ಮದುವೆ ಶಾಸ್ತ್ರವನ್ನ ಮುಗಿಸಿದ್ದಾರೆ.
ಇದನ್ನು ಓದಿ : ಕೈಗಾ ಸಮೀಪವೇ ನಿಯಂತ್ರಣ ತಪ್ಪಿ ಬಿದ್ದ ಬೃಹತ್ ಯಂತ್ರ ವಾಹನ. ಸಂಚಾರ ಅಸ್ತವ್ಯಸ್ತ.
