ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಶಿರಸಿ(Sirsi) : ಉತ್ತರಕನ್ನಡ(Uttarakannada) ಜಿಲ್ಲೆಯ ಶಿರಸಿಯಲ್ಲಿ ಅಂಧ ವಿದ್ಯಾರ್ಥಿನಿಯೊಬ್ಬಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ(SSLC Examination Board) ನ್ಯಾಯ ಒದಗಿಸಿದೆ.
ಶಿರಸಿ ಉರ್ದು ಯುನಿಯನ್ ಪ್ರೌಢ ಶಾಲೆಯ(Sirsi Urdu Union Highschool) ವಿದ್ಯಾರ್ಥಿನಿ ಲೀಸಾ ಖಾನಮ್ ಅವರ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ(SSLC Results) ನಡೆದಿದ್ದ ತಾಂತ್ರಿಕ ದೋಷದಿಂದಾಗಿ ಅವರು ಅನ್ಯಾಯವಾಗಿ ಅನುತ್ತೀರ್ಣಳಾಗಿದ್ದರು. ಸಮಾಜ ವಿಜ್ಞಾನ(Social Science) ವಿಷಯದಲ್ಲಿ ಪರೀಕ್ಷೆಗೆ ಹಾಜರಾಗಿದ್ದರೂ, ಫಲಿತಾಂಶದಲ್ಲಿ ‘ಅಬ್ಸೆಂಟ್’ ಎಂದು ನಮೂದಿಸಿದ್ದರಿಂದ ಅವರ ರಿಸಲ್ಟ್ ಫೇಲ್ ಆಗಿತ್ತು.
ಈ ಕುರಿತು ವಿದ್ಯಾರ್ಥಿನಿ ಹಾಗೂ ಕುಟುಂಬದವರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಪರೀಕ್ಷಾ ಮಂಡಳಿ ತಕ್ಷಣ ಕ್ರಮ(Examination Board Quickly Action) ಕೈಗೊಂಡು ದೋಷವನ್ನು ಸರಿಪಡಿಸಿದೆ. ‘ಟೆಕ್ನಿಕಲ್ ಸಮಸ್ಯೆಯಿಂದ ಈ ರೀತಿಯ ದೋಷ ಉಂಟಾಗಿದೆ, ದಯವಿಟ್ಟು ಮನನೊಂದುಕೊಳ್ಳಬೇಡಿ’ ಎಂದು ಮಂಡಳಿ ಸ್ಪಷ್ಟನೆ ನೀಡಿದೆ.
ದೋಷ ಸರಿಪಡಿಸಿದ ಬಳಿಕ ಲೀಸಾ ಖಾನಮ್ ಅವರಿಗೆ ಸಮಾಜ ವಿಜ್ಞಾನದಲ್ಲಿ 97 ಅಂಕಗಳನ್ನು ನೀಡಲಾಗಿದೆ. ಒಟ್ಟು 625 ಅಂಕಗಳಲ್ಲಿ 603 ಅಂಕಗಳನ್ನು ಗಳಿಸಿ ಅವರು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾರೆ.
ಸರಿಪಡಿಸಿದ ಫಲಿತಾಂಶವನ್ನು ನೋಡಿ ಲೀಸಾ ಖಾನಮ್ ಹಾಗೂ ಅವರ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ಇಂಗ್ಲಿಷ್ ಹಾಗೂ ಎಕನಾಮಿಕ್ಸ್ ವಿಷಯಗಳಲ್ಲಿ ಹೆಚ್ಚಿನ ಅಂಕಗಳ ನಿರೀಕ್ಷೆಯಿದ್ದು, ಈ ಎರಡು ವಿಷಯಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವರು ಮುಂದಾಗಿದ್ದಾರೆ.
ಒಟ್ಟಿನಲ್ಲಿ, ಪರೀಕ್ಷಾ ಮಂಡಳಿಯ ತ್ವರಿತ ಕ್ರಮದಿಂದ ವಿದ್ಯಾರ್ಥಿನಿಗೆ ನ್ಯಾಯ ದೊರೆತಿದ್ದು, ಪ್ರಕರಣಕ್ಕೆ ಸಂತೋಷಕರ ಅಂತ್ಯ ದೊರೆತಿದೆ.
ಇದನ್ನು ಓದಿ : ಪರೀಕ್ಷೆಯಲ್ಲಿ ಉತ್ತೀರ್ಣನಾದ ಖುಷಿಗೆ ಈಜಲು ತೆರಳಿದ ಬಾಲಕನಿಗೆ ಆಗಿದ್ದೇನು?
ಪ್ರತಿಭಾವಂತ ಅಂಧ ವಿದ್ಯಾರ್ಥಿನಿಯನ್ನ ಗೈರು ಮಾಡಿ ಫೇಲ್ ಮಾಡಿದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ
ರಾಜ್ಯಕ್ಕೆ ಮೂರನೇ, ಶಿರಸಿ ಶೈಕ್ಷಣಿಕ ಜಿಲ್ಲೆಗೆ ಮೊದಲ ಸ್ಥಾನ ಪಡೆದ ಲತಿಕಾ ಮೊಗೇರ. ಬಡ ಟೀ ಅಂಗಡಿಯವನ ಮಗಳ ಯಶೋಗಾಥೆ.
