ಗೋಕರ್ಣ(GOKARN) : ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮಗುಚಿದ ಪರಿಣಾಮವಾಗಿ ಓರ್ವ ಮೀನುಗಾರ(FISHERMAN) ಸಮುದ್ರದಲ್ಲಿ ನಾಪತ್ತೆಯಾದ ಘಟನೆ ನಡೆದಿದೆ. ಇಬ್ಬರು ಸಾಹಸಪಟ್ಟು ಈಜಿ ಬಚಾವ್ ಆಗಿದ್ದಾರೆ.
ವಿನೋದ್ ಅಂಬಿಗ ( 37) ನಾಪತ್ತೆಯಾದ ಮೀನುಗಾರ ಎಂದು ಹೇಳಲಾಗಿದೆ. ಕುಮಟಾ ತಾಲೂಕಿನ ಅಘನಾಶಿನಿ(AGHANASHINI) ನದಿಯ ಬೆಲೆಕಾನ್ ಬಳಿ ಈ ಅವಘಡ ಸಂಭವಿಸಿದೆ.
ಒಟ್ಟು ಮೂವರು ಮೀನುಗಾರರು ಬೆಳಿಗ್ಗೆ ಮೀನು ಹಿಡಿಯಲು ದೋಣಿಯ ಮೂಲಕ ತೆರಳಿದ್ದರು. ಕಡಲ ಅಲೆಗೆ ದೋಣಿಯಲ್ಲಿದ್ದ ಮೂವರೂ ಆಯಾ ತಪ್ಪಿ ಬಿದ್ದಿದ್ದರು. ಇದರಲ್ಲಿ ಇಬ್ಬರು ಈಜಿ ದಡ ಸೇರಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ : ಸೊಸೆಗೆ ಪ್ಯಾನ್ಸಿ ಸ್ಟೋರ್ ಮಾಡಿಕೊಟ್ಟ ಅತ್ತೆ