ಕಾರವಾರ : ಜಿಲ್ಲೆಯಲ್ಲಿ ಮುಂದುವರಿದಿರುವುದರಿಂದ ಜುಲೈ 18 ರಂದು ಶಾಲಾ ಕಾಲೇಜುಗಳಿಗೆ ರಜೆ (SCHOOL COLLEGE HOLIDAY) ಮುಂದುವರಿಸಲಾಗಿದೆ.
ಕಾರವಾರ, ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಶಿರಸಿ, ಸಿದ್ದಾಪುರ, ಯಲ್ಲಾಪುರ, ದಾಂಡೇಲಿ ಹಾಗೂ ಜೋಯಿಡಾ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 34 ರಡಿ ನಾಳೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ (DC LAKSHMIPRIYA) ಅದೇಶಿಸಿದ್ದಾರೆ.
ಆದರೆ ಮುಂಡಗೋಡು (MUNDGOD) ಮತ್ತು ಹಳಿಯಾಳ (HALIYAL) ತಾಲೂಕಿನ ಯಾವುದೇ ರಜೆ ಇರುವುದಿಲ್ಲ. ಈಗಾಗಲೇ ಹವಮಾನ ಇಲಾಖೆ ಮಳೆ ಹೆಚ್ಚಾಗುತ್ತಿರುವುದರಿಂದ ರೇಡ್ ಅಲರ್ಟ್ ಘೋಷಿಸಿದೆ.