ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಅಹಮದಾಬಾದ್ (Ahamadab): ಭವಿಷ್ಯದ ಬಗ್ಗೆ ಹಲವು ಕನಸುಗಳನ್ನು ಇಟ್ಟುಕೊಂಡು ನೂರಾರು ಮಂದಿ ವಿಮಾನ ದುರಂತದಲ್ಲಿ (Ahmedabad Plane Tragedy) ಸಾವಾನ್ನಪ್ಪಿದ್ದಾರೆ. ಓರ್ವ ವ್ಯಕ್ತಿ ಹೊರತುಪಡಿಸಿ ವಿಮಾನದಲ್ಲಿದ್ದವರೆಲ್ಲರೂ ಸುಟ್ಟು ಕರಕಲಾಗಿದ್ದಾರೆ. ದುರಂತದಲ್ಲಿ ಸಾವನ್ನಪ್ಪಿದವರ ಕಥೆಗಳು ಒಂದೊಂದಾಗಿ ಗೊತ್ತಾಗುತ್ತಿವೆ.
ತಮ್ಮ ಪತ್ನಿಯ ಕೊನೆ ಆಸೆ ಈಡೇರಿಸಲು ಆಕೆಯ ಚಿತಾಭಸ್ಮ ವಿಸರ್ಜನೆಗೆ ಲಂಡನ್ ನಿಂದ ಅಹಮದಾಬಾದ್ ಗೆ(London to Ahamedabad) ಬಂದ ವ್ಯಕ್ತಿಯೋರ್ವರು ತಾವೇ ಸುಟ್ಟು ಬೂದಿಯಾಗಿದ್ದಾರೆ ಎಂಬ ಕಥೆ ಎಂಥವರನ್ನೂ ಭಾವುಕರನ್ನಾಗಿಸುತ್ತೆ.
ಗುಜರಾತಿನ (Gujrat) ಅಮ್ರೇಲಿ ಜಿಲ್ಲೆಯ ವಾಡಿಯಾ ಗ್ರಾಮದ ಮೂಲದ ಇದೀಗ ಲಂಡನ್ ನಿವಾಸಿಯಾಗಿರುವ ಅರ್ಜುನ್ ಬಾಯ್ ಮನುಭಾಯ್ ಪಟೋಲಿಯಾ ಕೆಲವೇ ದಿನಗಳ ಹಿಂದೆ ಅಹಮದಾಬಾದ್ಗೆ ಆಗಮಿಸಿದ್ದರು. ಅವರ ಪತ್ನಿ ಭಾರತಿಬೆನ್ ವಾರದ ಹಿಂದೆ ಲಂಡನ್ನಲ್ಲಿ ನಿಧನರಾಗಿದ್ದರು. ಅವರ ಪೂರ್ವಜರ ಗ್ರಾಮದ ನೀರಿನಲ್ಲಿಯೇ ಅವರ ಚಿತಾಭಸ್ಮವನ್ನು ವಿಸರ್ಜಿಸಬೇಕೆಂಬುದು ಅವರ ಅಂತಿಮ ಆಸೆಯಾಗಿತ್ತು. ಹೀಗಾಗಿ ಅರ್ಜುನ್ ಬಾಯ್ ತಮ್ಮ 8 ಮತ್ತು 4 ವರ್ಷದ ಸಣ್ಣ ಹೆಣ್ಣುಮಕ್ಕಳನ್ನು ಲಂಡನ್ನಲ್ಲಿಯೇ ಬಿಟ್ಟು ಅರ್ಜುನ್ ಒಬ್ಬಂಟಿಯಾಗಿ ಭಾರತಕ್ಕೆ ಬಂದಿದ್ದರು. ಹೆಂಡತಿಯ ಅಂತಿಮ ವಿಧಿಯನ್ನು ಈಡೇರಿಸಿದ ನಂತರ ಗುರುವಾರ ಅವರು ಲಂಡನ್ಗೆ ವಾಪಾಸ್ ಹೊರಟಿದ್ದರು. ಆಗಲೇ ವಿಮಾನ ಅಪಘಾತವಾಗಿ ಅವರು ಸಾವನ್ನಪ್ಪಿದ್ದಾರೆ. ದುರಂತದಿಂದ ಅವರ ಮಕ್ಕಳು ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡು ವಿದೇಶದಲ್ಲಿ ಅನಾಥರಾಗಿದ್ದಾರೆ.
ಅಮ್ಮನನ್ನು ಕಳೆದುಕೊಂಡ ದುಃಖದಲ್ಲಿದ್ದ ಇಬ್ಬರು ಪುಟ್ಟ ಮಕ್ಕಳು ಲಂಡನ್ನಲ್ಲಿ ತಮ್ಮ ತಂದೆಗಾಗಿ ಕಾಯುತ್ತಿದ್ದರು. ವಾರದೊಳಗೆ ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದೇವೆಂದು ಅವರಿಗೆ ತಿಳಿದಿಲ್ಲ. ಅವರಿನ್ನೂ ಅಪ್ಪನಿಗಾಗಿ ಕಾಯುತ್ತಿದ್ದಾರೆ. ವಿಧಿಯ ಆಟಕ್ಕೆ ಪುಟ್ಟ ಮಕ್ಕಳಿಗೆ ಎಂಥ ಸ್ಥಿತಿ ಎದುರಾಗಿದೆ.
ಇದನ್ನು ಓದಿ : ಮತ್ತೆ ಮುಳುಗಿದ ಕಾರವಾರ. ಒಂದುವರೆ ದಶಕಗಳ ನಂತರ ಮತ್ತೆ ಗಂಡಾಂತರ.
ಅಹಮದಾಬಾದ್ ದುರಂತ. ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ.
ಮುಂಡಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಮಳೆ ದಾಖಲು. ನಿರಂತರ ವರ್ಷಧಾರೆಯಿಂದ ಜನಜೀವನ ಅಸ್ತವ್ಯಸ್ತ.