ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ನವದೆಹಲಿ (Newdelhi) :   ಪಂಜಾಬ್‌ನ ಅಟ್ಟಾರಿ ಗಡಿಯಲ್ಲಿ ರೇಂಜರ್‌ಗಳಿಂದ ಸೆರೆಹಿಡಿಯಲ್ಪಟ್ಟ ಭಾರತೀಯ ಬಿಎಸ್‌ಎಫ್ ಯೋಧ(BSF Soldier) ಪೂರ್ಣಮ್ ಶಾ ಅವರನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿದೆ.

ಏಪ್ರಿಲ್ 23 ರಂದು ಪಂಜಾಬ್‌ನ ಫಿರೋಜ್‌ಪುರ(Panjab Pirozpur) ಸೆಕ್ಟರ್‌ನಲ್ಲಿ ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿಯನ್ನು (ಐಬಿ) ದಾಟಿದ ನಂತರ 182 ನೇ ಬಿಎಸ್‌ಎಫ್ ಬೆಟಾಲಿಯನ್‌ನ ಕಾನ್‌ಸ್ಟೆಬಲ್  ಪೂರ್ಣಮ್ ಅವರನ್ನು ಪಾಕ್ ರೇಂಜರ್‌ಗಳು ಸೆರೆ ಹಿಡಿದಿದ್ದರು. 

ಪೂರ್ಣಮ್ ಬಂಧನದ ಬೆನ್ನಲ್ಲೇ ಭಾರತ ಸಹ ಪಾಕಿಸ್ತಾನದ ಯೋಧನೊಬ್ಬನನ್ನು ಜೀವಂತವಾಗಿ ಸೆರೆಹಿಡಿದಿತ್ತು. ಕೂಡಲೇ ಎಚ್ಚೆತ್ತುಕೊಂಡ ಪಾಕಿಸ್ತಾನವು ಈಗ ತನ್ನ ಯೋಧನ ಬಿಡುಗಡೆಗಾಗಿ ಭಾರತದ ಯೋಧನನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ.

ಪಾಕಿಸ್ತಾನ – ಭಾರತ ನಡುವಿನ ಜೀನಿವಾ ಒಪ್ಪಂದ ಪ್ರಕಾರ  ಪರಸ್ಪರ ದೇಶಗಳು ಯೋಧರು ಸೆರೆಸಿಕ್ಕರೆ ಚಿತ್ರಹಿಂಸೆ ನೀಡದೇ ವಾಪಸ್ ಮರಳಿಸಬೇಕಿದೆ.

ಇಂದು ವಾಘಾ ಗಡಿಯಲ್ಲಿ (Wagha Boarder) ಗಡಿ ಭದ್ರತಾ ಪಡೆಯ ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನು ಮರಳಿ ಪಡೆಯಲಾಗಿದೆ.   ಬಿಎಸ್‌ಎಫ್ ವತಿಯ ಸತತವಾದ ಪ್ರಯತ್ನಗಳಿಂದ ಪೂರ್ಣಮ್ ಸ್ವದೇಶಕ್ಕೆ ಮರಳುವಂತಾಗಿದೆ.

ಇದನ್ನು ಓದಿ : ಪೊಲೀಸ್ ಕಾರ್ಯಾಚರಣೆ. ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ.

ಹಾಡುವಳ್ಳಿಯ ನಾಲ್ವರ ಕೊ ಪ್ರಕರಣ. ತಂದೆಗೆ ಜೀವಾವಧಿ. ಮಗನಿಗೆ ಮರಣ ದಂಡನೆ ಶಿಕ್ಷೆ.

ಸಿಡಿಲು ಬಡಿದು ಮನೆಗೆ ಹಾನಿ. ಸ್ವಲ್ಪದರಲ್ಲಿ ಪಾರಾದ ಮನೆಯವರು.