ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಅಂಕೋಲಾ(Ankola): ತಾಲೂಕಿನ ವಾಸರಕುದ್ರಿಗೆ ಗ್ರಾ.ಪಂ. ವ್ಯಾಪ್ತಿಯ ಉಳಗದ್ದೆ ಗ್ರಾಮದಲ್ಲಿ ಯುವಕನೊಬ್ಬನು ಮೇಲೆ ಚಿರತೆ ದಾಳಿ (Panther Attack) ನಡೆಸಿದ ಘಟನೆ ನಡೆದಿದೆ.
ಸಂತೋಷ ಹೂವಣ್ಣ ಗೌಡ (24) ಚಿರತೆ ದಾಳಿಯಿಂದ ಗಾಯಗೊಂಡವನು. ಅಂಕೋಲಾ(Ankola) ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ದೆ ನೀಡಲಾಗಿದೆ. ಶನಿವಾರ ಬೆಳಿಗ್ಗೆ ಅವರ ಮನೆಯ ಪಕ್ಕದ ಹೊಸ ಮನೆಯಲ್ಲಿ ಚಿರತೆ(Panther) ಅವಿತುಕೊಂಡಿತ್ತು ಎನ್ನಲಾಗಿದೆ. ಆ ಮನೆಯಲ್ಲಿ ಇಟ್ಟಿರುವ ಬಟ್ಟೆ ತರಲು ಹೋದ ಯುವತಿಯೋರ್ವಳು ಚಿರತೆಯನ್ನು ಕಂಡು ಬೊಬ್ಬೆ ಹೊಡೆದಿದ್ದಾಳೆ. ಆಗ ಸಂತೋಷ ಗೌಡನು ಮನೆಯಿಂದ ಹೊರಗಡೆ ಬರುತ್ತಿರುವ ಸಂದರ್ಭದಲ್ಲಿ ಆತನ ಮೇಲೆ ಚಿರತೆ ದಾಳಿ ಮಾಡಿದೆ. ದಾಳಿಯಿಂದ ಎರಡು ಕೈಗಳಿಗೆ ಪರಚಿದ ಗಾಯಗಳಾಗಿದೆ. ಅದೃಷ್ಟವಶಾತ್ ಹೆಚ್ಚಿನ ಅಪಾಯದಿಂದ ಪಾರಾಗಿದ್ದಾನೆ. ತಕ್ಷಣ ಮನೆಯವರು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಅಂಕೋಲಾ(Ankola) ಪಿಐ ಚಂದ್ರಶೇಖರ ಮಠಪತಿ ಮತ್ತು ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿರತೆಯ ಮನೆಯೊಗಳಗೆ ಪ್ರವೇಶಿಸಿ ಮನುಷ್ಯರ ಮೇಲೆ ದಾಳಿ ಮಾಡಿರುವುದು ಗ್ರಾಮಸ್ಥರ ಆತಂಕ ಹೆಚ್ಚಿಸಿದ್ದು, ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮುಂದೆ ಮತ್ತೆ ಹೀಗಾಗದಂತೆ ಸೂಕ್ತ ಕ್ರಮಕೈಗೊಂಡು ಜನರನ್ನು ಮತ್ತು ಜಾನುವಾರಗಳನ್ನು ರಕ್ಷಣೆ ಮಾಡಲಿ ಎಂದು ಅಗಸೂರು ಗ್ರಾ.ಪಂ. ಸದಸ್ಯ ಆನಂದು ಗೌಡ ಆಗ್ರಹಿಸಿದ್ದಾರೆ.
ಇದನ್ನು ಓದಿ : ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ. ಆತಂಕಗೊಂಡ ವಾಹನ ಸವಾರರು
ಅಮ್ಮ ತೀರಿ ಹೋದ ವಾರದೊಳಗೆ ಅಪ್ಪನ ಸಾವು. ವಿಮಾನ ದುರಂತದಲ್ಲಿ ಅನಾಥರಾದ ಪುಟ್ಟ ಮಕ್ಕಳು.