ಕಾರವಾರ(KARWAR) : ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ (MINORITY) ಓಲೈಕೆಯ ರಾಜಕಾರಣದಲ್ಲಿ ಮಘ್ನವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ(VISHWESHAR HEGADE KAGERI) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಕಾಗೇರಿ, ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್(CONGRES GOVERNMENT VOTE BANK) ಭದ್ರಪಡಿಸಿಕೊಳ್ಳಲು ಮುಂದಾಗಿದೆಯೇ ಹೊರತು ರಾಜ್ಯದ ಅಭಿವೃದ್ಧಿ, ಜನ ಸಾಮಾನ್ಯರ ಹಿತ, ಸರ್ವಾಂಗೀಣ ಉನ್ನತಿಗೆ ಕಾರ್ಯಕ್ರಮ ರೂಪಿಸುತ್ತಿಲ್ಲ. ಕೇವಲ ತುಷ್ಟಿಕರಣದ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಿಂದ ಇಲ್ಲಿವರೆಗೆ ಮುಂದುವರಿದ ಭಾಗ ನಾಗಮಂಗಲದ ಘಟನೆ(NAGAMANGALA INCIDENT) ಸಾಕ್ಷಿಯಾಗಿದೆ. ನಮ್ಮ ರಾಜ್ಯದಲ್ಲಿ ಕಾನೂನಿನ ಭಯವಿಲ್ಲದ ವಾತಾವರಣ ನಿರ್ಮಾಣವಾಗಿದೆ. ಅಪರಾಧಿಗಳಿಗೆ ಇದು ತಮ್ಮದೇ ಸರ್ಕಾರ ಎಂದು ಅನಿಸಿರುವುದು ದುರ್ದೈವ ಎಂದರು.
ರಾಜ್ಯದ ಜನ ಜಾಗೃತರಾಗಿದ್ದಾರೆ. ಪ್ರತಿಪಕ್ಷವಾಗಿ ನಾವು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ ಬಹುಸಂಖ್ಯಾತ ಹಿಂದೂಗಳ (HINDUS) ಭಾವನೆಗಳನ್ನ ಗೌರವಿಸದ ಸರ್ಕಾರ ಇದು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಇದನ್ನು ಓದಿ : ಶಿರಸಿಯ ಗಣೇಶೋತ್ಸವ ಮೆರವಣಿಗೆಯಲ್ಲಿ ಭಾವೈಕ್ಯತೆ ಸನ್ನಿವೇಶ