ಭಟ್ಕಳ(BHATKAL) : ತಾಲೂಕಿನ ಮುರ್ಡೇಶ್ವರ(MURDESHWAR) ಕಡಲತೀರಕ್ಕೆ ಬರುವ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅಧಿಕಾರಿಗಳ ನಡೆಗೆ ಪ್ರವಾಸಿಗರಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಅಕ್ಟೋಬರ್ ಐದರಿಂದ ಮುರ್ಡೇಶ್ವರ ಕಡಲತೀರದಲ್ಲಿ ಜಲ ಸಾಹಸ ಚಟುವಟಿಕೆ ಆರಂಭವಾಗಿತ್ತು. ಅಧಿಕಾರಿಗಳ ಆದೇಶದಿಂದ ಜಲಸಾಹಸ ಮಾಡಲು ಬಯಸಿದ ಪ್ರವಾಸಿಗರಿಗೆ ಬಾರೀ ನಿರಾಶೆಯಾಗಿದೆ. ಅಲ್ಲದೇ ಇದನ್ನೇ ನಂಬಿ ಜೀವನ ಮಾಡುವ ಸಿಬ್ಬಂದಿಗಳ ಮೇಲೆ ಪರಿಣಾಮ ಬೀರಿದೆ.
ಪ್ರತಿನಿತ್ಯ ಮುರ್ಡೇಶ್ವರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಇಲ್ಲಿ ಬಂದವರು ದೇವರ ದರ್ಶನದ ಜೊತೆಗೆ ಕಡಲತೀರದಲ್ಲಿ(BEACH) ಆಟವಾಡಲು ಇಷ್ಟಪಡುತ್ತಾರೆ. ರಜಾ ದಿನಗಳಲ್ಲಂತು ಪ್ರವಾಸಿಗರ ಸಂಖ್ಯೆ ಮಿತಿ ಮೀರುತ್ತದೆ. ಸಮುದ್ರವೇ ನೋಡದ ಮಂಡ್ಯ(MANDYA), ಮೈಸೂರು(MYSORE), ಬೆಂಗಳೂರು(BANGLORE) ಸೇರಿದಂತೆ ಅನ್ಯ ರಾಜ್ಯಗಳ ಹುಚ್ಚಾಟ ನಡೆಸ್ತಾರೆ. ಕಡಲಲ್ಲಿ ಮೋಜು ಮಸ್ತಿಯಲ್ಲಿ ತೊಡಗುತ್ತಾರೆ. ಇಲ್ಲಿ ಲೈಫ್ ಗಾರ್ಡ್(LIFE GUARD) ಸಿಬ್ಬಂದಿಗಳು ಸೂಚನೆಯನ್ನ ನೀಡಿದರೂ, ಅವರ ಸೂಚನೆ ದಿಕ್ಕರಿಸಿ ಮುಂದಕ್ಕೆ ತೆರಳಿ ಸಾವನ್ನ ತಂದುಕೊಳ್ಳುತ್ತಾರೆ.
ಹೀಗಾಗಿಯೇ ಭಾನುವಾರದಂದು ಕಾಲೇಜು ಸಿಬ್ಬಂದಿಗಳೊಂದಿಗೆ ಬಂದಿದ್ದ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದಾನೆ. ಇನ್ನೋರ್ವ ವಿದ್ಯಾರ್ಥಿಯನ್ನ ಒಶಿಯನ್ ಅಡ್ವೇಮ್ಚರ್ (OCEAN ADVENTURE) ಸಿಬ್ಬಂದಿಗಳು ಧಾವಿಸಿ ರಕ್ಷಣೆ ಮಾಡಿದ್ದರು. ಅದು ಕೂಡ ಲೈಫ್ ಗಾರ್ಡ್ ಸೂಚನೆ ದಿಕ್ಕರಿಸಿ ವಿಶಾಲ ಕಡಲತೀರದ ಇನ್ನೊಂದು ಕಡೆ ಹೋಗಿದ್ದಕ್ಕೆ ಅನಾಹುತ ಸಂಭವಿಸಿದೆ. ಹೀಗಾಗಿ ಕಡಲತೀರಕ್ಕೆ ಕೆಲ ದಿನಗಳವರೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ ಎಂದು ಭಟ್ಕಳ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಕಡಲತೀರದಲ್ಲಿ ಹಿಂದೆ ಹಲವು ಅನಾಹುತ ಆಗಿವೆ. ಸಾಕಷ್ಟು ಸಂಖ್ಯೆಯ ಪ್ರವಾಸಿಗರನ್ನ ಲೈಫ್ ಗಾರ್ಡ್ ಸಿಬ್ಬಂದಿಗಳು, ಅಡ್ವೆಂಚರ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಆದರೆ ಕಡಲ ತೀರಕ್ಕೆ ಪ್ರವೇಶ ನಿರ್ಬಂಧಿಸಿರಲಿಲ್ಲ. ಆದರೆ ಧಿಡೀರಾಗಿ ಬೀಚ್ ಗೆ ತೆರಳುವ ಗೇಟ್ ಗೆ ಬೀಗ ಹಾಕಲಾಗಿದೆ. ಆದರೆ ಪ್ರವಾಸಿಗರು ಬೇರೆಡೆಯಿಂದ ನುಸುಳಿ ತೀರಕ್ಕೆ ಬರುವ ಸಾಹಸ ಮಾಡುತ್ತಿರುವುದು ಗೊತ್ತಾಗಿದೆ.
ಇಲಾಖೆ ಅಧಿಕಾರಿಗಳು ಪ್ರವಾಸಿಗರಿಗೆ ನಿರಾಶೆಯಾಗದಂತೆ ಕ್ರಮ ಕೈಗೊಳ್ಳಬಹುದು. ಅಗತ್ಯ ರಕ್ಷಣಾ ಸಿಬ್ಬಂದಿಗಳನ್ನ ನಿಯೋಜಿಸಿ ಜಲಸಾಹಸ ಮಾಡುವ ಪ್ರವಾಸಿಗರಿಗೆ ಮಾತ್ರ ಬೀಚ್ ಗೆ ಅವಕಾಶ ಕೊಡಬಹುದು ಎಂದು ಪ್ರವಾಸಿಗರಾದ ಬೆಂಗಳೂರಿನ ದೀಪಕ್ ಎಂಬುವವರು ಹೇಳಿದ್ದಾರೆ.
ಇದನ್ನು ಓದಿ : ಮುರ್ಡೇಶ್ವರದಲ್ಲಿ ಬೆಂಗಳೂರು ವಿದ್ಯಾರ್ಥಿ ಸಾವು
ದೇವಸ್ಥಾನದ ಚಿನ್ನಾಭರಣ ಕದ್ದ ಅರ್ಚಕ ಸೆರೆ
ಗೋವಾ ಪೊಲೀಸರ ಕಾರ್ಯಾಚರಣೆ. ಮಲ್ಪೆ ಬೋಟುಗಳು ವಶಕ್ಕೆ