ನವದೆಹಲಿ(Newdelhi) : ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar hegade kageri) ಅವರು ಇಂದು ನವದೆಹಲಿಯಲ್ಲಿ ರಕ್ಷಣಾ ಮಂತ್ರಿ(Defence minister) ರಾಜನಾಥ್ ಸಿಂಗ್ (Rajanath singh) ಅವರನ್ನು ಭೇಟಿ ಮಾಡಿ ಕಾರವಾರದ(karwar) ಸೀಬರ್ಡ್ ನೌಕಾನೆಲೆಯಿಂದ(Seabird Project) ಉಂಟಾಗಿರುವ ಸಮಸ್ಯೆ ಕುರಿತು ಚರ್ಚಿಸಿದರು.
ನಿರಾಶ್ರಿತರಿಗೆ ಬಾಕಿ ಇರುವ ಭೂ ಪರಿಹಾರವನ್ನು (Land Componsation)ತಕ್ಷಣವೇ ನೀಡುವಂತೆ ಹಾಗೂ ಬಾಕಿ ಇರುವ ನಾನಾ ಸಮಸ್ಯೆಗಳ ಕಡತಗಳನ್ನು ಅತಿ ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಮನವರಿಕೆ ಮಾಡಿದರು.
ನೌಕಾ ನೆಲೆಗಾಗಿ ಭೂಮಿ ಕಳೆದುಕೊಂಡವರಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಸೀಬರ್ಡ್ ನೌಕನೆಲೆಯಲ್ಲಿ ನಡೆಯುವ ಉದ್ಯೋಗ ಪರೀಕ್ಷಾ ಕೇಂದ್ರವನ್ನು ಕಾರವಾರದಲ್ಲಿಯೇ ಸ್ಥಾಪಿಸಬೇಕೆಂದು ಮನವಿ ನೀಡಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಸಕಾರಾತ್ಮಕವಾಗಿ ಸ್ಪಂದಿಸಿದ ರಾಜನಾಥ್ ಸಿಂಗ್ (Rajanath Singh) ಅಧಿಕಾರಿಗಳಿಗೆ ಸೂಚನೆ ನೀಡಿ ಸ್ಪಂದಿಸುವಂತೆ ನಿರ್ದೇಶನ ಮಾಡಿದರು. ಮುಂದಿನ ದಿನಗಳಲ್ಲಿ ಸಮಸ್ಯೆಯುಂಟಾದಲ್ಲಿ ತುರ್ತುಗತಿಯಲ್ಲಿ ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿದರು.
ಇದನ್ನು ಓದಿ : ಹಿರಿಯ ಚಿತ್ರ ಕಲಾವಿದ ನಿಧನ
128 ಪ್ರಕರಣಗಳಲ್ಲಿ ಬೇಕಾದ ಆರೋಪಿ ಅಂದರ್