ಕಾರವಾರ (Karwar): ಹಗಲು ಮನೆಗಳ್ಳತನ ಮಾಡುತ್ತಾ ರಾಜ್ಯ ಹಾಗೂ ಅಂತರರಾಜ್ಯಗಳ 128 ಪ್ರಕರಣಗಳಲ್ಲಿ ತಲೆ ಮರೆಸಿಕೊಂಡ ಕುಖ್ಯಾತ ಕಳ್ಳನೋರ್ವನನ್ನ (Thieves)ಕಾರವಾರ ನಗರ ಠಾಣೆ ಪೊಲೀಸರು(Karwar Town Police) ಬಂಧಿಸಿದ್ದಾರೆ.
ಪಂಜಾಬ (Panjab) ರಾಜ್ಯದ ಅಮೃತಸರ ಗೋಲ್ಡನ ಟೆಂಪಲ್ (Amrutasara Golden Temple) ಹತ್ತಿರ ದಸ್ತಗಿರಿ ಮಾಡಲಾಗಿದೆ. ಸುಮೀರ್ @ ಗುಲ್ಲು @ ಸ್ಯಾಮ್ @ಜ್ಯಾಕ್ @ ಜಾನ್ @ ಸಮೀರ ತಂದೆ ಸತ್ಪಾಲ್ ಶರ್ಮಾ @ ಶರ್ಮ (40 ) ಬಂಧಿತ. ಮೂಲತಃ ಪಂಜಾಬಿನ ಜಲಂದರ ನಗರದ ನಿವಾಸಿಯಾಗಿದ್ದು,ಹೊನ್ನಾವರದ ದುರ್ಗಾಕೇರಿ ನಿವಾಸಿಯಾಗಿದ್ದಾನೆ.
ನವೆಂಬರ್ 7ರಂದು ಕಾರವಾರ ನಗರದ(Karwar Town) ಆಶ್ರಮರೋಡದಲ್ಲಿರುವ(Ashram Road) ಅಭಿಮಾನಶ್ರೀ ಅಪಾರ್ಟಮೆಂಟನ ಪ್ಲಾಟ್‌ನಲ್ಲಿ ಹಗಲು ಕಳ್ಳತನವಾದ ಬಗ್ಗೆ ಪ್ಲಾಟಿನ ಮಾಲೀಕರಾದ ಪ್ರೀಯಾ ಅಂತೋನಿ ಪರ್ನಾಂಡೀಸ್ ಎಂಬುವವರು ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪತ್ತೆ ಮಾಡಲು 3 ತಂಡಗಳನ್ನು ರಚಿಸಿದ್ದರು. ಕಾರವಾರ ಶಹರ ಪೊಲೀಸ ಠಾಣೆಯ ಪೊಲೀಸ ನಿರೀಕ್ಷಕರಾದ ರಮೇಶ.ಶಂ.ಹೂಗಾರ, ಪಿಎಸ್ಐ ರವೀಂದ್ರ ಬಿರಾದರ, ಸಿಬ್ಬಂದಿಗಳಾದ ಸುರಜ ಕೊಠಾರಕರ, ಹಸನ ಕುಟ್ಟಿ. ಗಿರೀಶಯ್ಯ ಎಂ.ಎಸ್ ತಂಡವು ಕಾರ್ಯಾಚರಣೆ ನಡೆಸಿತ್ತು.
ಸಿನಿಮಯ ರೀತಿಯಲ್ಲಿ ಬೆನ್ನುಹತ್ತಿ ಪಂಜಾಬ ರಾಜ್ಯದ ಅಮೃತಸರ ಗೋಲ್ಡನ ಟೆಂಪಲ್ ಬಂಧಿಸಿದ್ದಾರೆ. ಆತನಿಂದ 34.026 ಗ್ರಾಂ. ಬಂಗಾರದ ವಡವೆಗಳನ್ನು ಹಾಗೂ 03 ಲಕ್ಷ ರೂಪಾಯಿ ನಗದು ಹಣ ಸೇರಿ ಒಟ್ಟು ಸುಮಾರು 5 ಲಕ್ಷದಷ್ಟು ಮಾಲನ್ನು ಜಪ್ತ ಪಡಿಸಿಕೊಳ್ಳಲಾಗಿದೆ.
ಆರೋಪಿತನು ಓರ್ವ ಅಂತರ ರಾಜ್ಯ ಕುಖ್ಯಾತ ಕಳ್ಳನಾಗಿದ್ದು, ಇತನ ಮೇಲೆ ಕರ್ನಾಟಕ ರಾಜ್ಯದ ಬೆಂಗಳೂರು ನಗರದ (Banglore)11 ಪೊಲೀಸ ಠಾಣೆಗಳಲ್ಲಿ 106 ಪ್ರಕರಣ, ಗೋವಾ(Goa) ರಾಜ್ಯದ 03 ಪೊಲೀಸ ಠಾಣೆಗಳಲ್ಲಿ 07 ಪ್ರಕರಣಗಳು, ಉತ್ತರ ಪ್ರದೇಶದ (Uttarapradesh)ನೋಯ್ದಾ (Noida) ನಗರದಲ್ಲಿ 04 ಪೊಲೀಸ ಠಾಣೆಗಳಲ್ಲಿ 11 ಪ್ರಕರಣಗಳು, ಮತ್ತು ಪಂಜಾಬ(Panjab) ರಾಜ್ಯದ 02 ಪೊಲೀಸ ಠಾಣೆಗಳಲ್ಲಿ 04 ಪ್ರಕರಣಗಳು ದಾಖಲಾಗಿದ್ದು ಹೀಗೇ ಒಟ್ಟು 128 ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳಲ್ಲಿ ಆರೋಪಿತನು ತಲೆ ಮರೆಸಿಕೊಂಡು ನ್ಯಾಯಲಯಗಳಿಗೆ ಹಾಜರಾಗದೇ ತಿರುಗಾಡುತ್ತಿದ್ದುದರಿಂದ ಇತನ ಮೇಲೆ ಹಲವು ನ್ಯಾಯಲಯಗಳಲ್ಲಿ ಒಟ್ಟು 34 ಪ್ರಕರಣಗಳಲ್ಲಿ ಪ್ರೋಕ್ಷೇಮೇಶನ್ ವಾರಂಟ್ ಮತ್ತು 37 ಪ್ರಕರಣಗಳಲ್ಲಿ ಜಾಮೀನು ರಹಿತ ವಾರಂಟ್‌ಗಳು ಮತ್ತು ಇನ್ನೂಳಿದ ಪ್ರಕರಣಗಳು ವಿಚಾರಣೆಯಲ್ಲಿರುವುದು ಗೊತ್ತಾಗಿವೆ.
ಪ್ರಕರಣವನ್ನು ಭೇದಿಸಲು ಎಸ್ಪಿ ನಾರಾಯಣ ಎಮ್., ಆಡಿಷನಲ್ ಎಸ್ಪಿ ಸಿ.ಟಿ.ಜಯಕುಮಾರ, ಜಗದೀಶ ಎಮ್. ಡಿವೈಎಸ್ಪಿ ಎಸ್.ವಿ.ಗಿರೀಶ, ಸಿಪಿಐ ರಮೇಶ ಶಂ, ಹೂಗಾರ, ಬೆರಳು ಮುದ್ರೆ ಘಟಕದ ಪೊಲೀಸ ನಿರೀಕ್ಷಕ ರಾಘವೇಂದ್ರ ನಾಯ್ಕ ಮತ್ತು ನಿಸ್ತಂತು ವಿಭಾಗದ ಪೊಲೀಸ ನಿರೀಕ್ಷಕ ಸಂತೋಷ ಜಾಧವ ಮತ್ತು ಪೊಲೀಸ್ ಉಪ-ನಿರೀಕ್ಷಕರಾದ ಶ್ರೀ ರವೀಂದ್ರ ಬಿರಾದರ, ವಿಶ್ವನಾಥ ನಿಂಗೊಳ್ಳಿ, ಕುಮಾರ ಕಾಂಬಳೆ ಮತ್ತು ಸಿಬ್ಬಂದಿಯವರಾದ ಸೂರಜ ಕೊಠಾರಕರ. ಹಸನ ಕುಟ್ಟಿ, ಗಿರೀಶಯ್ಯ ಎಂ.ಎಸ್. ರಾಜೇಶ ನಾಯಕ, ಮತ್ತುಮಸಾಬ ಪತ್ತೆಖಾನ್, ವಿಶ್ವನಾಥ.ಬಿ.ಟಿ. ಅರ್ಜುನ ದೇಸಾಯಿ, ಉದಯ ಗುನಗಾ, ಪ್ರಕಾಶ ದಂಡಪ್ಪನವರ, ಚಂದ್ರಿಕಾ ಮೊಗೇರ, ವೀಣಾ ಯತ್ನಳ್ಳಿ ಕಾರವಾರ ಶಹರ ಠಾಣೆ(Karwar Town Police) ರವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
ಇದನ್ನು ಓದಿ : ಕಾಂತಾರಾ 1 ಸಿನೆಮಾಕ್ಕೆ ಒಂದಲ್ಲ ಒಂದು ವಿಘ್ನ
ಡಿಪೋ ದಲ್ಲಿ ನಿಂತಿದ್ದ ಸರ್ಕಾರಿ ಬಸ್ ಗೆ ಬೆಂಕಿ