ಕುಂದಾಪುರ(Kundapur) : ಕಾಂತಾರ ಚಿತ್ರದ(Kantara Cinema) ಜ್ಯೂನಿಯರ್ ಕಲಾವಿದರನ್ನು(Junior Artist) ಕರೆದೊಯ್ಯುತ್ತಿದ್ದ ಮಿನಿ ಬಸ್ ಪಲ್ಟಿಯಾದ ಘಟನೆ ಬೈಂದೂರು ತಾಲೂಕಿನ ಕೊಲ್ಲೂರು(Kolluru) ಸಮೀಪದ ಜಡ್ಕಲ್ ಬಳಿ ಸಂಭವಿಸಿದೆ.

ಜಡ್ಕಲ್ ಮುದೂರಿನಲ್ಲಿ ಚಿತ್ರೀಕರಣ (Shooting) ಮುಗಿಸಿ ಕೊಲ್ಲೂರು(Kolluru) ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಾಂತಾರ 1 (Kantara 1) ಚಿತ್ರದ ಶೂಟಿಂಗ್ ಮುಗಿಸಿ ಕೊಲ್ಲೂರಿಗೆ ಹೋಗುತ್ತಿದ್ದ ವೇಳೆ ಬಸ್ ಪಲ್ಟಿಯಾಗಿದೆ. ಮಿನಿ ಬಸ್ ನಲ್ಲಿ 20 ಜ್ಯೂನಿಯರ್ ಕಲಾವಿದರು ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ 6 ಜನರಿಗೆ ಗಂಭಿರ ಗಾಯವಾಗಿದೆ.

ಗಾಯಗೊಂಡವರಿಗೆ ಜಡ್ಕಲ್ ಮತ್ತು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಕೊಲ್ಲೂರು ಠಾಣಾ ಪೋಲಿಸರು(Kolluru Station Police) ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಕುಂದಾಪುರ ಭಾಗದಲ್ಲಿ ಕಾಂತಾರಾ 1 ಸಿನೆಮಾದ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿ ಬಾರೀ ಗಾತ್ರದ ಸೆಟ್ ಹಾಕಲಾಗಿದ್ದು, ಕೆಲವು ದಿನಗಳ ಹಿಂದೆ ಶೆಡ್ ಒಂದಕ್ಕೆ ಬೆಂಕಿ ತಗುಲಿತ್ತು. ಇದರ ಬೆನ್ನಲ್ಲೇ ಮಿನಿ ಬಸ್ ಪಲ್ಟಿ ಆಗಿರೋದು ಭೀತಿಗೆ ಕಾರಣವಾಗಿದೆ.

ಇದನ್ನು ಓದಿ : ಡಿಪೋದಲ್ಲಿದ್ದ ಬಸ್ ಗೆ ಬೆಂಕಿ

ಅಪಾಯಕ್ಕೆ ಸಿಲುಕಿದ ಯುವತಿಯರ ರಕ್ಷಣೆ

ನೇತ್ರಾಣಿಯಲ್ಲಿ ನಟ ಡಾಲಿ ಧನಂಜಯ್