ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ಅತ್ತಿಗೆ ಜೊತೆ ಅಕ್ರಮ‌ ಸಂಬಂಧ ಇರಿಸಿಕೊಂಡ ತಮ್ಮನೋರ್ವ ಅಣ್ಣನನ್ನ ಕೊಲೆಗೈದ ಧಾರುಣ ಘಟನೆ ಶಿರಸಿಯ ಸಿಂಗನಮನೆ(Sirsi singanamane) ಬಳಿ ನಡೆದಿದೆ.

ಪರಮೇಶ್ವರ ಬಾಬು ನಾಯ್ಕ(35) ಕೊಲೆಯಾದ ದುರ್ದೈವಿ. ಜೂನ್ 25ರ ಸಂಜೆ 112ಗೆ ಫೋನ್ ಕರೆ ಬಂದಿತ್ತು. ಇಡ್ತಳ್ಳಿ ಬಳಿಯ ಶಿಂಗನಮನೆಯ ಪರಮೇಶ್ವರ ಬಾಬು ನಾಯ್ಕ ಕಾಣೆಯಾದ(Missing) ಬಗ್ಗೆ ದೂರು ದಾಖಲಿಸಲಾಗಿತ್ತು. 112 ಸಹಾಯವಾಣಿಯ ಪೊಲೀಸರ ಜೊತೆ ಶಿರಸಿ ಗ್ರಾಮೀಣ ಠಾಣೆ(Sirsi Rural Station) ಪೊಲೀಸರು ಸ್ಥಳಕ್ಕೆ ಹೋಗಿ ಹುಡುಕಾಟ ನಡೆಸಿದ್ದರು. ಜೂನ್ 26ರ ಬೆಳಗ್ಗೆ ಅವರ ಮನೆಯಿಂದ 200ಮೀಟರ್ ದೂರದ ಕಾಡಿನಲ್ಲಿ ಶವ ಸಿಕ್ಕಿತ್ತು.

ಪರಮೇಶ್ವರ ಅವರಿಗೆ ಮದುವೆ ಆಗಿ ಎರಡು ಮಕ್ಕಳಿದ್ದಾರೆ. ಅವರ ಚಿಕ್ಕಪ್ಪನ ತಿಮ್ಮಾ ನಾಯ್ಕ ಅವರ ಮಗ ಪರಮೇಶ್ವರ, ಮೃತನ ಪತ್ನಿ ಜೊತೆ ಅಕ್ರಮ ಸಂಬಂಧ(Illegal Relationship) ಹೊಂದಿದ್ದ ಎನ್ನಲಾಗಿದೆ. ಕಳೆದ ಎಂಟು ವರ್ಷಗಳಿಂದಲೂ ಅತ್ತಿಗೆ ಜೊತೆ ಸಂಬಂಧ ಇರಿಸಿಕೊಂಡ ಬಗ್ಗೆ ಕುಟುಂಬದ ನಡುವೆ ಸಾಕಷ್ಟು ಬಾರಿ ಗಲಾಟೆ ನಡೆದಿತ್ತು. ಆದರೆ, ಸಂಸಾರ ಮಾತ್ರ ಸರಿ ದಾರಿಗೆ ಬಂದಿರಲಿಲ್ಲ ಎನ್ನಲಾಗಿದೆ.

ಜೂನ್ 25ರ ರಾತ್ರಿ ವೇಳೆ ಪರಮೇಶ್ವರ ಬಾಬು ನಾಯ್ಕ ಅವರಿಗೆ ಫೋನ್ ಒಂದು ಬಂದಿತು. ಆ ಫೋನಿನಲ್ಲಿ ಮಾತನಾಡುತ್ತ ಹೊರಗೆ ಹೋಗಿದ್ದ ಅವರು ರಾತ್ರಿಯಾದರೂ ಮನೆಗೆ ವಾಪಾಸ್ ಬಂದಿರಲಿಲ್ಲ. ಮರುದಿನ ಬೆಳಗ್ಗೆ ಅವರು ಕೊಲೆಯಾಗಿದ್ದು ವಿವಿಧ ಆಯಾಮದಲ್ಲಿ ತನಿಖೆ ನಡೆಸಿದ ಪೊಲೀಸರು ಅಕ್ರಮ ಸಂಬಂಧದಿಂದ ಸಾವನಪ್ಪಿರುವ ಬಗ್ಗೆ ತಿಳಿದುಕೊಂಡಿದ್ದಾರೆ.

ಬೆರಳಚ್ಚು ತಜ್ಞರ ಜೊತೆ ಶ್ವಾನದಳವೂ ಸ್ಥಳಕ್ಕೆ ಆಗಮಿಸಿ ಆರೋಪಿಯನ್ನ ಗುರುತಿಸಿದೆ ಪರಮೇಶ್ವರ ತಿಮ್ಮ ನಾಯ್ಕ ಎಂಬಾತನನ್ನು ಶಿರಸಿ ಗ್ರಾಮೀಣ ಪೋಲೀಸರು(Sirsi Rural Police) ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.