ಶಿರಸಿ(SIRSI) : ನಗರದ ಭೀಮನಗುಡ್ಡ ಅರಣ್ಯ ಪ್ರದೇಶದ(BHEEMANA GUDDA FOREST) ಹತ್ತಿರ ಅಕ್ರಮವಾಗಿ ಗಾಂಜಾ ಮತ್ತು ಚರಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ(MANGLORE) ಶಕ್ತಿ ನಗರದ ವಿಕ್ರಮ ಯಾನೆ ವಿಕ್ಕಿ ದೇವದಾಸ ಶೆಟ್ಟಿ ಎಂಬಾತನೆ ಬಂಧಿತ ವ್ಯಕ್ತಿ. ಶಿರಸಿ ನಗರ ಠಾಣೆ ಪೊಲೀಸರು(SIRSI TOWN POLICE STATION) ಯೋಜಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯು ಅಕ್ರಮವಾಗಿ ಗಾಂಜಾ ಮತ್ತು ಚರಸ್ ಸಾಗಾಟ ಮಾಡಿಕೊಂಡು ಬಂದು ಭೀಮನಗುಡ್ಡದ ಅರಣ್ಯ ಪ್ರದೇಶದ ಬಳಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಬಂಧಿತನಿಂದ ಅಂದಾಜು 12 ಸಾವಿರ ರೂ ಬೆಲೆಯ 115 ಗ್ರಾಂ ಗಾಂಜಾ, 50 ಸಾವಿರ ರೂ ಮೌಲ್ಯದ 25 ಗ್ರಾಂ ಚರಸ್ ಹಾಗೂ ಕೃತ್ಯಕ್ಕೆ ಬಳಸಲಾದ ಮಾರುತಿ ಅಲ್ಟಾ ಕಾರು(ALTO CAR), ಚಿಲುಮೆ, ರೋಲಿಂಗ್ ಪೇಪರ್, ಗಾಂಜಾ ಕ್ರಷರ್ ಡಬ್ಬ ಮತ್ತು 4,450/- ರೂ ನಗದು ಹಣವನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.
ಎಸ್ಪಿ ಎಂ ನಾರಾಯಣ್ ಮಾರ್ಗದರ್ಶನದಲ್ಲಿ ಡಿಎಸ್ಪಿ ಗಣೇಶ ಕೆ ಎಲ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಕಿ ಸಿಪಿಆಯ್ ಶಶಿಕಾಂತ ವರ್ಮಾ, ಪಿಎಸ್ಐ ನಾಗಪ್ಪ ಬಿ ಸಿಬ್ಬಂದಿಗಳಾದ ಹನುಮಂತ ಕಬಾಡಿ, ಮಲ್ಲಿಕಾರ್ಜುನ ಕುದರಿ, ಅರುಣ ಲಮಾಣಿ, ಮಂಜುನಾಥ ಕಾಶಿಕೋವಿ, ಸದ್ದಾಂ ಹುಸೇನ್, ಪ್ರವೀಣ್ ಎನ್, ರಾಜಶೇಖರ ಅವರು ಮಿಂಚಿನ ದಾಳಿ ನಡೆಸಿ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನು ಓದಿ : ನೇತ್ರಾಣಿ ನಡುಗಡ್ಡೆಯಲ್ಲಿ ಸಮರಭ್ಯಾಸ
ಮೀನುಗಾರರ ಸಹಾಯದಿಂದ ಪ್ರವಾಸಿಗನ ರಕ್ಷಣೆ
ಅಳ್ವೆಕೋಡಿ ಮತ್ತು ಮುಂಡಳ್ಳಿಯಲ್ಲಿ ಸಂಭ್ರಮದ ವಿಜಯದಶಮಿ