ಶಿವಮೊಗ್ಗ (Shivamogga): ನಗರದ ಸಹ್ಯಾದ್ರಿ ಕಾಲೇಜು(Sahyadri College) ಬಳಿ ವಾಹನ ತಡೆದು ತಪಾಸಣೆಗೆ ಮುಂದಾದ ಸಂಚಾರಿ ಪೊಲೀಸ್(Traffic Police) ಸಿಬ್ಬಂದಿಯನ್ನೇ ಕಾರು ಚಾಲಕ ಬೋನೆಟ್ ಮೇಲೆ ಹೊತ್ತೊಯ್ದ ಘಟನೆ ನಡೆದಿದೆ
ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸರು ಎಂದಿನಂತೆ ಸಹ್ಯಾದ್ರಿ ಕಾಲೇಜು ಮುಂಭಾಗ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಮಾರ್ಗದಲ್ಲಿ ಹೋಗುತ್ತಿದ್ದ ಕಾರೊಂದರ ಚಾಲಕನಿಗೆ ಕಾರು ನಿಲ್ಲಿಸುವಂತೆ ಟ್ರಾಫಿಕ್ ಪೊಲೀಸ್ ಸೂಚಿಸಿದ್ದಾರೆ. ಆದರೆ ಆತ ನಿಲ್ಲಿಸದೆ ಮುಂದೆ ಸಾಗಿದ್ದಾನೆ. ಕೂಡಲೇ ಕಾರಿನ ಮುಂಭಾಗ ಹಿಡಿದ ಪೊಲೀಸ್ ಸಿಬ್ಬಂದಿ ಬಾನೆಟ್ ಮೇಲೆ ಹತ್ತಿದ್ದಾರೆ. ಆಗ ಕಾರು ಚಾಲಕ ವಾಹನ ಚಲಾಯಿಸಿಕೊಂಡು ಸಾಗಿದ್ದಾನೆ. ಚಾಲಕ ಸಹ್ಯಾದ್ರಿ ಕಾಲೇಜಿನ ಎರಡನೇ ಗೇಟ್ನಿಂದ ಮತ್ತೂರು ಕ್ರಾಸ್ (Matturu cross)ತನಕ ಸುಮಾರು 100 ಮೀಟರ್ ಸಾಗಿದ್ದಾನೆ. .ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಾಲಕನ ವಿರುದ್ಧ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.
ಇದನ್ನು ಓದಿ : ಶಾಸಕ ಸತೀಶ್ ಸೈಲ್ ಬಂಧನ