ಕಾರವಾರ(KARWAR) : ಗೋವಾ ಗಡಿಯಲ್ಲಿರುವ(Goa Boarder) ಮಾಜಾಳಿ ತನಿಖಾ ಠಾಣೆಯಲ್ಲಿ (Majali Check Post)ಅಬಕಾರಿ ಸಿಬ್ಬಂದಿಗಳು ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿರುವ ಗಂಭೀರ ಆರೋಪದ ವಿಡಿಯೋ ವೈರಲ್(Viral) ಆಗಿದೆ.

ಅಕ್ಟೋಬರ್ 15 ರಂದು ರಾತ್ರಿ ಗೋವಾ ಗಡಿ ಮಾಜಾಳಿ ಚೆಕ್ ಪೊಸ್ಟ್ ನಲ್ಲಿ ಕುಮಾರ್ ಎಂಬುವವರ ವಾಹನ ತಡೆದು ತಪಾಸಣೆ ಮಾಡುವುದಾಗಿ ಅಬಕಾರಿ ಸಿಬ್ಬಂದಿಗಳು(Exice staff) ಹೇಳಿದ್ದಾರೆ. ಅಲ್ಲದೇ ಏನು ಒಯುತ್ತಿದ್ದೀರಿ ಎಂದಾಗ ವಾಟರ್ ಫಿಲ್ಟರ್(Water Filter) ಎಂದಿದ್ದಾರೆ. ಎಲ್ಲಾ ಬಿಚ್ಚಿ ತೋರಿಸಬೇಕು ಎಂದಾಗ ನನ್ನಿಂದ ಸಾಧ್ಯವಿಲ್ಲ. ನೀವೇ ನೋಡಿ ಸರ್ ಎಂದಿದ್ದಾರೆ. ಆಗ ಸಿಟ್ಟಿಗೆದ್ದ ಸಿಬ್ಬಂದಿಗಳು ತನ್ನ ಮೇಲೆ ಹಲ್ಲೆ ಮಾಡಿದ್ದರೆಂದು ಆರೋಪಿಸಿದ್ದಾರೆ.

ಇವರ ವಾಹನ ಗೋವಾದಿಂದ ಕೇರಳಕ್ಕೆ(Goa to Keral) ತೆರಳುತಿತ್ತು. ಅಬಕಾರಿ ಸಿಬ್ಬಂದಿಗಳು ಕಚೇರಿಯ ಒಳಗೆ ಒಯ್ದು ಹಿಗ್ಗಾಮುಗ್ಗಾ ಬಾರಿಸಿದ್ದಾರೆ. ಹೀಗಾಗಿ ತನಗೆ ನೋವಾಗಿದೆ. ಇತರ ವಾಹನ ಸವಾರರು ಎಚ್ಚರಿಕೆಯಿಂದ ಇರಿ. ಅಬಕಾರಿ ಸಿಬ್ಬಂದಿಗಳು ಸುಮ್ಮನೆ ಹಲ್ಲೆ ಮಾಡುತ್ತಾರೆಂದು ಅವರು ಹೇಳಿದ್ದಾರೆ.

ಈ ಬಗ್ಗೆ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ (Chittakul Police Station) ದೂರು ನೀಡಲು ಚಾಲಕ ಮುಂದಾಗಿದ್ದಾರೆ. ಹಲ್ಲೆ ನಡೆಸಿದ ಅಬಕಾರಿ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನು ಓದಿ : ಅಂಕೋಲಾ, ಮುರ್ಡೇಶ್ವರದಲ್ಲಿ ಕಳ್ಳತನ. ಚಿಂತಾಮಣಿಯಲ್ಲಿ ಬಂಧನ

ಕಾರು ಪಲ್ಟಿ ಚಾಲಕ ದುರ್ಮರಣ

ಅಮೇರಿಕ, ಜರ್ಮನಿಯಲ್ಲಿ ಇಂಜಿನಿಯರ್ ವೃತ್ತಿ ನಡೆಸಿದವ ಈಗ ಅಸಹಾಯಕ