ಕ್ಯಾಲಿಕಟ್(Calicut) : ಉಡುಪಿಯ ಸಾಮಾಜಿಕ ಕಾರ್ಯಕರ್ತ, ಖ್ಯಾತ ಮುಳುಗುತಜ್ಞ (Divers) ಈಶ್ವರ್ ಮಲ್ಪೆ(Ishwar Malpe) ಅವರ ಕಷ್ಟಕ್ಕೆ ಕೇರಳದ ಕೆಲ ಸಂಘ ಸಂಸ್ಥೆಗಳು ಸ್ಪಂದಿಸಿವೆ.
ಈಶ್ವರ್ ಅವರ ಇಬ್ಬರು ಮಕ್ಕಳ ಚಿಕಿತ್ಸೆಯನ್ನು ಉಚಿತವಾಗಿ ನೀಡುವುದಾಗಿ ಕೇರಳದ ರೋಟರಿ ಕ್ಲಬ್, ಲಾರಿ ಚಾಲಕ ಮತ್ತು ಮಾಲೀಕರ ಸಂಘ ಸೇರಿ ಕೆಲ ಸಂಸ್ಥೆಯವರು ಮುಂದೆ ಬಂದಿದ್ದಾರೆ. ಹೀಗಾಗಿ ಕೇರಳದ ಕ್ಯಾಲೀಕಟ್ ನಲ್ಲಿನ ಮಲ್ಟಿ ಸ್ಪೆಶಾಲಿಟಿ ಮೈತ್ರ ಆಸ್ಪತ್ರೆಯಲ್ಲಿ (Multi Specialitymaitra Hospital) ಇಬ್ಬರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕಾರ್ತಿಕ್ (23), ಬ್ರಾಹ್ಮಿ (7) ಅನಾರೋಗ್ಯ ಪೀಡಿತರಾಗಿದ್ದು, ವೈದ್ಯಕೀಯ ಚಿಕಿತ್ಸೆಗಳಿಗೆ ಲಕ್ಷಾಂತರ ರೂ. ವೆಚ್ಚವಾಗುತ್ತಿದೆ. ಮೂರು ವರ್ಷದ ಹಿಂದೆ ಈಶ್ವರ್ ಅವರ ಒಬ್ಬ ಮಗ ತೀರಿಹೋಗಿದ್ದರು. ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತ ಸಂದರ್ಭದಲ್ಲಿ ಈಶ್ವರ್ ಮಲ್ಪೆ(Ishwar Malpe) ಬಾರೀ ನದಿಯಲ್ಲಿ ಬಾರೀ ಸಾಹಸ ಮಾಡಿದ್ದರು. ಅರ್ಜುನ್ ಮೃತ ದೇಹ ಹುಡುಕುವಲ್ಲಿ ತುಂಬಾ ಕಷ್ಟಪಟ್ಟಿದ್ದರು. ಇದರಿಂದಾಗಿ ಈಶ್ವರ್ ಬಗ್ಗೆ ಕೇರಳದಲ್ಲಿ(Keral) ಅಭಿಮಾನ ಹೆಚ್ಚಾಗಿದೆ. ಕುಟುಂಬದ ಸಮಸ್ಯೆಯರಿತ ಕೇರಳದ ಸಂಘ ಸಂಸ್ಥೆಯವರು ಕುಟುಂಬದ ಯೋಗಕ್ಷೇಮ ವಿಚಾರಿಸಿದ್ದಾರೆ.
ಈಗಾಗಲೇ ಆಸ್ಪತ್ರೆಯಲ್ಲಿ ಮಕ್ಕಳಿಗೆ ವಿವಿಧ ತಪಾಸಣೆ ನಡೆಸಲಾಗಿದೆ. ಎಷ್ಟೇ ಖರ್ಚಾದರೂ ಸಹ ತಾವೂ ಭರಿಸುತ್ತೇವೆ ಎಂದು ಅಲ್ಲಿನ ಸಂಘ ಸಂಸ್ಥೆಯವರು ಅಭಿಮಾನ ತೋರಿದ್ದಾರೆ ಎಂದು ಈಶ್ವರ್ ಮಾಹಿತಿ ನೀಡಿದ್ದಾರೆ. ತಮ್ಮ ಮಕ್ಕಳು ಎಲ್ಲರಂತಾಗುವ ನಂಬಿಕೆಯನ್ನ ಈಶ್ವರ್ ಇಟ್ಟುಕೊಂಡಿದ್ದಾರೆ.
ಉಡುಪಿ ಸಹಿತ ಕರಾವಳಿಯ ಸಂಘ ಸಂಸ್ಥೆಯವರು, ಸಾರ್ವಜನಿಕರು ಸಾಕಷ್ಟು ಸಹಕಾರ ನೀಡಿದ್ದಾರೆ. ಆದರೆ ಸರಕಾರದಿಂದ ಸಹಾಯ ದೊರೆತಿಲ್ಲ. ಮಕ್ಕಳ ಚಿಕಿತ್ಸೆಗಾಗಿ ಸದ್ಯಕ್ಕೆ ಕೇರಳದಲ್ಲಿದ್ದೇನೆ ಎಂದು ಈಶ್ವರ್ ತಿಳಿಸಿದ್ದಾರೆ. ಕರ್ನಾಟಕ ಜನತೆಯ ಪ್ರಾರ್ಥನೆ ನಮ್ಮ ಮಕ್ಕಳ ಮೇಲೆ ಇರಲಿ ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನು ಓದಿ : ಮಿಡಿದ ಹೃದಯದ ಕೊನೆ ಆಸೆ ನೆರವೇರಿಸಿದ ಈಶ್ವರ್ ಮಲ್ಪೆ
ಮಾಜಾಳಿ ಗೇಟಲ್ಲಿ ಚಾಲಕನಿಗೆ ತಳಿತ. ರೋಧನೆ ವಿಡಿಯೋ ವೈರಲ್