ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಗೋಕರ್ಣ(Gokarn) : ಪ್ರವಾಸಿಗರ(Tourist) ನಡುವೆ ಜಗಳವಾಗಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಗೋಕರ್ಣದಲ್ಲಿ ಗುರುವಾರ ನಡೆದಿದೆ.
ಘಟನೆಯಲ್ಲಿ ಗಣೇಶ ರಾಥೋಡ ಎಂಬಾತನಿಗೆ ಗಂಭೀರ ಗಾಯವಾಗಿದ್ದು ಅಂಕೋಲಾ(Ankola) ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿನ ಓಂ ಕಡಲತೀರಕ್ಕೆ(Om Beach) ಬೆಂಗಳೂರಿನಿಂದ ಟಿ.ಟಿ. ವಾಹನದಲ್ಲಿ ಸುಮಾರು 15 ಪ್ರವಾಸಿಗರ ತಂಡ ಆಗಮಿಸಿತ್ತು. ಅಂಕೋಲಾದ ರಾಮನಗುಳಿಯ (Ramanaguli) ಇಬ್ಬರು ಪ್ರವಾಸಿಗರು ಇದೇ ವೇಳೆ ಓಂ ಕಡಲತೀರದ ಬಳಿ ಸಾಗುತ್ತಿದ್ದರು. ಈ ವೇಳೆ ರಾಮನಗುಳಿಯ ಇಬ್ಬರು ಯುವಕರು ಮತ್ತು ಬೆಂಗಳೂರು ಪ್ರವಾಸಿಗರ(Bangaluru Tourist) ನಡುವೆ ಜಟಾಪಟಿ ನಡೆದಿದೆ.
ಈ ವೇಳೆ ರಾಮನಗುಳಿಯ ಗಣೇಶನಿಗೆ ಬೆಂಗಳೂರು ಪ್ರವಾಸಿಗರು ಹಲ್ಲೆ ಮಾಡಿದ್ದರಿಂದ ಗಾಯವಾಗಿದೆ. ಕೂಡಲೇ 108 ವಾಹನದ ಮೂಲಕ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಅಂಕೋಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಗೋಕರ್ಣ ಪೊಲೀಸರು(Gokarn Police) ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಮುರ್ಡೇಶ್ವರದಲ್ಲಿ ಫೆಬ್ರವರಿ 26 ರಂದು ಶಿವನ ಆರಾಧನೆಗೆ ನಡೆದಿದೆ ತಯಾರಿ.
ಸಂಸ್ಥೆಯ ಹಣ ದುರ್ಬಳಕೆ. ಸಿಬ್ಬಂದಿ ಮೇಲೆ ಕ್ರಿಮಿನಲ್ ದೂರು ದಾಖಲಿಸಿದ ಡಾ. ವೆಂಕಟೇಶ ನಾಯ್ಕ.