ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar) : ರಾಜಧಾನಿ ಬೆಂಗಳೂರು ಮತ್ತು ಉತ್ತರಕನ್ನಡದ ನಡುವೆ ವಂದೇ ಭಾರತ್(Vande Bharat) ಬೇಕು ಎಂದು ಸತತವಾಗಿ ಹೋರಾಡಿದ್ದ ಉತ್ತರ ಕನ್ನಡ ರೈಲು ಸೇವಾ ಸಮಿತಿಗೆ(Uttarkannada Railway Committee) ಮತ್ತು ಅವರಿಗೆ ಬೆಂಬಲವಾಗಿ ದೆಹಲಿಯಲ್ಲಿ ಕೆಲಸ ಮಾಡಿದ ಸಂಸದ ವಿಶ್ವೇಶರ ಹೆಗಡೆ ಕಾಗೇರಿಯವರಿಗೆ(MP Vishweshwar Hegade Kageri) ಬಾರೀ ಯಶಸ್ಸು ಲಭಿಸಿದೆ.
ರೈಲ್ವೇ ಸಚಿವರು ಈ ಕುರಿತು ಸಂಸದ ವಿಶ್ವೇಶರ ಹೆಗಡೆ ಕಾಗೇರಿಯವರಿಗೆ ಪತ್ರದ ಮೂಲಕ ಮಾಹಿತಿ ನೀಡಿ ವಿಷಯ ಹಂಚಿಕೊಂಡಿದ್ದಾರೆ.
ದೆಹಲಿಯ ರೈಲ್ ಭವನಕ್ಕೆ(Railway Bhavan) , ಸಚಿವ ಸೋಮಣ್ಣ ಅವರನ್ನು, ಸಚಿವ ಅಶ್ವಿನಿ ವೈಷ್ಣವ್ ರನ್ನು(Ashwini Vaishnava) ದೆಹಲಿಯಲ್ಲಿ ಬೇಡಿಯಾಗಿ ಮನವಿ ಮಾಡಿದ್ದ ಸಂಸದರ ಮನವಿಗೆ ರೈಲ್ವೇ ಸಚಿವಾಲಯ ಒಪ್ಪಿಗೆ ಸೂಚಿಸಿದೆ.
ಕಾರವಾರ(Karwar), ಗೋಕರ್ಣ(Gokarn), ಮುರುಡೇಶ್ವರ(Murdedhwar) ನಿಲ್ದಾಣಗಳಲ್ಲಿ ವಂದೇಭಾರತ ರೈಲು ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಲುಗಡೆಯಾಗಲಿದೆ. ಈ ರೈಲಿನ ನಿಲುಗಡೆಗಳ ಕುರಿತು ಜಿಲ್ಲೆಯ ಜನರ ಆಶೋತ್ತರಗಳನ್ನು ಈಡೇರಿಸಿದ ಸಂಸದ ವಿಶ್ವೇಶರ ಹೆಗಡೆ ಕಾಗೇರಿಯವರನ್ನು ಉತ್ತರ ಕನ್ನಡದ ರೈಲ್ವೇ ಸಮಿತಿ ಹಾರ್ದಿಕವಾಗಿ ಅಭಿನಂದಿಸಿದೆ.
ಬೆಂಗಳೂರಿಂದ ಮಂಗಳೂರಿಗೆ(Banglore to Manglore) ಮಾತ್ರವೇ ವಂದೇ ಭಾರತ್(Vance Bharat) ಓಡುವುದು ಎಂಬ ವಿಷಯ ಚರ್ಚೆಯಲ್ಲಿತ್ತು. ಕರಾವಳಿ ಎಂದರೆ ಮಂಗಳೂರು ಮಾತ್ರವಲ್ಲ ಬದಲಾಗಿ ಉಡುಪಿ, ಕಾರವಾರವೂ ಕರಾವಳಿ ಪ್ರದೇಶದ ಪ್ರಮುಖ ಭಾಗಗಳಾಗಿದ್ದು, ವಂದೇ ಭಾರತ್ ಇಲ್ಲಿಗೆ ಬರಲೇ ಬೇಕು ಎಂಬ ವೈಯಕ್ತಿಕ ಜಿದ್ದಿಗೆ ಬಿದ್ದು ಹೋರಾಡಿದವರು ಉಡುಪಿ ಸಂಸದ ಕೋಟ ಶ್ರೀನೀವಾಸ್ ಪೂಜಾರಿಯವರು.
ಉತ್ತರ ಕನ್ನಡ ರೈಲ್ವೇ ಸಮಿತಿಯ ರಾಜೀವ್ ಗಾಂವಕರ್ ಮತ್ತು ಕುಂದಾಪುರ ರೈಲ್ವೇ ಸಮಿತಿಯವರು(Kundapur Railway Committee) ವಂದೇ ಭಾರತ್ ಮತ್ತಿತರ ವಿಷಯಗಳ ಕುರಿತು ಸಚಿವರನ್ನು ಬೇಟಿಯಾಗಲು ದೆಹಲಿಗೆ ತೆರಳಿದಾಗಲೂ ಅವರನ್ನು ದೆಹಲಿಯ ಪ್ರತಿ ಅಧಿಕಾರಿಗಳ ಬಳಿ ಕರೆದೊಯ್ದು ಬೆಂಬಲಿಸಿದ್ದು ಮಾತ್ರವಲ್ಲ ಪ್ರತೀ ತಿಂಗಳೂ ಹಲವು ಬಾರೀ ರೈಲು ಸಚಿವರನ್ನು ಬೇಟಿಯಾಗಿ ಪಾರ್ಲೀಮೆಂಟ್ ಪ್ರಶ್ನೆಗಳ ಮೂಲಕ ಸರಕಾರಕ್ಕೆ ತೀವ್ರ ಒತ್ತಡ ತಂದಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರ ಅವಿಶ್ರಾಂತ ಹೋರಾಟಕ್ಕೆ ಕಡೆಗೂ ಜಯ ಲಭಿಸಿದೆ.
ಉತ್ತರ ಕನ್ನಡ ರೈಲ್ವೇ ಸೇವಾ ಸಮಿತಿಯ ಜೊತೆಗೆ ನಿಂತ ಕುಮಟಾ ಶಾಸಕ ದಿನಕರ್ ಶೆಟ್ಟಿಯವರಿಗೂ ಸಮಿತಿ ವಂದನೆಗಳನ್ನು ತಿಳಿಸಿದೆ.
ಕಳೆದ ವಾರವಷ್ಚೇ ಸಚಿವ ಸೋಮಣ್ಣ(Minister Somanna) ಅವರಿಗೆ ಸಮಿತಿ ಪತ್ರ ಬರೆದು ಮುರುಡೇಶ್ವರ, ಕುಮಟಾ, ಗೋಕರ್ಣ ನಿಲುಗಡೆಗೆ ಮನವಿ ಮಾಡಿತ್ತು. ಈಗ ಅವರ ಮನವಿಯಲ್ಲಿ ಎರಡು ನಿಲುಗಡೆಗಳು ವಂದೇ ಭಾರತ್ ರೈಲಿಗೆ ದೊರೆತಿದ್ದು ಈ ಬಗ್ಗೆ ಸಮಿತಿ ಹರ್ಷ ವ್ಯಕ್ತ ಪಡಿಸಿದೆ.
ಬೆಳಿಗ್ಗೆ ಮಡಗಾಂವಿನಿಂದ(Madagaum) ಹೊರಡುವ ರೈಲು ಸಂಜೆ ಬೆಂಗಳೂರು(Banglore) ತಲುಪಲಿದ್ಗು ಅದೇ ಹೊತ್ತಿಗೆ ಬೆಂಗಳೂರಿಂದ ಕಾರವಾರದ(Banglore to Karwar) ಕಡೆಗೆ ವಂದೇ ಭಾರತ್ ಹೊರಟು ಸಂಜೆ ಉತ್ತರ ಕನ್ನಡ ತಲುಪಲಿದೆ.
ರಕ್ಷಣಾ ಇಲಾಖೆ(Defence) , ನೌಕಾ ನೆಲೆ (Naval Base) , ಕೈಗಾ ಅಣು ಸ್ಥಾವರ(Kaiga Plant) , ಗೋಕರ್ಣ, ಮುರುಡೇಶ್ವರ , ಕೊಲ್ಲೂರು(Kolluru) ಸಮೀಪದ ಕುಂದಾಪುರ(Kundapur) , ಉಡುಪಿ ಶ್ರೀಕೃಷ್ಣ ದೇಗುಲ(Udupi Krishna Temple) ಕಡಲತೀರಗಳು, ಶಿಕ್ಷಣ ಸಂಸ್ಥೆಗಳ ತವರೂರಾದ ಕರಾವಳಿಗೆ ವಂದೇ ಭಾರತ್ ರೈಲು ಸೇವೆಯ ಅಗತ್ಯ ಇದ್ದಿದರಿಂದ ಭಾರತೀಯ ರೈಲ್ವೇ ಇಲಾಖೆ (Indian Railway Department) ಈಡೇರಿಸಿದೆ