ಮುಂಡಗೋಡ :    ತಾಲೂಕಿನ ಕೆಂದಲಗೇರಿ ಸಿದ್ದಿ ಜನಾಂಗದ ಮಹಿಳೆಯರು  ವರಮಹಾಲಕ್ಷ್ಮೀಯ ಪೂಜೆಯ ವೇಳೆ ಸಿದ್ದರಾಮಯ್ಯನವರ ಗ್ಯಾರಂಟಿ ಯೋಜನೆಯ ಗುಣಗಾನ ಮಾಡಿದ ಘಟನೆ ತಡವಾಗಿ ಗೊತ್ತಾಗಿದೆ.

ಗೃಹಲಕ್ಷ್ಮೀಯ ಯೋಜನೆಯ ಸಂಬಂಧ ಪೂಜೆ ನೆರವೇರಿಸಿ ಮುಖ್ಯಮಂತ್ರಿ ಸಿದ್ದರಾಮ್ಯಯನವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಲು ಹಾಡು ಹಾಡಿದ್ದಾರೆ.  ಪ್ರಮುಖ ರಸ್ತೆಗಳಲ್ಲಿ  ಮಹಾಲಕ್ಷ್ಮಿ ಫೋಟೋಗೆ ತೆಂಗಿನಕಾಯಿ ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಇಟ್ಟು ತಾಯಿ ಪೂಜಿಸಿದ್ದಾರೆ.

ನಿನ್ನ ಮಹಿಮೆ ಬಹಳ ದೊಡ್ಡದು. ಮಹಾಲಕ್ಷ್ಮೀಯಾಗಿರುವ ನೀನು ಈಗ ನಮ್ಮ ಮನೆಗೆ ಗೃಹಲಕ್ಷ್ಮೀಯಾಗಿ ಬರುತ್ತಿದ್ದಿಯಾ. ಯಾವುದೇ ತಿಂಗಳು ನಿಲ್ಲದೆ ಪ್ರತಿತಿಂಗಳು ಮನೆಗೆ ಬರುತ್ತಾ ಇರು. ನಮ್ಮಮನೆಗೆ ಪ್ರತಿ ತಿಂಗಳು ನೀನು ಗೃಹಲಕ್ಷ್ಮೀಯಾಗಿ ಪ್ರವೇಶ ಮಾಡುತ್ತಿರುವುದು ನಮ್ಮ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಡಿರುವ ಗೃಹಲಕ್ಷ್ಮೀ ಯೋಜನೆಯಿಂದ ತಾಯಿ. ಆದ್ದರಿಂದ ನಾವು ಸಿದ್ದರಾಮಯ್ಯನವರನ್ನು ಪ್ರತಿ ದಿನ ಅನುಕ್ಷಣವು ನೆನೆಸುತ್ತೇವೆ, ಮನಸ್ಸಿನಲ್ಲಿ ಪೂಜಿಸುತ್ತಿವೆ. ಸಿದ್ದರಾಮಯ್ಯ ಗೃಹಲಕ್ಷೀ ನೀಡದೇ ಇರುತ್ತಿದ್ದರೆ ನಾವೇಲ್ಲಿ ಪ್ರತಿ ತಿಂಗಳು ಹಣದ ಮುಖ ನೋಡಲು ಸಾಧ್ಯವಾಗುತ್ತಿತ್ತು ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮ್ಯನವರ ಮೇಲೆ ಹಾಡುಕಟ್ಟಿ ಮಹಾಲಕ್ಷ್ಮೀ ಯ ಮುಂದೆ ಹಾಡಿದ್ದು ಹೀಗೆ “ಸಿದ್ದರಾಮಯ್ಯ ನಾವು ನಿನ್ನನ್ನು ನಂಬಿವಿ ನಮಗೆಲ್ಲಾ ನೀನು ಸಹಾಯ ಮಾಡಿದಿ. ನಿನ್ನ ಉಪಕಾರ ನಾವು ಮರತಿಲ್ಲಾ ನಮಗೆಲ್ಲಾ ಗೃಹಲಕ್ಷ್ಮೀ ಬರುವುದು ನಿಲ್ಲಸದೇ ಇರು ತಂದೆಯೇ” ಎಂದು ಹಾಡಿನ ಮೂಲಕ ತಿಳಿಸಿದ್ದಾರೆ. ಸಿದ್ಧಿ ಮಹಿಳೆಯರ ಈ ಹಾಡು ಎಲ್ಲೆಡೆ ಗಮನ ಸೆಳೆಯುತ್ತಿದೆ.

ಇದನ್ನು ಓದಿ : ಅಪ್ಪನನ್ನ ಹುಡುಕಿಕೊಡಿ

ಪಿಎಸ್ಐ ಆಗಿ ಅಧಿಕಾರ ಸ್ವೀಕಾರ