ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಸಿಂಗಾಪುರ(Singapur) : ಭಾರತದ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್(D Gukesh) ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಇತಿಹಾಸ(World Chess Championship history) ದಾಖಲಿಸಿದ್ದಾರೆ.
ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾದಲ್ಲಿರುವ ಈಕ್ವೇರಿಯಸ್ ಹೋಟೆಲ್‌ನಲ್ಲಿ ನಡೆದ 2024 ರ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಕೊನೆಯ ಹಾಗೂ 14ನೇ ಗೇಮ್ನಲ್ಲಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಈ ರೋಚಕ ಹಣಾಹಣಿಯಲ್ಲಿ ಕಳೆದ ಬಾರಿಯ ಚಾಂಪಿಯನ್ ಚೀನಾದ (China) ಡಿಂಗ್ ಲಿರೆನ್ಗೆ ಚೆಕ್ ಮೇಟ್ ನೀಡಿದ ಗುಕೇಶ್, ವಿಶ್ವನಾಥನ್ ಆನಂದ್ ಬಳಿಕ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಎರಡನೇ ಭಾರತೀಯನೆನಿಸಿಕೊಂಡಿದ್ದಾರೆ. ಇದಲ್ಲದೆ ಕೇವಲ 18ನೇ ವಯಸ್ಸಿಗೆ ಚಾಂಪಿಯನ್ ಆಗುವ ಮೂಲಕ ಚೆಸ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಚೆಸ್ ಪಟು ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಚೆನ್ನೈ ಮೂಲದ(Chennai Native) ಗುಕೇಶ್ ಅವರ ಪೂರ್ಣ ಹೆಸರು ದೊಮ್ಮರಾಜು ಗುಕೇಶ್. ಹುಟ್ಟಿದ್ದು, ಮೇ 29, 2006ರಂದು, ಇವರಿಗೀಗ 18 ವರ್ಷ ವಯಸ್ಸು. ಗುಕೇಶ್ ಅವರ ತಂದೆ ಡಾ. ರಜನಿಕಾಂತ್ ಕಿವಿ ಮೂಗು ಗಂಟಲು ಸರ್ಜನ್ ಆಗಿದ್ದಾರೆ. ಇವರ ತಾಯಿ ಡಾ. ಪದ್ಮ (ಮೈಕ್ರೋಬಯೋಲಾಜಿಸ್ಟ್). ಗುಕೇಶ್ ತಮ್ಮ ಏಳನೇ ವಯಸ್ಸಿನಲ್ಲೇ ಚೆಸ್ ಆಡುವುದನ್ನು ಆರಂಭಿಸಿದ್ದರು. ಚೆನ್ನೈನ ವೇಲಮ್ಮಾಲ್ ವಿದ್ಯಾಲಯದಲ್ಲಿ ಶಿಕ್ಷಣವನ್ನು ಪಡೆಡಿದ್ದಾರೆ.
2013ರಲ್ಲಿ ವಾರಕ್ಕೆ ಮೂರು ದಿನ ಒಂದೊಂದು ಗಂಟೆ ಚೆಸ್ ಆಡುವುದನ್ನು ಅಭ್ಯಾಸ ಮಾಡುವ ಗುಕೇಶ್, ವಾರಾಂತ್ಯದಲ್ಲಿ ಟೂರ್ನಮೆಂಟ್ ಆಡುತ್ತಿದ್ದರು.
2018ರಲ್ಲಿ ವಿಶ್ವ ಯುವ ಚೆಸ್ ಚಾಂಪಿಯನ್‌ಶಿಪ್ ಗೆಲ್ಲುವ ಗುಕೇಶ್, 2021ರಲ್ಲಿ ಜ್ಯೂಲಿಯಸ್ ಬೇರ್ ಚಾಲೆಂಜಸ್ ಟೂರ್ನಮೆಂಟ್ ಅನ್ನು ತನ್ನದಾಗಿಸಿಕೊಂಡಿದ್ದರು. 2022ರಲ್ಲಿ 2726 ಪಾಯಿಂಟ್ ಗಳನ್ನು ಪಡೆಯುತ್ತಾರೆ. ಇಷ್ಟು ಪಾಯಿಂಟ್ ಗಳನ್ನು ದಾಡಿದ ವಿಶ್ವದ ಮೂರನೇ ಆಟಗಾರ ಎನ್ನುವ ಹೆಗ್ಗಳಿಕೆ. 2023ರ ವಿಶ್ವ ಚೆಸ್ ಚಾಂಪಿಯನ್‌ಶಿಪ್ ನಲ್ಲಿ ಕ್ವಾಟರ್ ಫೈನಲ್ ಹಂತದ ತನಕ ಹೋಗುವ ಗುಕೇಶ್, ಭಾರತದ ಇನ್ನೋರ್ವ ಗ್ರ್ಯಾಂಡ್ ಮಾಸ್ಟರ್ ಆಗಿದ್ದ ವಿಶ್ವನಾಥನ್ ಆನಂದ್ ಅವರನ್ನು ಮೀರಿ ರ‍್ಯಾಕಿಂಗ್ ಅನ್ನು ಪಡೆದುಕೊಂಡಿದ್ದಾರೆ. ಈ ವರ್ಷದಲ್ಲಿ FIDE ವಿಶ್ವದ ಟಾಪ್ ಐದು ಆಟಗಾರರ ಪಟ್ಟಿಯಲ್ಲಿ ಮೊದಲನೇ ಬಾರಿಗೆ ಸ್ಥಾನವನ್ನು ಪಡೆಯಲು ಯಶಸ್ವಿಯಾಗಿದ್ದಾರೆ.
ಇದನ್ನು ಓದಿ : ಸಿದ್ದಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳ ಸಂಘ ಅಸ್ತಿತ್ವಕ್ಕೆ. ಅಧ್ಯಕ್ಷರಾಗಿ ಕನ್ನೇಶ ಆಯ್ಕೆ.
ಅಯ್ಯಪ್ಪ ವೃತಧಾರಿ ಬಾಲಕನ ಅಚ್ಚರಿ! ಮಾತು ಬಾರದವನಿಗೆ ಮಾತು ಬಂತು.