ಕಾರವಾರ : ಡಿಸೆಂಬರ್ 13 ಶುಕ್ರವಾರ ಹಾಗೂ 14 ಶನಿವಾರ ತಾಲೂಕಿನ ಶ್ರೀ ಕ್ಷೇತ್ರ ಸಿದ್ದರದ ಶ್ರೀ ನರಸಿಂಹ ದೇವರ ಜಾತ್ರಾ ಮಹೋತ್ಸವ ನಡೆಯಲಿದೆ
ಈ ಬಾರಿಯ ಕ್ರೋಧಿ ನಾಮಸಂವತ್ಸರದ ದಕ್ಷಿಣಾಯಣ ಹೇಮಂತ ಋತುವಿನ ಮಾರ್ಗಶಿರ ಶುಕ್ಲಪಕ್ಷದ ದುವಾದಶಿಯಂದು ಶ್ರೀ ಕ್ಷೇತ್ರ ಸಿದ್ದರದಲ್ಲಿ ಮಹಾ ಸಂಕಲ್ಪದೊಂದಿಗೆ ಬೆಳಗ್ಗೆ 8 ಗಂಟೆಗೆ ‘ನರಸಿಂಹ ಧ್ವಜದ’ ಧಜಾರೋಹಣ,ಮಹಾಪೂಜೆ ನಡೆಯಲಿದೆ. ಡಿಸೆಂಬರ್ 13 ಶುಕ್ರವಾರದಂದು ವಾರ್ಷಿಕ ಜಾತ್ರೆಯ ಪ್ರಯಕ್ತ ಬೆಳಿಗ್ಗೆ ಶ್ರೀ ನರಸಿಂಹ ದೇವರಿಗೆ ಹಾಗೂ ಪರಿವಾರ ದೇವತೆಗಳಿಗೆ ಅಭಂಜನಾದಿ ಸೇವೆ, ಬೆಳಗ್ಗೆ 9 ರಿಂದ 10.30 ರ ವರೆಗೆ ಗಣಪತಿ ಪೂಜೆ, ಸಂಕಲ್ಪ, ಮಹಾ ಅಭಿಷೇಕ, ಅಲಂಕಾರ,ಮಧ್ಯಾಹ್ನ 12 ರಿಂದ ಪುಣ್ಯ ಮೂರ್ತಿಯ ಪಾವನ ದರ್ಶನ. ಮಹಾಮಂಗಳಾರತಿ ನಡೆಯಲಿದೆ.
ಮಧ್ಯಾಹ್ನ 3 ಗಂಟೆಗೆ ಉತ್ಸವ ಮೂರ್ತಿಯ ಆಗಮನ, 3.30 ರಿಂದ ಪೂಜಾ ಕಾರ್ಯ, ಸಂಜೆ 4 ಗಂಟೆಗೆ ಶ್ರೀ ನರಸಿಂಹ ದೇವರಿಗೆ ವನಭೋಜನ ಹಾಗೂ ಗ್ರಾಮ ಸಂಕೀರ್ತನೆಗೆ ತೆರಳಲು ಕೋರಿಕೆ ಸಲ್ಲಿಸಿ ಪಲ್ಲಕ್ಕಿಯಲ್ಲಿ ದೇವರ ಸ್ಥಾಪನೆ. ಮಧ್ಯಾಹ್ನ 4.15 ಕ್ಕೆ ಶ್ರೀ ದೇವರು ವನಕ್ಕೆ ಪಲ್ಲಕ್ಕಿಯಲ್ಲಿ ಆಗಮನ, ಸಂಜೆ 4.45ಕ್ಕೆ ವನದ ಗದ್ದುಗೆಯಲ್ಲಿ ಶ್ರೀ ನರಸಿಂಹ ಸ್ವಾಮಿಯ ಉತ್ಸವ ಮೂರ್ತಿಯ ಸ್ಥಾಪನೆ. ಪೂಜೆ ಮಹಾ ನೈವೇದ್ಯ ಸಮರ್ಪಣೆ, ಸಾರ್ವಜನಿಕರ ದರ್ಶನ ಹಾಗೂ ಸೇವಾರ್ಪಣೆ. ಸಂಜೆ 5.30 ಕ್ಕೆ ಮಹಾಪೂಜೆ, ಕ್ಷೇತ್ರಪಾಲ ಬಲಿ, ಚೌಡೇಶ್ವರಿ ಅಮ್ಮನವರಿಗೆ ಉಡಿ ಗೌರವ ಸಮರ್ಪಣೆ ಇತ್ಯಾದಿ ಧಾರ್ಮಿಕ ಕಾರ್ಯ ನಡೆಯಲಿದೆ.
ಸಂಜೆ 5.45ಕ್ಕೆ ವನಬೋಜನ (ಪ್ರಸಾದ ಬೋಜನ) ಸಂಜೆ 6.15ಕ್ಕೆ ಶ್ರೀ ದೇವರಿಗೆ ನೆಲ್ಲಿಕಾಯಿ ಹಾಗೂ ನೆಲ್ಲಿ ಸೊಪ್ಪಿನ ಅಲಂಕಾರ ಹಾಗೂ ಮಹಾಪೂಜೆ. ಗ್ರಾಮ ಪ್ರಾರ್ಥನೆ ಸಂಜೆ 6.45ಕ್ಕೆ ಶ್ರೀ ನರಸಿಂಹ ದೇವರು ಪಲ್ಲಕ್ಕಿಯಲ್ಲಿ ವಿರಾಜಮಾನನಾಗಿ ಸಿದ್ದರ ಗ್ರಾಮದ ಪರಿಕ್ರಮಣ. ರಾತ್ರಿ 10.45ಕ್ಕೆ ಮರಳಿ ದೇವಸ್ಥಾನದ ಆವರಣಕ್ಕೆ ಪಲ್ಲಕ್ಕಿ ಉತ್ಸವ ಆಗಮನ. ಆಲಯ ಸಂಕೀರ್ಣದ ಪ್ರದಕ್ಷಿಣೆ ಇಡಗಾಯಿ ಸರ್ಮಪಣೆಯ ನಂತರ ಪಲ್ಲಕ್ಕಿ ಕಟ್ಟೆಯಲ್ಲಿ ವಿರಾಜಮಾನರಾಗುವ ಶ್ರೀ ದೇವರು ರಾತ್ರಿ 11.30 ರವರೆಗೆ ದೇವಾಲಯದಲ್ಲಿ ಶೋಡಷೋಪಚಾರ ಪೂಜೆ, ಪುರಾಣ ಪಠಣ, ಮಹಾಪೂಜೆ ನಂತರ ಜಾಗರಣೆಯ ಹಿನ್ನೆಲೆಯಲ್ಲಿ ಶ್ರೀ ನರಸಿಂಹ ನಾರಾಯಣ ನಾಟ್ಯ ಮಂಡಳಿ ಸಿದ್ದರ ಇವರಿಂದ ಮನೋಜ ವೈ. ಶಡ್ಗುಲ್ಕರ್ ರಚಿಸಿದ ‘ಕೋಣ ಕರ್ತಾ ಕೋಣ ಬೋಗ್ತಾ’ ಕೊಂಕಣಿ ಸಾಮಾಜಿಕ ಹಾಸ್ಯ ನಾಟಕ ಪ್ರದರ್ಶನ ಜರುಗಲಿದೆ.
ಡಿ. 14 ಶನಿವಾರ ‘ಧಹಿಕಾಲ’ಮಹೋತ್ಸವ ನಡೆಯಲಿದೆ. ಈ ಹಿನ್ನೆಯಲ್ಲಿ ಸಮಸ್ತ ಜನರು, ಭಕ್ತರು, ಆಸ್ತಿಕರು ಶ್ರೀ ಕ್ಷೇತ್ರ ಸಿದ್ದರದ ಶ್ರೀ ನರಸಿಂಹ ದೇವರ ಜಾತ್ರಾ ಮಹೋತ್ಸದಲ್ಲಿ ಭಾಗವಹಿಸಲು ಸಿದ್ದರದ ಶ್ರೀ ನರಸಿಂಹ, ನಾರಾಯಣ ದೇವಸ್ಥಾನ ಆಡಳಿತ ಮಂಡಳಿ ಕೋರಿದೆ.
ಇದನ್ನು ಓದಿ : ಅಯ್ಯಪ್ಪ ವೃತಧಾರಿ ಬಾಲಕನ ಅಚ್ಚರಿ! ಮಾತು ಬಾರದವನಿಗೆ ಮಾತು ಬಂತು.