ಅಂಕೋಲಾ(ANKOLA) : ಶಿರೂರು ಕಾರ್ಯಾಚರಣೆಯಲ್ಲಿ ಪತ್ತೆಯಾದ ಮಾನವನ ಮೂಳೆ ಬಗ್ಗೆ ಸ್ಥಳೀಯ ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.
ಕೊನೆಯ ಸಂದರ್ಭದಲ್ಲಿ ಸಿಕ್ಕ ಮೂಳೆ ಶಿರೂರಿನ ಜಗನ್ನಾಥ ನಾಯ್ಕ ಅಥವಾ ಗಂಗೆಕೊಳ್ಳದ ಲೋಕೇಶ್ ನಾಯ್ಕ ಅವರದ್ದಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಡಿಎನ್ಎ (DNA) ಪರೀಕ್ಷೆ ವರದಿ ಇದುವರೆಗೆ ಬಾರದೇ ಇರೋದ್ರಿಂದ ಸಂಶಯ ಹೆಚ್ಚಾಗಿದೆ. ಪತ್ತೆಯಾದ ಮೂಳೆ ಮೂರನೇ ವ್ಯಕ್ತಿಯದ್ದಾಗಿರಬಹುದು ಎಂದು ಮಾತಾಡಿಕೊಳ್ಳುತ್ತಿದ್ದಾರೆ. ಯಾಕಂದರೆ ಈ ಹಿಂದೆ ಡಿಎನ್ಎ ಪರೀಕ್ಷೆಗೆ ಕಳಿಸಿದಾಗ ವರದಿ ಒಂದೆರಡು ದಿನದಲ್ಲಿ ಬಂದಿದ್ದವು. ಈಗ ವಿಳಂಭವಾಗುತ್ತಿರುವುದು ಅನುಮಾನಕ್ಕೆ ಪುಷ್ಠಿ ನೀಡಿದೆ.
ಜುಲೈ 16ರಂದು ಘಟನೆ ನಡೆದಾಗಲೇ ಜನ ದುರಂತದ ಬಗ್ಗೆ ತಮ್ಮದೇ ದಾಟಿಯಲ್ಲಿ ವಿಶ್ಲೇಷಣೆ ಮಾಡಿದ್ದರು. ಸಾವಾದವರು ಅಷ್ಟು ಇಷ್ಟು ಅಂತಾ ಹೇಳುತ್ತಿದ್ದರು. ಈಗ ಸಿಕ್ಕ ಮೂಳೆ ವರದಿ ವಿಳಂಭವಾಗುತ್ತಿರುವುದಕ್ಕೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾಧಿಕಾರಿ ಹೇಳಿಕೆ : ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಎಲುಬಿನ ಬಗ್ಗೆ ಡಿ ಎನ್ ಎ ಪರೀಕ್ಷೆಯಿಂದ ರಿಪೋರ್ಟ್ ನೆಗೆಟಿವ್ ಬಂದಿದೆ. ಎರಡು ಬಾರೀ ಅದೇ ರೀತಿ ಬಂದಿರೋದ್ರಿಂದ ಮತ್ತೊಮ್ಮೆ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದ್ದಾರೆ. ಎಲುಬಿಗೆ ಹೆಚ್ಚಿನ ದ್ರಾವಣ(CHEMICAL) ಸಿಂಪಡಿಸಿದ್ದರಿಂದ ಈ ರೀತಿ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ : ಉತ್ತರಕನ್ನಡ ಜಿಲ್ಲೆಗೆ ತಿರುಪತಿ ರೈಲು