ಭಟ್ಕಳ(BHATKAL) : ತಾಲೂಕಿನ ವಿವಿಧೆಡೆ ಜಾನುವಾರುಗಳನ್ನ(Cattles) ಕದ್ದು ಸಾಗಿಸುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ.

ಸಾಕಿದ ಹಸುಗಳನ್ನ ರಾತ್ರಿ ವೇಳೆ ಕದ್ದು ಐಷಾರಾಮಿ ಕಾರಿನೊಳಗೆ ತುಂಬಿ ಸಾಗಿಸಲಾಗುತ್ತಿದೆ. ಶುಕ್ರವಾರ ಬೆಳಗಿನ ಜಾವ 3-15ರ ಸುಮಾರಿಗೆ ಇಬ್ಬರು ಆಸಾಮಿಗಳು ದನ ಕದ್ದೋಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮುಖಕ್ಕೆ ಮುಸುಕು(Face Mask) ಹಾಕಿಕೊಂಡು ದನಗಳ್ಳರು ಕೃತ್ಯ ಎಸಗಿದ್ದಾರೆ. ಭಟ್ಕಳ ನಗರ(Bhatkal town) ಮತ್ತು ಗ್ರಾಮೀಣ(Rural) ಪ್ರದೇಶಗಳಲ್ಲಿ ದನ ಕದಿಯುತ್ತಿರುವ(Cow Theft) ಪ್ರಕರಣ ಇಂದು ನಿನ್ನೆಯದಲ್ಲ. ಕಳೆದ ಹಲವು ವರ್ಷಗಳಿಂದ ಈ ರೀತಿಯಾಗಿ ಕಾರಿನಲ್ಲಿ ಬಂದು ಜಾನುವಾರುಗಳನ್ನ ಕದ್ದೋಯುತ್ತಲೇ ಇದ್ದಾರೆ. ಆದರೆ ಸಂಬಂಧಪಟ್ಟ ಇಲಾಖೆಗಳಿಂದ ಯಾವುದೇ ಕ್ರಮಗಳು ಆಗದೇ ಇರುವುದು ಬೇಸರದ ಸಂಗತಿಯಾಗಿದೆ.

ಪೊಲೀಸ್ ಇಲಾಖೆಯಿಂದ(Police Department) ಹೆದ್ದಾರಿಗಳಲ್ಲಿ ಅಕ್ರಮವಾಗಿ ಸಾಗಿಸುವ ಜಾನುವಾರಗಳನ್ನ ಪತ್ತೆ ಹಚ್ಚುವ ಕಾರ್ಯ ಆಗಿದ್ದು ಬಿಟ್ಟರೆ ಬೀದಿಗಳಲ್ಲಿ ಕಳ್ಳತನ ಮಾಡುವ ದನಗಳ್ಳರನ್ನ ಹಿಡಿಯುವ ಕೆಲಸ ಆಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪ್ರಸ್ತುತ ಘಟನೆ ಬಗ್ಗೆ ಗೋ ಪ್ರೇಮಿಗಳು ಪೊಲೀಸರಿಗೆ ಮನವಿ ಮಾಡಿ ದನಗಳ್ಳರನ್ನ ಹಿಡಿಯುವಂತೆ ತಿಳಿಸಿದ್ದಾರೆ. ಇಲ್ಲದಿದ್ದಲ್ಲಿ ತಾವೇ ಕಾರ್ಯಾಚರಣೆ ನಡೆಸುತ್ತೆವೆಂದು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ರಾತ್ರಿ ವೇಳೆ ದನಗಳನ್ನ ಕಳ್ಳತನ ಮಾಡುವವರನ್ನ ಹಿಡಿದು ಕಠಿಣ ಶಿಕ್ಷೆ ನೀಡಬೇಕಾಗಿದೆ.

ಇದನ್ನು ಓದಿ : ಮತಾಂತರ ಆರೋಪ. ಹಿಂದು ಸಂಘಟನೆ ಕಾರ್ಯಕರ್ತರ ಆಕ್ರೋಶ

ಅಗ್ನಿ ಅನಾಹುತ. ಮನೆ ಅಂಗಡಿಗಳು ಭಸ್ಮ

ಜಿಂಕೆ ಬೇಟೆ ಇಬ್ಬರ ಬಂಧನ. ಇನ್ನಿಬ್ಬರು ಎಸ್ಕೇಪ್