ಕಾರವಾರ (KARWAR) : ತಾಲೂಕಿನ ಗೋಟೆಗಾಳಿ(Gotegali) ಪಂಚಾಯಿತಿ ಲಾಂಡೇ ಗ್ರಾಮದ(Lande Village) ರೈತನೋರ್ವನ ಮೇಲೆ ಕರಡಿ(Bear) ದಾಳಿ ನಡೆಸಿದೆ.
ಅರ್ಜುನ್ ಪುನೊ ವೇಳಿಪ (65) ಕರಡಿ ದಾಳಿಯಿಂದ ಗಂಭೀರ ಗಾಯಗೊಂಡಿದ್ದಾರೆ. ಕಾಳಿ ಹುಲಿ ಯೋಜನೆಯ(Kali Tiger Project) ಅಣಶಿ ವನ್ಯಜೀವಿ ವಲಯ(Anashi Wildlife Area) ವ್ಯಾಪ್ತಿಯ ಲಾಂಡೆ ಬಳಿ ಘಟನೆ ನಡೆದಿದೆ.
ರೈತ ಅರ್ಜುನ್ ವೇಳಿಪ ಶುಕ್ರವಾರ ಬೆಳಿಗ್ಗೆ ತಮ್ಮ ಜಮೀನಿನ ಕಡೆ ಹೋಗುತ್ತಿದ್ದಾಗ ಏಕಾಏಕಿ ಕರಡಿ ದಾಳಿ ಮಾಡಿದೆ. ಪರಿಣಾಮವಾಗಿ ಕಣ್ಣು, . ಮುಖ, ಎದೆಗೆ ಪರಚಿ ತೀವೃ ಗಾಯಗೊಳಿಸಿದೆ. ಗಾಯಗೊಂಡ ಅವರನ್ನ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ(Karwar District Hospital) ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಂಬಂಧಪಟ್ಟ ಅರಣ್ಯ ವಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : ಭಟ್ಕಳದಲ್ಲಿ ದನಗಳ್ಳರ ಹಾವಳಿ.
ಮತಾಂತರ ಆರೋಪ. ಹಿಂದು ಸಂಘಟನೆ ಆಕ್ರೋಶ