ಹಳಿಯಾಳ(Haliyal) : ಪಟ್ಟಣದ ಹೃದಯ ಭಾಗದಲ್ಲಿರುವ ಮನೆ ಮತ್ತು ಅಂಗಡಿಗಳಿಗೆ ಬೆಂಕಿ(Fire) ತಗುಲಿದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ಸುರೇಂದ್ರ ಮಹಾಲೆ ಎನ್ನುವವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್(Short Circut) ನಿಂದಾಗಿ ಅಗ್ನಿ ಅವಘಡ ಸಂಭವಿಸಿದ್ದು ಮನೆಯಲ್ಲಿರುವ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿವೆ. ಮನೆಯಲ್ಲಿ ಯಾರು ಇಲ್ಲದೆ ಇರುವುದರಿಂದ ಯಾವುದೇ ಪ್ರಾಣಪಾಯವಾಗಿಲ್ಲ. ಮನೆಯು ಹಳೆಯದಾಗಿದ್ದು ಸಂಪೂರ್ಣ ಕಟ್ಟಿಗೆಯಿಂದ ನಿರ್ಮಾಣವಾಗಿದ್ದುದರಿಂದ ಅಗ್ನಿಯ ಕೆನ್ನಾಲಿಗೆ ಪಕ್ಕದ ಆರು ಅಂಗಡಿಗಳಿಗೆ ವ್ಯಾಪಿಸಿದೆ.
ಗದಿಗೆಪ್ಪಾ ಖಾನಾವಳಿ, ರವಿ ಝೆರಾಕ್ಸ್ ಸೆಂಟರ್, ಆರ್ ಎನ್ ಎಸ್ ಎಲೆಕ್ಟ್ರಿಕಲ್ಸ್, ಅಪ್ಪು ಜ್ಯುವೆಲ್ಲರಿಗೆ ಬೆಂಕಿ ಹೊತ್ತಿಕೊಂಡಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿಗಳು ಆಗಮಿಸಿದ್ದು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು.
ಮಳೆ ಸುರಿಯುತ್ತಿದ್ದರೂ ಸಹ ಬೆಂಕಿ ಆರಿಸಲು ಕಷ್ಟ ಸಾಧ್ಯವಾಯಿತು. ಹಳಿಯಾಳ ಪೊಲೀಸ್ ಠಾಣಾ(Haliyal Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ : ಜಿಂಕೆ ಬೇಟೆ ಇಬ್ಬರ ಬಂಧನ
ಮಿಡಿಯುವ ಹೃದಯಕ್ಕೆ ಸ್ಪಂದಿಸಿದ ಕೇರಳ ಸಂಘ ಸಂಸ್ಥೆಗಳು