ಕಾರವಾರ(Karwar): ನಗರದ ಗುನಗಿವಾಡದ(Gunagiwada) ಮನೆಯೊಂದರಲ್ಲಿ ಅನಧಿಕೃತವಾಗಿ ಅನ್ಯ ಧರ್ಮಿಯರನ್ನ ಸೇರಿಸಿ ಮತಾಂತರ ಮಾಡುತ್ತಿದ್ದಾರೆಂದು ಆರೋಪಿಸಿ ಹಿಂದು ಸಂಘಟನೆ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಸ್ಥಳೀಯ ಸಂಸ್ಥೆಗಳಿಂದ ಯಾವುದೇ ಪರವಾನಿಗೆ ಪಡೆಯದೇ ಮನೆಯನ್ನೇ ಚರ್ಚ್(Church) ಆಗಿ ಪರಿವರ್ತಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗುರುವಾರ ಬೆಳಿಗ್ಗೆ ಅನ್ಯ ಕೋಮಿನ ಬಡ ನಾಗರಿಕರು, ಅಂಕೋಲಾ ಕಡೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಬಂದಿರುವ ವಿಷಯ ತಿಳಿದು ಸಂಘಟನೆ ಕಾರ್ಯಕರ್ತರು ಆಗಮಿಸಿದ್ದರು.

ಮನೆಯ ಸಾಮ್ರಾಜ್ ಎಂಬುವವರ ಬಳಿ ನಿಮಗೆ ಚರ್ಚ್ ನಡೆಸಲು ಅನುಮತಿ ಸಿಕ್ಕಿದೆಯೇ ಎಂದು ಪ್ರಶ್ನಿಸಿದಾಗ ಹೌದು ಎಂದರು. ಬಳಿಕ ಇಲ್ಲಾ ಕೋಡಿಭಾಗದಲ್ಲಿ(Kodibhag) ಮೊದಲು ನಾವು ಪ್ರಾರ್ಥನೆ(Prayer) ಮಾಡುತ್ತಿದ್ದೇವು. ಅಲ್ಲಿ ಕಟ್ಟಡ ಬಿದ್ದು ಹೋದ ನಂತರ ಇಲ್ಲಿ ಮಾಡುತ್ತಿದ್ದೆವು ಎಂದರು. ಆಗ ಸಂಘಟನೆ ಕಾರ್ಯಕರ್ತರು ನೀವು ಪ್ರಾರ್ಥನೆ ಮಾಡಲು ಯಾವುದೇ ಅಡ್ಡಿಯಿಲ್ಲ. ಆದರೆ ಸಂಭಂದ ಪಟ್ಟವರ ಅನುಮತಿ ಪಡೆಯದೇ ಮಾಡಿದ್ದಕ್ಕೆ ನಮ್ಮ ಆಕ್ಷೇಪವಿದೆ ಎಂದರು.

ಮತಾಂತರ ಆರೋಪ :  ಮನೆಗೆ ಚರ್ಚ್ ಬೋರ್ಡ್ ಅಳವಡಿಸಿ ಅನ್ಯಧರ್ಮೀಯರೊಂದಿಗೆ ಪ್ರಾರ್ಥನೆ ಮಾಡುತ್ತಿದ್ದಾರೆ. ರೋಗ ವಾಸಿ ಮಾಡುವ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆಂದು ಸಂಘಟನೆ ಕಾರ್ಯಕರ್ತರು ಗಂಭೀರ ಆರೋಪ ಮಾಡಿದರು. ಈ ವೇಳೆ  ವಾಗ್ವಾದ ನಡೆಯಿತು. ಕಾರವಾರ ನಗರ ಪೊಲೀಸರು(Karwar Town Police) ಸ್ಥಳದಲ್ಲಿದ್ದು ಪರಿಸ್ಥಿತಿ ನಿಯಂತ್ರಿಸಿದರು.

ಇದನ್ನು ಓದಿ : ಅಗ್ನಿ ಅನಾಹುತದಿಂದ ಮನೆ ಮತ್ತು ಅಂಗಡಿಗಳು ಭಸ್ಮ

ಜಿಂಕೆ ಬೇಟೆ ಇಬ್ಬರ ಬಂಧನ. ಇಬ್ಬರು ಎಸ್ಕೇಪ್

ಅರೆಬೈಲ್ ಘಟ್ಟದಲ್ಲಿ ಲಾರಿ ಪಲ್ಟಿ