ಭಟ್ಕಳ (BHATKAL) : ಕುಸಿದು ಬಿದ್ದ ಮಹಿಳೆಯೋರ್ವಳು(Women) ಸಾವನ್ನಪ್ಪಿದ ಘಟನೆ ತಾಲೂಕಿನ ಮುಂಡಳ್ಳಿ ಗ್ರಾಮದಲ್ಲಿ (Mundalli Village) ನಡೆದಿದೆ.
ಮುಂಡಳ್ಳಿಯ ನೀರಗದ್ದೆ ನಿವಾಸಿ ಫೇಲ್ಸಿಟಾ ಡಿಸೋಜಾ (28) ಮೃತ ದುರ್ದೈವಿ. ಹೃದಯ ಸಂಬಂಧಿ ಕಾಯಿಲೆಯಿಂದ (Heart decease) ಬಳಲುತ್ತಿದ್ದ ಈಕೆ . ಶಸ್ತ್ರಚಿಕಿತ್ಸೆ ಕೂಡ ಮಾಡಿಸಿಕೊಂಡಿದ್ದು, ಔಷಧೋಪಚಾರದಲ್ಲಿದ್ದರು. ಎರಡು ವರ್ಷಗಳ ಹಿಂದೆ ನೀರಗದ್ದೆಯ ಜೋಯಲ್ ಎಂಬುವವರನ್ನ ಮದುವೆಯಾಗಿದ್ದರು. ನಿನ್ನೆ ಶುಕ್ರವಾರ (Friday) ಸಂಜೆ ಮನೆಯಲ್ಲಿದ್ದಾಗ ತನಗೆ ಏನೋ ಆಗುತ್ತಿದೆ ಎಂದು ಕೆಳಕ್ಕೆ ಕುಸಿದು ಬಿದ್ದಿದ್ದಾಳೆ.
ತಕ್ಷಣ ಗಂಡ ಜೋಯಲ್ ಭಟ್ಕಳ ತಾಲೂಕು ಆಸ್ಪತ್ರೆಗೆ (Bhatkal Taluku Hospital ) ದಾಖಲಿಸಿದ್ದರು. ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ಬರುವ ಪೂರ್ವದಲ್ಲಿಯೇ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮೃತರ ಸಹೋದರಿ ಹೊನ್ನಾವರ (Honnavar) ತಾಲೂಕಿನ ಕಾಸರಕೋಡ ಟೊಂಕ (Kasarakodu Tonka) ನಿವಾಸಿ ಸ್ಟೇಫಿಯಾ ಫರ್ನಾಂಡಿಸ್ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾರೆ.
ಇದನ್ನು ಓದಿ : ಅದೃಷ್ಟದ ಕಾರು ಮಾರಲಿಲ್ಲ. ಗುಜರಿಗೆ ಹಾಕಲಿಲ್ಲ. ಏನು ಮಾಡಿದ
ಇನ್ನೂ ಮಹಿಳೆಯರ ಅಳತೆ ಪುರುಷ ಮಾಡಾಂಗಿಲ್ಲ.