ಬೆಂಗಳೂರು(Banglore) :  ಫೆಂಗಲ್ ಚಂಡಮಾರುತದ‌(Phengal Cyclone) ಅಬ್ಬರ ರಾಜ್ಯದ ಮೇಲೂ ಪರಿಣಾಮ ಬೀರಿದೆ. ವಿವಿಧ ಜಿಲ್ಲೆಗಳಲ್ಲಿ ಮಳೆ ಆರ್ಭಟಿಸಿದೆ.

ಮೈಸೂರು(Mysore), ಮಂಡ್ಯ(Mandya) ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು ಡಿಸೆಂಬರ್ ಮೂರರಂದು  ರಜೆ ಘೋಷಿಸಲಾಗಿದೆ. ಬಂಗಾಳಕೊಲ್ಲಿಯ(Bangalakolli) ಫೆಂಗಲ್ ಚಂಡಮಾರುತ (Phengal Cyclone) ಅಬ್ಬರದಿಂದಾಗಿ  ಉಡುಪಿ(Udupi) ಮತ್ತು ಮಂಗಳೂರಿನಲ್ಲಿ(Manglore) ಅರಬ್ಬೀ ಸಮುದ್ರ ತೀರ(Ocean Sea) ಪ್ರದೇಶದಲ್ಲಿ  ಭಾರೀ ಮಳೆಯಾಗುತ್ತಿದೆ.

ಉಡುಪಿ ಜಿಲ್ಲೆಯ ಕಾರ್ಕಳ(Karkal), ಕಾಪು(Kapu) -ಕುಂದಾಪುರ(Kundapura), ಬೈಂದೂರು ಹೆಬ್ರಿ(Byanduru Hebri) ತಾಲೂಕಿನಾದ್ಯಂತ ಮಳೆ ಗುಡುಗು ಮಿಂಚು  ಸಹಿತ ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ. ಜಿಲ್ಲೆಯಲ್ಲಿ ಅಲರ್ಟ್ ಘೋಷಿಸಲಾಗಿದೆ.  ಮಳೆಯಿಂದ ಉಡುಪಿ ನಗರದ ಕೆಲ ಮುಖ್ಯರಸ್ತೆಗಳು ಜಲಾವೃತವಾಗಿದ್ದು  ರಸ್ತೆಗಳಲ್ಲಿ ವಾಹನ ಸಂಚರಿಸಲು  ಹರಸಾಹಸ ಪಡಬೇಕಾಯಿತು. ಸಿಡಿಲು, ಮಿಂಚು ಸಹಿತ ಗಾಳಿ ಮಳೆಗೆ ಹಲವೆಡೆ  ವಿದ್ಯುತ್ ವ್ಯತ್ಯಯ ಉಂಟಾಗಿದೆ. ಕೆಲವು ವಾಹನಗಳು ರಸ್ತೆ ಮಧ್ಯೆಯೇ ಕೆಟ್ಟುನಿಲ್ಲುವಂತಾಯಿತು. ಅಕಾಲಿಕ ಮಳೆಯಿಂದಾಗಿ  ಉಡುಪಿ ನಗರ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತವಾಯಿತು.

ಫೆಂಗಲ್ ಚಂಡಮಾರುತದ ಅಬ್ಬರ ಚಿಕ್ಕಮಗಳೂರು(Chikamanglore) ಜಿಲ್ಲೆಯ ಮೂಡಿಗೆರೆ(Mudigere) ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್(Charmadighat), ಬಣಕಲ್, ಬಾಳೂರು ಭಾಗದಲ್ಲಿ ಭಾರೀ ಮಳೆ ಸುರಿದಿದೆ. ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ಥವಾಗಿದ್ದು, ಕೊಯ್ಲಿಗೆ ಬಂದಿರೋ ಕಾಫಿ ಕಂಡು ಬೆಳೆಗಾರರು ಕಂಗಾಲಾಗಿದ್ದಾರೆ.

ಇನ್ನೂ ಮಂಗಳೂರಿನಲ್ಲಿ (Manglore) ಫೆಂಗಲ್ ಚಂಡಮಾರುತ ಪ್ರಭಾವ ಹೆಚ್ಚಾಗಿದೆ. ಮಂಗಳೂರು ನಗರ ಸೇರಿದಂತೆ ಹಲವೆಡೆ  ಮಳೆ ಸುರಿದಿದ್ದು ನಗರದ ಹಲವೆಡೆ ರಸ್ತೆಗಳು  ಜಲಾವೃತವಾಗಿದೆ. ನಗರದ ಕೊಟ್ಟಾರಚೌಕಿಯಲ್ಲಿ ರಸ್ತೆ ಜಲಾವೃತವಾಗಿದ್ದು  ಏಕಾಏಕಿ ಸುರಿದ ಮಳೆಗೆ ರಾಜಕಾಲುವೆ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿದಿದೆ.

ಉತ್ತರಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ರಾತ್ರಿ ಗುಡುಗಿನೊಂದಿಗೆ ಮಳೆ ಸುರಿದಿದೆ. ಮೋಡ ಕವಿದ ವಾತಾವರವಿದ್ದು ಮಳೆ ಮತ್ತೆ ಮುಂದುವರಿಯುವ ಸಾಧ್ಯತೆ ಇದೆ.

ಡಿಸೆಂಬರ್ 3 ರಂದು ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಮೀನುಗಾರರು ಸಮುದ್ರಕ್ಕೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಇದನ್ನು ಓದಿ : ದಕ್ಷಿಣಕನ್ನಡ ಕಾಂಗ್ರೆಸ್ ನಲ್ಲಿ ಮಾರಾಮಾರಿ

phengal ಸೈಕ್ಲೋನ್ ಅಬ್ಬರ. ಶಾಲೆಗೆ ರಜೆ

ಯುವಕ ನೇಣಿಗೆ ಶರಣು

ಬಾಲಕನ ಜೀವ ತೆಗೆದ ಬಲೂನ್

ರಸ್ತೆ ಅಪಘಾತದಲ್ಲಿ ಅಧಿಕಾರಿ ಸಾವು