ಹೊನ್ನಾವರ(Honnavar) : ‘ಕೊಂಕಣಿ ಕಲಾ ಕುಟಾಮ್'(Konkani kala ಕುಟುಮ್ ) ಸಂಸ್ಥೆಯು ಪ್ರಸಕ್ತ ವರ್ಷದಿಂದ ಆರಂಭಿಸಿದ ‘ಕೊಂಕಣಿ ಕುರೊವ್’ (ಕೊಂಕಣಿ ಕಿರೀಟ) ಹೆಸರಿನ ಪ್ರಶಸ್ತಿಗೆ ಸಹಕಾರಿ ಧುರೀಣ ಸೇಂಟ್ ಮಿಲಾಗ್ರಿಸ್ (St Milagres) ಕ್ರೆಡಿಟ್ ಸೌಹಾರ್ದ ಕೋ-ಆಫ್ ಸೊಸೈಟಿ ಲಿ., ಅಧ್ಯಕ್ಷರಾದ ಜಾರ್ಜ್ ಫರ್ನಾಂಡಿಸ್ ಅವರನ್ನು ಆಯ್ಕೆ ಮಾಡಲಾಗಿದೆ.
ವಿವಿಧ ರಂಗಗಳಲ್ಲಿ ಅದ್ಭುತ ಸಾಧನೆ ಮಾಡಿದ ಜಿಲ್ಲೆಯ ಕೊಂಕಣಿ ಭಾಷಿಕರಿಗೆ ನೀಡುವ ಚೊಚ್ಚಲ ಪ್ರಶಸ್ತಿ (Award) ಜಾರ್ಜ್ ಅವರಿಗೆ ನೀಡಲಾಗುತ್ತಿದೆ. ಡಿ.8ರಂದು ಭಾನುವಾರ ಸಂಜೆ 6:30 ಗಂಟೆಗೆ ಪಟ್ಟಣದ ನ್ಯೂ ಇಂಗ್ಲೀಷ ಶಾಲೆಯ(New English School) ಸಭಾಭವನದಲ್ಲಿ ಜರಗುವ ಕೊಂಕಣಿ 2 ಕಲಾ ಕುಟಾಮ್ ಸಂಸ್ಥೆಯ 13ನೇ ವಾರ್ಷಿಕೋತ್ಸವದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ(Konkani Sahitya Academi) ಮಂಗಳೂರು(Mangalore) ಇದರ ಅಧ್ಯಕ್ಷ ಜೊಕಿಂ ಸ್ಪ್ಯಾನಿ ಆಲ್ವಾರಿಸರವರು ಆಗಮಿಸುತ್ತಿದ್ದಾರೆ. ಮುಖ್ಯ ಅತಿಥಿಯಾಗಿ ಹೊನ್ನಾವರದ ಖ್ಯಾತ ಉದ್ಯಮಿ ಶ್ರೀಕಾಂತ ಸುಬ್ರಾಯ ನಾಯ್ಕ ಉಪಸ್ಥಿತರಿರುವರೆಂದು ಸಂಸ್ಥೆಯ ಅಧ್ಯಕ್ಷ ಸ್ಟೇಪನ ರೊಡ್ರಿಗಿಸ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ‘ಕೊಂಕಣಿ ಕುಟಾಮ್’ ಡ್ರಾಮಾ ಅವಾರ್ಡ್ಸ್ 2024 ನ್ನು ಸಹ ನೀಡಲಾಗುತ್ತಿದ್ದು, 2024 ರ ಅವಧಿಯಲ್ಲಿ ಪ್ರದರ್ಶನಗೊಂಡ ಜಿಲ್ಲೆಯ ಅತ್ಯುತ್ತಮ ಕೊಂಕಣಿ ನಾಟಕಕ್ಕೆ ಪ್ರಥಮ, ದ್ವಿತಿಯ, ತೃತೀಯ ಸ್ಥಾನಗಳನ್ನು ನೀಡಲಾಗುತ್ತಿದ್ದು ಟ್ರೋಫಿಯೊಂದಿಗೆ ಕ್ರಮವಾಗಿ 15,000/-, 10,000/-, 5,000/- ನೀಡಿ ಗೌರವಿಸಲಾಗುತ್ತದೆ.
ಅದಲ್ಲದೆ ಶ್ರೇಷ್ಠ ನಟ, ನಟಿ, ಶ್ರೇಷ್ಠ ಹಾಸ್ಯಗಾರ, ಹಾಸ್ಯಗಾರ್ತಿ, ಶ್ರೇಷ್ಠ ಖಳನಾಯಕ, ಶ್ರೇಷ್ಠ ಲೇಖಕ, ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಮಂಗಳೂರಿನ ಪ್ರತಿಷ್ಠಿತ ‘ಮಾಂಡ ಸೊಭಾಣ’ ಸಂಸ್ಥೆಯ ಕಲಾಕುಲ ಪಂಗಡದವರಿಂದ ‘ಆಯಿಕ್ ಸಯಿಕ’ ಎಂಬ ಹಾಸ್ಯಮಯ ಕೊಂಕಣಿ ನಾಟಕ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು ಹಾಗೂ ಕೊಂಕಣಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.
ಇದನ್ನು ಓದಿ : ಉದ್ಯಮಿ ಆರ್ ಎನ್ ನಾಯಕ ಹತ್ಯೆ ಆರೋಪಿ ಬನ್ನಂಜೆ ಸಹಚರ ಸಾವು.
ಆರೋಗ್ಯಕ್ಕಾಗಿ ಪ್ರಾರ್ಥಿಸಿ ತಿಮ್ಮಪ್ಪನಿಗೆ ಮುಡಿ ಅರ್ಪಿಸಿದ ಶಿವರಾಜಕುಮಾರ್ ದಂಪತಿ
ಗೋವಾ ಸರಪಂಚನ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಕಾರವಾರದಲ್ಲಿ ಹಗ್ಗ ಕಟ್ಟಿದ ಪೊಲೀಸರು.
ಮೀಸಲು ಅರಣ್ಯದಲ್ಲಿ ಬೆಲೆ ಬಾಳುವ ಮರಗಳ್ಳತನ ಮಾಡಿದ ಹತ್ತು ಜನರು ಹೆಡೆಮುರಿಗೆ.