ಕಾರವಾರ (Karwar) : ಮೀನು ತಿಂದರಷ್ಟೇ ಸಾಲದು, ಮೀನು ಹಿಡಿಯುವ(Fish Catching) ಕಲೆ ಕರಗತ ಮಾಡಿಕೊಂಡರೆ ಜಾಸ್ತಿಜಾಸ್ತಿ ಮೀನು ತಿನ್ನಬಹುದು. ಹೀಗಾಗಿ ಕಾರವಾರದ ಯುವ ಮೀನುಗಾರ ಸಂಘರ್ಷ ಸಮಿತಿ (Yuva Meenugarara Sangharsha Sameeti) ವತಿಯಿಂದ ಅಪರೂಪದ ಮೀನು ಹಿಡಿಯುವ ಮುಕ್ತ ಸ್ಪರ್ಧೆ(Hook Fish Catching) ಏರ್ಪಡಿಸಲಾಗಿದೆ.
2025 ಫೆಬ್ರವರಿ 9 ಭಾನುವಾರದಂದು ಬೈತಖೋಲದ ಬ್ರೇಕ್ ವಾಟರ್(Baitkol Breakwater) ಹತ್ತಿರ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ನಡೆಯಲಿದೆ. ಈಗಾಗಲೇ ಈ ಸ್ಪರ್ಧೆಗೆ ಕೋಲ್ಕತ್ತಾ(Kolkatta), ಗೋವಾ(Goa) ಕಡೆಗಳಿಂದ ಸ್ಪರ್ಧೆಗೆ ಹಲವರು ಇಚ್ಚಿಸಿದ್ದು, ಇನ್ನೂ ನೂರಾರು ಜನರು ಗಾಳ ಹಾಕಿ ಮೀನು ಹಿಡಿಯಲು ಉತ್ಸುಕರಾಗಿದ್ದಾರೆ.
ಅತಿ ಹೆಚ್ಚು ಮೀನುಗಳನ್ನ ಹಿಡಿದವರಿಗೆ ಪ್ರಥಮ ಬಹುಮಾನ ನಗದು ಹಾಗು ಆಕರ್ಷಕ ಟ್ರೋಫಿ, ದ್ವಿತೀಯ ಹಾಗು ತೃತೀಯ ಬಹುಮಾನ ನಗದು ಹಾಗೂ ಆಕರ್ಷಕ ಟ್ರೋಫಿ ನಿಡಲಾಗುವುದು. ಅತಿ ದೊಡ್ಡ ಮೀನು ಹಿಡಿದವರಿಗೂ ವಿಶೇಷ ಬಹುಮಾನ ನೀಡಲಾಗುತ್ತದೆ.
ಇನ್ನೂ ಭಾಗವಹಿಸಲು ಇಚ್ಚಿಸುವವರು ಮುಂಚಿತವಾಗಿ ಅಥವಾ ಅದೇ ದಿನ ಬೆಳಿಗ್ಗೆ 6:30 ರ ಒಳಗೆ ಪ್ರವೇಶ ಶುಲ್ಕ 300ರೂ.ಯೊಂದಿಗೆ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ಸಂಘಟಕರು ತಿಳಿಸಿದ್ದಾರೆ. ಭಾಗವಹಿಸಿದವರಿಗೆ ಮೀನಿನ ಊಟದ ವ್ಯವಸ್ಥೆ ಇದೆ.
ಹೆಚ್ಚಿನ ಮಾಹಿತಿ ಮತ್ತು ನೊಂದಣಿಗಾಗಿ ಸಂಪರ್ಕಿಸಬೇಕಾದ ಹೆಸರು ಮತ್ತು ಮೊಬೈಲ್ ನಂ : ವಿನಾಯಕ ಹರಿಕಂತ್ರ ಬೈತಖೋಲ 8618673883, ಶ್ರೀನಿವಾಸ ಅಂಬಿಗ ಮುದಗಾ +919900306245, ವಿಶ್ವಾಸ ತಲ್ಪಣಕರ ವೈಲವಾಡ +91 72279 15330.
ಇದನ್ನು ಓದಿ : ಕೊಟ್ಟ ಸಾಲ ವಾಪಾಸ್ ನೀಡಿಲ್ಲ ಎಂದು ಅಪ್ರಾಪ್ತೆಗೆ ಮದುವೆ.
ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ದೋಷಿ ಎಂದು ಸಾಬೀತು.
ಗ್ರಾಮೀಣ ಸೊಗಡಿನ ಕೊಗ್ತಿ ಜಾತ್ರೆ ಸಂಪನ್ನ.
ಯಕ್ಷ ದಿಗ್ಗಜನ ಆಸೆ ಈಡೇರಿಸಿದ ಹಿರಿಯ ನಟಿ. ಪ್ರೇಕ್ಷಕರ ಎದುರು ಸಖತ್ ಮಿಂಚಿಂಗ್.