ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) :  ಹೊನ್ನಾವರ (Honnavar) : ಸಾಲ್ಕೋಡು ಗ್ರಾಮದ ಕೊಂಡಾಕುಳಿಯ ಗೋ ಹತ್ಯೆ(Cow Killed) ಪ್ರಕರಣದ ಪ್ರಮುಖ ಆರೋಪಿಯನ್ನ ಬಂಧಿಸುವ ಸಂದರ್ಭದಲ್ಲಿ ಪೊಲೀಸರು ಪೈರಿಂಗ್ (Police Firing) ಮಾಡಿದ ಘಟನೆ ಶನಿವಾರ ಸಂಜೆ ನಡೆದಿದೆ.

ಹೊನ್ನಾವರದ ದುಗೂರುಗುಡ್ಡದಲ್ಲಿ (Honnavar Dugurugudda) ಈ ಘಟನೆ ನಡೆದಿದೆ. ಕಾಸರಕೋಡಿನ(Kasarakodu) ಪೈಜಾನ್ ಹಸನ್ ಕೇವ್ಕಾ ಗುಂಡೇಟು ತಿಂದ ಆರೋಪಿ. ಈತನನ್ನ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರದಂದು ವಲ್ಕಿ ಗ್ರಾಮದ ತೌಪಿಕ್ ಅಹಮದ್ ಜಿದ್ದಾ ಎಂಬಾತನನ್ನ ಇದೇ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಇಂದು ಕಾಸರಕೋಡು ಟೋಮಕ ಪೈಜಾನ್ ಹಸನ್ ಕೇವ್ಕಾ ಎಂಬಾತನನ್ನ ಬಂಧಿಸಲಾಗಿದೆ.

ಇವತ್ತು ಪೊಲೀಸರ ಕೈಗೆ ಸಿಕ್ಕಿಬಿದ್ದ ಪೈಜಾನ್ ನನ್ನ ಪಂಚನಾಮೆಗೆ ಕರೆದೋಯ್ಯುವ ಸಂದರ್ಭದಲ್ಲಿ ದುಗೂರು ರಸ್ತೆ ಸಮೀಪ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದ. ಹೀಗಾಗಿ ಪೊಲೀಸರು ಪೈರಿಂಗ್(Police Firing) ಮಾಡಿದ್ದಾರೆ. ಹೀಗಾಗಿ  ಕಾಲಿಗೆ ಗುಂಡೇಟು ತಗುಲಿದೆ.

ಜನವರಿ 19ರಂದು ಹೊನ್ನಾವರ ತಾಲೂಕಿನ ಸಾಲ್ಕೋಡು ಕೊಂಡಾಕುಳಿಯ(Salkodu Kondakuli) ಕೃಷ್ಣಾ ಆಚಾರಿ ಎಂಬುವವರ ಗರ್ಭಧರಿಸಿದ ಆಕಳನ್ನ ಹತ್ಯೆ ಮಾಡಿ ಮಾಂಸ ಒಯ್ಯಲಾಗಿತ್ತು. ಮನೆಯವರು ಹುಡುಕಾಟ ನಡೆಸಿದಾಗ ಹತ್ತಿರದ ಕಾಡಿನಲ್ಲಿ ಆಕಳಿನ ರುಂಡ, ಕೊಂಬು ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿ ಹೊನ್ನಾವರ ಠಾಣೆಯಲ್ಲಿ(Honnavar Station) ಪ್ರಕರಣ ದಾಖಲಾಗಿತ್ತು. ಪ್ರಕರಣ ಇಡೀ ರಾಜ್ಯವನ್ನ ತಲ್ಲಣಿಸಿತ್ತು.

ಚಾಮರಾಜಪೇಟೆಯಲ್ಲಿ (Chamarajapete) ಆಕಳ ಕೆಚ್ಚಲು ಕೊಯ್ದ ಪ್ರಕರಣದ ಬೆನ್ನಲ್ಲೇ ಹೊನ್ನಾವರದಲ್ಲಿ ಇಂಥ ಘಟನೆ ನಡೆದಿರೋದಕ್ಕೆ ಸರ್ಕಾರ ಸಹ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿತ್ತು. ಆರೋಪಿಗಳನ್ನ ಬಂಧಿಸಿ ಇಂಥ ಕೃತ್ಯ ನಡೆಯದಂತೆ ಪೊಲೀಸರಿಗೆ ಗೃಹ ಸಚಿವರು(Home Minister) ಸೂಚಿಸಿದ್ದರು. ಹೀಗಾಗಿ ಎಸ್ಪಿ ನಾರಾಯಣ್ ಅವರು ಪ್ರಕರಣ ಭೇಧಿಸಲು ಐದು ತಂಡ ರಚಿಸಿದ್ದರು. ಇದೀಗ ಪ್ರಕರಣ ಸಂಬಂಧ ಇಬ್ಬರನ್ನ ಬಂಧಿಸಲಾಗಿದೆ.

ಈ ನಡುವೆ  ಭಟ್ಕಳ(Bhatkal) ಮತ್ತು ಹೊನ್ನಾವರದಲ್ಲಿ(Honnavar) ಗೋವು ಕಳ್ಳತನ ಮತ್ತು ಹತ್ಯೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿ ಹಲವರನ್ನ ಪೊಲೀಸರು ಬಂಧಿಸಿದ್ದಾರೆ. ಸಾಲ್ಕೋಡು ಕೊಂಡಾಕುಳಿ ಪ್ರಕರಣ ಸಂಬಂಧ ಇನ್ನೂ ಆರೋಪಿಗಳಿಗಾಗಿ  ಶೋಧವನ್ನ ಪೊಲೀಸರು ಮುಂದುವರಿಸಿದ್ದಾರೆ.

ಇದನ್ನು ಓದಿ : ಮಹಾಕುಂಭಮೇಳದಲ್ಲಿ ಬಾಲಿವುಡ್ ಮಾದಕ ನಟಿಗೆ ಸನ್ಯಾಸ ದೀಕ್ಷೆ.

ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಪ್ರೀತಿಯ ಶಿವರಾಜಕುಮಾರ್

ಹಸುವಿನ ಹತ್ಯೆ ಪ್ರಕರಣದಲ್ಲಿ ಓರ್ವನ ಸೆರೆ. ಪ್ರಮುಖ ಆರೋಪಿಗಳಿಗಾಗಿ ಮುಂದುವರಿದ ತಲಾಶ್.

ಹಿಚ್ಕಡ ಬಯಲು ರಂಗಮಂದಿರದ ಯಕ್ಷಪ್ರದರ್ಶನಕ್ಕೆ 50ರ ಸಂಭ್ರಮ; ಯಕ್ಷಪಟುಗಳಿಗೆ ಸನ್ಮಾನ

ಅಕ್ರಮವಾಗಿ ಸಾಗುವಾನಿ ದಾಸ್ತಾನು ಮಾಡುತ್ತಿದ್ದ ನಾಲ್ವರ ಬಂಧನ.