ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) :  ರಾಷ್ಟ್ರೀಯ ಹೆದ್ದಾರಿ 66ರ(NH 66) ಹಟ್ಟಿಕೇರಿ ಟೋಲ್‌ಗೇಟ್‌ (Hattikeri Tollgate) ಬಳಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಪೊಲೀಸ್ ಪೇದೆ ಸೇರಿ ಇಬ್ಬರನ್ನ ಅಂಕೋಲಾ ಪೊಲೀಸರು ಬಂಧಿಸಿದ್ದಾರೆ(Police Arrest).

ಗೋವಾದಿಂದ (Goa) ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಹಳಿಯಾಳ ಪೊಲೀಸ್‌ ಠಾಣೆಯಲ್ಲಿ (Haliyal Police Station) ಕರ್ತವ್ಯ ನಿರ್ವಹಿಸುತ್ತಿರುವ ಸಂತೋಪ ಲಮಾಣಿ ಮತ್ತು ಮಂಡ್ಯ ಜಿಲ್ಲೆಯ(Mandya District) ದಿವಾಕರ ಆ‌ರ್. ಇರಯ್ಯ ಕೃಷ್ಣಪ್ಪ  ಬಂಧಿತರು. ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಆರೋಪಿತರು KA42, M-2190 ನಂಬರ್‌ನ ಸ್ವಿಫ್ಟ್ ಕಾರಿನಲ್ಲಿ(Swift Car) ಸುಮಾರು 80 ಸಾವಿರ ಮೌಲ್ಯದ ಅಕ್ರಮ ಗೋವಾ ಮದ್ಯವನ್ನ (Goa Liquor) ಶಿವಮೊಗ್ಗ(Shivamogga) ಹಾಗೂ ಮಂಡ್ಯ (Mandya) ಕಡೆ ಸಾಗಿಸುತ್ತಿದ್ದರೆನ್ನಲಾಗಿದೆ. ಖಚಿತ ಮಾಹಿತಿ ತಿಳಿದ ಅಂಕೋಲಾ ಪೊಲೀಸರು ದಾಳಿ(Ankola Police Raid)  ನಡೆಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿರುವ ಸಂತೋಷ ಲಮಾಣಿ  ತಪ್ಪಿಸಿಕೊಂಡು ಬೈಕ್‌ ಮೇಲೆ ತೆರಳುತ್ತಿದ್ದಾಗ ಆತನ ಬೆನ್ನಟ್ಟಿದ್ದ ಅಂಕೋಲಾ ಪೊಲೀಸರು ಕಾರವಾರ ತಾಲೂಕಿನ ಅಸ್ಪೋಟಿ(Asnoti) ಬಳಿ  ಬಂಧಿಸಿದ್ದಾರೆ.

ಸಂತೋಷ್ ಲಮಾಣಿ ಈ ಹಿಂದೆ ಕದ್ರಾ ಪೊಲೀಸ್ ಠಾಣೆಯಲ್ಲಿ(Kadra Police Station) ಕರ್ತವ್ಯದಲ್ಲಿರುವಾಗ ಸಹ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದಾಗ  ಗೋಕರ್ಣ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ.  ಬಳಿಕ ಹಳಿಯಾಳ ಠಾಣೆಗೆ (Haliyal Station) ವರ್ಗಾವಣೆ ಮಾಡಲಾಗಿತ್ತು. ಆದರೂ ಸಹ ತನ್ನ ಮದ್ಯ ಸಾಗಾಟ ದಂದೆ ಮುಂದುವರಿಸಿದ್ದಾನೆ.

ಹೀಗಾಗಿ ಪೊಲೀಸ್‌ ಇಲಾಖೆಗೆ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಕೆಟ್ಟ ಹೆಸರು ತರುತ್ತಿದ್ದಾನೆ. ಇಲಾಖೆಯ ಹಿರಿಯ ಅಧಿಕಾರಿಗಳು ಮುಂದೆ ಯಾವ ತೀರ್ಮಾನ ತೆಗೆದುಕೊಳ್ತಾರೆ ಕಾದು ನೋಡಬೇಕು.

ಇದನ್ನು ಓದಿ : ಹೈ ಹೀಲ್ಸ್ ಕೊಡಿಸದ ಪತಿಯ  ವಿರುದ್ಧ ಪತ್ನಿ ದೂರು.

/ ಫೆ.13ಕ್ಕೆ ಉಳವಿ ಮಹಾರಥೋತ್ಸವ. ಭಕ್ತರ ಗಮನಕ್ಕೆ.

ಭಟ್ಕಳದಲ್ಲಿ ಜೂಜಾಟ ಅಡ್ಡೆ ಮೇಲೆ ಪೊಲೀಸರ ದಾಳಿ. ಏಳು ಜನರ ಬಂಧನ.

/ ಬಡ್ಡಿ ದಂಧೆಕೋರರ ಮೀಟರ್ ಇಳಿಸಿದ ಪೊಲೀಸರು. ಇಬ್ಬರ ಬಂಧನ