ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉತ್ತರಪ್ರದೇಶ (Uttarapradesh): ಮಹಾ ಕುಂಭಮೇಳದಲ್ಲಿ 30 ಕೋಟಿ ಆದಾಯ ಗಳಿಸಿದ್ದ ನಾವಿಕ(Sailor) ಕುಟುಂಬಕ್ಕೆ ಈಗ ಸಂಕಷ್ಟ ಎದುರಾಗಿದೆ.
ನಾವಿಕ ಪಿಂಟು ಮಹಾರ್(Pintu Mahar) ತಮ್ಮ ತಾಯಿಯ ಚಿನ್ನವನ್ನು ಅಡವಿಟ್ಟು ಸುಮಾರು 70 ಬೋಟ್ಗಳನ್ನು ಕುಂಭಮೇಳಕ್ಕೂ(Kumbhamela) ಮುಂಚೆ ಖರೀದಿ ಮಾಡಿದ್ದರು. ಇವರು 45 ದಿನಗಳ ಕುಂಭಮೇಳದಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿ ಆದಾಯ ಗಳಿಸಿದ್ದರು. ಈ ಕುಟುಂಬದ ಕಥೆಯನ್ನು ಸ್ವತಃ ಯೋಗಿ ಆದಿತ್ಯನಾಥ್ (Yogi Adityanath) ವಿಧಾನಸಭೆಯಲ್ಲಿ ಹೇಳಿದ್ದರು.
ಈಗ ರೂ 30 ಕೋಟಿ ಗಳಿಸಿದ್ದ ನಾವಿಕ ರೂ 12.80 ಕೋಟಿ ತೆರಿಗೆ ಕಟ್ಟಬೇಕಾಗಿದೆ. ತೆರಿಗೆ ಅಧಿಕಾರಿಗಳು ತಮ್ಮ ಪಾಲನ್ನು ಕೇಳುತ್ತಿರುವುದರಿಂದ ಅವರ ಅನಿರೀಕ್ಷಿತ ಸಂಪತ್ತು ಆರ್ಥಿಕ ಸವಾಲಾಗಿ ಪರಿಣಮಿಸಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಉತ್ತರ ಪ್ರದೇಶ (Uttarapradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಧ್ಯಸ್ಥಿಕೆ ವಹಿಸಬೇಕೆಂದು ಹಲವರು ಮನವಿ ಮಾಡಿದ್ದಾರೆ.
2019ರ ಅರ್ಧಕುಂಭ ಮೇಳದ ವೇಳೆಯೂ ಪಿಂಟು ಕುಟುಂಬದವರು ದೋಣಿ ನಡೆಸುತ್ತಿದ್ದರು. ಮಹಾಕುಂಭದ ವೇಳೆಗೆ ವೃತ್ತಿಯನ್ನು ವಿಸ್ತರಿಸುವ ಕನಸು ಇತ್ತಾದರೂ ಆರ್ಥಿಕ ಶಕ್ತಿ ಇರಲಿಲ್ಲ. ಹಾಗಾಗಿ ಬ್ಯಾಂಕ್ನಿಂದ ಸಾಲ(Bank Loan) ತೆಗೆದುಕೊಂಡು, ಚಿನ್ನವನ್ನೆಲ್ಲ ಅಡವಿಟ್ಟು ಕಷ್ಟಪಟ್ಟು 70 ಹೊಸ ದೋಣಿಗಳನ್ನು ಖರೀದಿಸಿದ್ದರು. ಅವರ ಬಳಿ 300 ಜನರ ತಂಡವಿತ್ತು. 250 ನಾವಿಕರಿದ್ದರು. ಪ್ರಯಾಣಿಕರನ್ನು ಕರೆದೊಯ್ಯುವುದರಿಂದ ಹಿಡಿದು ಅವರಿಗೆ ಸ್ನಾನದ ವ್ಯವಸ್ಥೆ ಮಾಡುವವರೆಗೆ ಎಲ್ಲ ಕೆಲಸಗಳನ್ನು ತಂಡ ಯಶಸ್ವಿಯಾಗಿ ನೋಡಿಕೊಂಡಿದ್ದರು. ಇವರ ಕಾರ್ಯದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೊಗಳಿದ್ದರು. ತಾವು ದುಡಿದ ಲಾಭದಿಂದಾಗಿ ಮಹಾರ್ ಕುಟುಂಬ ಪ್ರಧಾನಿ ಮೋದಿ(Modi) ಅವರಿಗೆ ಕೃತಜ್ಞತೆ ಸಲ್ಲಿಸಿತ್ತು.
ಇದನ್ನು ಓದಿ : ಚಾಂಪಿಯನ್ಸ್ ಟ್ರೋಫಿ ಭಾರತದ ಮುಡಿಗೆ. ಭಟ್ಕಳದಲ್ಲಿ ವಿಜಯೋತ್ಸವ ವೇಳೆ ಅಭಿಮಾನಿಗಳನ್ನ ನಿಯಂತ್ರಿಸಲು ಹರಸಾಹಸ.
ಕಣ ಕಣದಲ್ಲಿ ಕೇಸರಿ. ಮೂವರು ನಟರಿಗೆ ಸಂಕಷ್ಟರೀ.
ಮಹಿಳೆಗೆ ಚುಡಾಯಿಸಲು ಮುಂದಾದ ಯುವಕರಿಗೆ ಧರ್ಮದೇಟು. ಬೈಕ್ ಬಿಟ್ಟು ಪರಾರ