ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ(Dandeli) : ಗೋಡಂಬಿ ಬೆಳೆಯನ್ನು ತಿನ್ನಲು ಬರುವ ಮಂಗವನ್ನ ಓಡಿಸಲು ಹೋಗಿದ್ದ ರೈತನೋರ್ವನ ಮೇಲೆ ಕರಡಿಗಳೆರಡು(Bears) ದಾಳಿ ಮಾಡಿದ ಘಟನೆ ದಾಂಡೇಲಿ(Dandeli) ತಾಲೂಕಿನ ಕೇಗದಾಳದಲ್ಲಿ ಶನಿವಾರ ಸಂಭವಿಸಿದೆ
ಡುಮ್ಮಿಂಗ್ ಜೂಜೆ ಸಿದ್ದಿ (56) ಎಂಬುವವರು ಕರಡಿ ದಾಳಿಗೊಳಗಾಗಿ ಗಾಯಗೊಂಡ ವ್ಯಕ್ತಿ. ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇಂದು ಬೆಳಿಗ್ಗೆ ಎಂದಿನಂತೆ ಗೋಡಂಬಿ (Cashew) ತೋಟಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಎರಡು ಕರಡಿಗಳು ದಾಳಿ ಮಾಡಿದೆ. ಆದರೆ ಡುಮ್ಮಿಂಗ್ ಅವರು ಕರಡಿಗಳಿಂದ ಕಾದಾಡಿ ತಪ್ಪಿಸಿಕೊಂಡು ಬಂದಿದ್ದಾರೆ. ಕೈ ಮತ್ತು ಕಾಲಿಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಅವರನ್ನು ದಾಂಡೇಲಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕುಳಗಿಯ ವಲಯ ಅರಣ್ಯಾಧಿಕಾರಿ ಸಾಗರ್ ಬೋಗುರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : ಕಾರವಾರದಲ್ಲಿ ಮೆಡ್ ಸ್ಕ್ವೇರ್ ಕ್ಲಿನಿಕ್ ಮತ್ತು ಪಂಚಕರ್ಮ ಕೇಂದ್ರ ಲೋಕಾರ್ಪಣೆ.