ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಬೆಂಗಳೂರು (Bangaluru): ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶ (SSLC Exam Result) ಪ್ರಕಟವಾಗಿದೆ. 2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಬಿಡುಗಡೆಯಾಗಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಸುದ್ದಿಗೋಷ್ಠಿ ನಡೆಸುವ ಮೂಲಕ ಫಲಿತಾಂಶ ಪ್ರಕಟಿಸಿದ್ದಾರೆ. kseab.karnataka.gov.in ಅಥವಾ karresults.nic.in ನಲ್ಲಿ ಫಲಿತಾಂಶ ಪರಿಶೀಲಿಸಬಹುದಾಗಿದೆ.
ಕಳೆದ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ 8,96,447 ವಿದ್ಯಾರ್ಥಿಗಳು ಹಾಜರಾಗಿದ್ದರು. ಒಟ್ಟು 66.14ಶೇ ಫಲಿತಾಂಶ ಬಂದಿದೆ.
ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಪ್ರಪ್ರಥಮ ಬಾರಿಗೆ 22 ವಿದ್ಯಾರ್ಥಿಗಳು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.
625ಕ್ಕೆ 625 ಅಂಕ ಪಡೆದವರು:
1. ಅಖಿಲ್ ಅಹಮ್ಮದ್ ನದಾಫ್ – ವಿಜಯಪುರ(Vijayapura) – ಆಕ್ಸ್ ಫರ್ಡ್ ಹೈ ಸ್ಕೂಲ್ ನಗರಬೆಟ್ಟ, ಮುದ್ದೇಬಿಹಾಳ – 625ಕ್ಕೆ 625 ಅಂಕ.
2. ಸಿ.ಭಾವನ – ಬೆಂಗಳೂರು ಗ್ರಾಮಾಂತರ(Bangaluru Rural) – ನೀಲಗಿರಿಶ್ವರ ವಿದ್ಯಾನಿಕೇತನ ಸ್ಕೂಲ್ ದೇವನಹಳ್ಳಿ – 625ಕ್ಕೆ 625 ಅಂಕ
3. ಧನಲಕ್ಷ್ಮಿ – ಬೆಂಗಳೂರು ಉತ್ತರ(Bangaluru North) – ಸೈಂಟ್ ಯಶ್ ಪಬ್ಲಿಕ್ ಸ್ಕೂಲ್ ಕೆಂಪೇಗೌಡ ನಗರ ಮಾಗಡಿ ರಸ್ತೆ – 625ಕ್ಕೆ 625 ಅಂಕ.
4. ಧನುಷ್ – ಮೈಸೂರು(Mysore) – ಮರಿಮಲ್ಲಪ್ಪ ಹೈ ಸ್ಕೂಲ್ ಮೈಸೂರು – 625ಕ್ಕೆ 625 ಅಂಕ.
5. ಧೃತಿ ಜೆ – ಮಂಡ್ಯ(Mandya) – ಸಾಹುಕಾರ ಎಸ್ ಕೆ ಚಿಕ್ಕಣ್ಣಗೌಡ ಇಂಗ್ಲಿಷ್ ಹೈ ಸ್ಕೂಲ್ ಕೆಆರ್ ಪೇಟೆ – 625ಕ್ಕೆ 625 ಅಂಕ
6. ಜಾಹ್ನವಿ- ಬೆಂಗಳೂರು ದಕ್ಷಿಣ(Bangaluru South)- ವಿಜಯಭಾರತಿ ವಿದ್ಯಾಲಯ ಹೈ ಸ್ಕೂಲ್, ಗಿರಿನಗರ- 625ಕ್ಕೆ 625 ಅಂಕ.
7. ಮಧುಸೂದನ್ ರಾಜು.ಎಸ್- ಬೆಂಗಳೂರು(Bangaluru)- ಎಂಇಎಸ್ ಕಿಶೋರ್ ಕೇಂದ್ರ ಹೈಸ್ಕೂಲ್, ಮಲ್ಲೇಶ್ವರಂ- 625ಕ್ಕೆ 625 ಅಂಕ.
8. ಮೊಹಮ್ಮದ್ ಮಸ್ತೂರ್ ಆದಿಲ್- ತುಮಕೂರು(Tumakuru)- ಚೇತನ ವಿದ್ಯಾಮಂದಿರ – 625ಕ್ಕೆ 625 ಅಂಕ.
9. ಮೌಲ್ಯ. ಡಿ ರಾಜ್- ಚಿತ್ರದುರ್ಗ(Chitradurga)- ರಾಷ್ಟ್ರೀಯ ಅಕಾಡೆಮಿ, ಹಿರಿಯೂರು ಚಿತ್ರದುರ್ಗ – 625ಕ್ಕೆ 625 ಅಂಕ.
10. ನಮನ- ಶಿವಮೊಗ್ಗ(Shivamogga)- ಪ್ರಿಯದರ್ಶಿನಿ ಹೈ ಸ್ಕೂಲ್, ಕಲ್ಲಹಳ್ಳಿ ಶಿವಮೊಗ್ಗ- 625ಕ್ಕೆ 625 ಅಂಕ.
11. ನಮಿತಾ – ಬೆಂಗಳೂರು ದಕ್ಷಿಣ(Bangaluru South)- ಮಾತಾ ನ್ಯಾಷನಲ್ ಇಂಗ್ಲಿಷ್ ಸ್ಕೂಲ್, ಕಲ್ಯಾಣ ನಗರ, ಬೆಂಗಳೂರು- 625ಕ್ಕೆ 625 ಅಂಕ
12. ನಂದನ್ ಹೆಚ್.- ಚಿತ್ರದುರ್ಗ(Chitradurga)- ರಾಷ್ಟ್ರೀಯ ಅಕಾಡೆಮಿ, ಹಿರಿಯೂರು ಚಿತ್ರದುರ್ಗ – 625ಕ್ಕೆ 625 ಅಂಕ.
13. ನಿತ್ಯಾ ಎಂ. ಕುಲಕರ್ಣಿ- ಶಿವಮೊಗ್ಗ(Shivamogga)- ಶ್ರೀ ರಾಮಕೃಷ್ಣ ಇಂಗ್ಲಿಷ್ ಮಾಧ್ಯಮ ಶಾಲೆ, ಶಿವಮೊಗ್ಗ- 625ಕ್ಕೆ 625 ಅಂಕ.
14. ರಂಜಿತಾ ಎ.ಸಿ- ಬೆಂಗಳೂರು ಗ್ರಾಮಾಂತರ(Bangaluru Rural)- ಚಂದ್ರಶೇಖರನಾಥ ಸ್ವಾಮೀಜಿ ಇಂಗ್ಲಿಷ್ ಮಾಧ್ಯಮ ಶಾಲೆ – 625ಕ್ಕೆ 625 ಅಂಕ.
15. ರೂಪ ಚಂದ್ರಗೌಡ ಪಾಟೀಲ್ – ಬೆಳಗಾವಿ(Belagavi)- ಸರ್ಕಾರಿ ಶಾಲೆ, ದೇವಲಾಪುರ, ಬೆಳಗಾವಿ – 625ಕ್ಕೆ 625 ಅಂಕ
16. ಸಹಿಷ್ಣು- ಶಿವಮೊಗ್ಗ(Shivamogga)- ಆದಿಚುಂಚನಗಿರಿ ಹೈ ಸ್ಕೂಲ್- ಶಿವಮೊಗ್ಗ- 625ಕ್ಕೆ 625 ಅಂಕ.
17. ಶಾಗುಫ್ತ ಅಂಜುಮ್- ಶಿರಸಿ(Sirsi)- ಉರ್ದು ಸರ್ಕಾರಿ ಶಾಲೆ- ಶಿರಸಿ, ಕಾರವಾರ- 625ಕ್ಕೆ 625 ಅಂಕ.
18. ಸ್ವಸ್ತಿ ಕಾಮತ್- ಉಡುಪಿ(Udupi) – ಕಾರ್ಕಳ ಜ್ಞಾನಸುಧ ಇಂಗ್ಲಿಷ್ ಮಾಧ್ಯಮ ಶಾಲೆ- ಉಡುಪಿ- 625ಕ್ಕೆ 625 ಅಂಕ.
19. ತಾನ್ಯ. ಆರ್ ಎನ್- ಮೈಸೂರು(Mysore)- ಕೆಸ್ವಿಬಿ ಹೈ ಸ್ಕೂಲ್, ವಿಜಯನಗರ, ಮೈಸೂರು- 625ಕ್ಕೆ 625 ಅಂಕ.
20. ಉತ್ಸವ್ ಪಾಟೀಲ್- ಹಾಸನ(Hasan)- ವಿಜಯ ಸ್ಕೂಲ್, ಚಿಕ್ಕಹೊನ್ನೇನಹಳ್ಳಿ- ಹಾಸನ- 625ಕ್ಕೆ 625 ಅಂಕ
21. ಯಶ್ವಂತ್ ರೆಡ್ಡಿ, ಕೆ.ಬಿ- ಮಧುಗಿರಿ(Madhugiri)- ಚಿರೆಕ್ ಪಬ್ಲಿಕ್ ಸ್ಕೂಲ್- ಮಧುಗಿರಿ- 625ಕ್ಕೆ 625 ಅಂಕ
22. ಯುಕ್ತಾ. ಎಸ್- ಬೆಂಗಳೂರು ದಕ್ಷಿಣ(Bangaluru South)- ಹೋಲಿ ಚೈಲ್ಡ್ ಇಂಗ್ಲಿಷ್ ಹೈಸ್ಕೂಲ್- ಅಶೋಕನಗರ- ಬೆಂಗಳೂರು- 625ಕ್ಕೆ 625 ಅಂಕ
ಇದನ್ನು ಓದಿ : ನಡು ರಸ್ತೆಯಲ್ಲಿ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ ಅಮಾನತ್
