ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) :ರವೀಂದ್ರನಾಥದ ಟ್ಯಾಗೋರ್ ಕಡಲತೀರದಲ್ಲಿ ತಟ ರಕ್ಷಕ ಪಡೆಗೆ(Coastal Guard) ಜಾಗ ನೀಡುವುದನ್ನ ವಿರೋಧಿಸಿ ಸ್ಥಳೀಯ ಮೀನುಗಾರ ಸಮುದಾಯದ(Fishermen Community) ನಾಗರಿಕರು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ನೀಡಿದರು.
ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ವೆಂಕಟೇಶ ತಾಂಡೇಲ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯೆದುರು ಜಮಾಯಿಸಿದ ಮೀನುಗಾರರು ತಟ ರಕ್ಷಕ ಪಡೆಯ(Coastal Guard) ವಿರುದ್ಧ ಘೋಷಣೆ ಕೂಗಿದರು. ಬಾವುಟೆಕಟ್ಟೆಯಿಂದ ಕೋಡಿಭಾಗವರೆಗಿನ ಕಡಲತೀರ ಪ್ರದೇಶವು ದಿನನಿತ್ಯ ಸಾವಿರಾರು ನಾಗರಿಕರು ಮತ್ತು ಪ್ರವಾಸಿಗರಿಗೆ ವಾಯುವಿಹಾರ ಮಾಡುತ್ತಾರೆ. ಅಲ್ಲದೇ ಮೀನುಗಾರ ಕುಟುಂಬಗಳಿಗೆ ದಡ ಕೈಗಾರಿಕೆಗೆ ಅನುಕೂಲವಾಗುವ ತಾಣವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಈಗಾಗಲೇ ನೌಕಾನೆಲೆಗೆ(Naval Base) 11 ಸಾವಿರ ಎಕರೆ ಭೂಮಿಯನ್ನು ನೀಡಿದ್ದೇವೆ. 2009ರಲ್ಲಿ ಇದೇ ತಟ ರಕ್ಷಕ ಪಡೆಗೆ ಜಾಗ ನೀಡುವ ಪ್ರಸ್ತಾವ ಬಂದಾಗ, ಮೀನುಗಾರರು ಮತ್ತು ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದೇವೆ. ಆಗ ಜಿಲ್ಲಾಡಳಿತವು ಕಾರವಾರದ ಬದಲಾಗಿ, ಅಮದಳ್ಳಿಯಲ್ಲಿ 20 ಎಕರೆ 10 ಗುಂಟೆ ಜಾಗವನ್ನು ತಟ ರಕ್ಷಕ ಪಡೆಗೆ ನೀಡಿದ್ದಲ್ಲದೇ ಅಲ್ಲಿ ಶಂಕುಸ್ಥಾಪನೆ ಕೂಡ ನೆರವೇರಿತ್ತು. ಆದರೆ ತಟ ರಕ್ಷಕ ಪಡೆ ಮತ್ತೆ ಇಲ್ಲಿನ ಕಡಲತೀರದ ಮೇಲೆ ಕಣ್ಣಿಟ್ಟಿದ್ದು, ಇದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ಕಡಲತೀರದಲ್ಲಿ ‘ಹೋವರ್‌ಕ್ರಾಫ್ಟ್’ ನಿಲುಗಡೆ ಮಾಡಿದರೆ ಮೀನುಗಾರರು ಮತ್ತು ವಾಯು ವಿಹಾರಕ್ಕೆ ಬರುವವರಿಗೆ ತೊಂದರೆಯಾಗಲಿದೆ. ಹೀಗಾಗಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಜಿಲ್ಲಾಡಳಿತದ ಪರವಾಗಿ ಚುನಾವಣಾ ತಹಸೀಲ್ದಾರ ಪ್ರಮೋದ ನಾಯ್ಕ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ವೆಂಕಟೇಶ ತಾಂಡೇಲ, ರಾಜೇಶ ಮಾಜಾಳಿಕರ, ಪ್ರಶಾಂತ ಹರಿಕಂತ್ರ, ಶ್ರೀಧರ, ಚೇತನ ಹರಿಕಂತ್ರ, ಸಂಜೀವ ಬಲೆಗಾರ, ಸುಶೀಲಾ ಹರಿಕಂತ್ರ, ಪ್ರಶಾಂತ ಹರಿಕಂತ್ರ, ಮಂಜು ಟಾಕೇಕರ, ಉದಯ ಬಾನಾವಳಿಕರ ಸೇರಿದಂತೆ ಮೀನುಗಾರರು, ಮೀನು ಮಾರಾಟಮಹಿಳೆಯರು ಇದ್ದರು.
ಇದನ್ನು ಓದಿ : ಜಾತಿಗಣತಿಯಲ್ಲಿ ಗೊಂದಲ. ಬಾಂದಿ ಎಂದು ನಮೂದಿಸಲು ಕೃಷ್ಣಾನಂದ ಬಾಂದೇಕರ ಮನವಿ.
ಭಟ್ಕಳದ ದೇವಸ್ಥಾನ ಕಳ್ಳರ ಪತ್ತೆ ಹಚ್ಚಿದ ಗ್ರಾಮೀಣ ಠಾಣೆ ಪೊಲೀಸರು.
ಬನವಾಸಿಯನ್ನ ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಸೇರಿಸಿ. ಈ ಹಿಂದಿನಂತೆ ಮೀಸಲು ಕ್ಷೇತ್ರ ಮಾಡಲು ಆಗ್ರಹ.
ಕಾರವಾರದ ಹೊಟೇಲ್ ಮೇಲಿಂದ ಬಿದ್ದ ರಷ್ಯಾ ಪ್ರಜೆ. ಸ್ಥಳಕ್ಕೆ ಎಸ್ಪಿ ಭೇಟಿ.