ಶಿರಸಿ(Sirsi) : ನಗರದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ(Co operative society) ಸಾಲ ಪಡೆದು ಮರಳಿಸದ ವ್ಯಕ್ತಿಯ ವಿರುದ್ಧ ವಿಚಾರಣೆ ನಡೆಸಿದ ಸಿವಿಲ್ ನ್ಯಾಯಾಲಯ ಆರೋಪಿಗೆ 90 ಸಾವಿರ ರೂ ದಂಡ ಹಾಗು 3 ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ.

ಶಿರಸಿ ನಗರದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ 70 ಸಾವಿರ ರೂ ಸಾಲ ಪಡೆದುಕೊಂಡಿದ್ದ ಶ್ರೀನಿವಾಸ ಸೋಮರಾಜ್ ಎಂಬುವರು ಮರಳಿಸುವಲ್ಲಿ ವಿಫಲರಾಗಿದ್ದರು. ಬಳಿಕ ಅವರಿಗೆ ಜಾಮೀನುದಾರನಾಗಿದ್ದ ವಿನೋದ ನಾಗಪ್ಪ ಹರಿಜನ ಎಂಬ ವ್ಯಕ್ತಿಯೂ ಅದನ್ನು ತೀರಿಸಲು ವಿಫಲರಾದ ಹಿನ್ನಲೆಯಲ್ಲಿ ಸಂಘದ ಪರವಾಗಿ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ನ್ಯಾಯಾಲಯದಲ್ಲಿ ಚೆಕ್ ಬೌನ್ಸ ದಾವೆ ಹೂಡಿದ್ದರು. ಇಲ್ಲಿ ಜಾಮೀನುದಾರ ಸಾಲಕ್ಕೆ ತಮ್ಮ ಚೆಕ್ ನ್ನು ನೀಡಿದ್ದರು.

ಇದಕ್ಕೆ ಸಂಬಂಧಿಸಿ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಅಭಿಷೇಕ ರಾಮಚಂದ್ರ ಜೋಶಿ ಸಾಲ ಮರಳಿಸದ ಜಾಮೀನುದಾರ ವಿನೋದ ಹರಿಜನ ಎಂಬುವರು ಐದು ಸಾವಿರ ರೂ ದಂಡದ  ರೂಪದಲ್ಲಿ, 85 ಸಾವಿರ ಸಂಘಕ್ಕೆ ಒಟ್ಟೂ 90  ಸಾವಿರ ಹಣ ನೀಡಬೇಕು ಅಥವಾ 3 ತಿಂಗಳು ಕಾರ್ಯಾಗೃಹ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು   ನೀಡಿ  ಆದೇಶ ಹೊರಡಿಸಿದ್ದಾರೆ. ದೂರುದಾರ ಸಂಘದ ಪರವಾಗಿ ನ್ಯಾಯವಾದಿ ಪ್ರಶಾಂತ ನಾಯ್ಕ ವಾದ ಮಂಡಿಸಿದರು.

ಇದನ್ನು ಓದಿ : ಮಾಜಾಳಿಯಲ್ಲಿ ವಾಪರ್ ಜಾತ್ರೆ

ರುದ್ರೇಶ್ ಪ್ರಕರಣ. ಅನಾಮಧೇಯ ಪತ್ರ

ಈಜುಕೊಳದಲ್ಲಿ ಮುಳುಗಿ ಯುವತಿಯರ ಸಾವು