ಶಿರಸಿ: ಉತ್ತರಕನ್ನಡ ಜಿಲ್ಲಾ ೨೪ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಗರದ ರಂಗಧಾಮದ ವೇದಿಕೆಯಲ್ಲಿ ಮಂಗಳವಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಿಗರು ಗುಲಾಮಗಿರಿ ಮನಸ್ಸಿನಿಂದ ಹೊರಬಂದು ಸ್ವಾಭಿಮಾನದ ಜೀವನ ಅನುಸರಿಸಬೇಕು. ಮುಂದಿನ ಪೀಳಿಗೆಗೆ ಉತ್ತಮ ಚರಿತ್ರೆ ನೀಡುವದಕ್ಕಾಗಿ ಮೋಸ ಭ್ರಷ್ಟಾಚಾರರಹಿತ ರಾಜ್ಯವನ್ನು ಕಟ್ಟಬೇಕು. ರಾಜಕೀಯ ಕ್ಷೇತ್ರ ಬಹಳ ಪವಿತ್ರವಾದ ಕ್ಷೇತ್ರ ಅದಕ್ಕಾಗಿ ರಾಜಕಾರಣಿಗಳು ಜನರಿಗೆ ಪವಿತ್ರವಾದ ಸಮಾನ ಸೇವೆಯನ್ನು ನೀಡಬೇಕು, ಜನರ ಅಷೋತ್ತರಗಳಿಗೆ ಸ್ಪಂದಿಸಬೇಕು. ಸಂವಿಧಾನದ ಆಶಯಗಳನ್ನು ಉಳಿಸಿ ರಕ್ಷಿಸಬೇಕು ಎಂದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಭಾಷೆ ಭಾಷೆ ಕುರಿತು ಸಂಘರ್ಷಗಳನ್ನು ನೋಡುತ್ತೇವೆ. ನಾವು ಕನ್ನಡಿಗರು ಎಲ್ಲರ ಭಾಷೆಯನ್ನು ಗೌರವಿಸುತ್ತೇವೆ. ನಮ್ಮ ಕನ್ನಡ ಭಾಷೆಯನ್ನು ಪ್ರೀತಿಸುತ್ತೇವೆ ಎಂದರು.
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ, ಸಹಕಾರಿ, ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆ ಮುಂಚೂಣಿಯಲ್ಲಿದೆ ಎಂದರು. ಸಮ್ಮೇಳನದ ಗೌರವಾಧ್ಯಕ್ಷ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಪಂಪನ ಪುಣ್ಯ ನೆಲದ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಪಂಪನ ನುಡಿ, ಆಶಯ ಜಾರಿಗೆ ತರುವ ಕಾರ್ಯ ಆಗಬೇಕು. ದಿನಕರ ದೇಸಾಯಿ, ಗೌರೀಶ ಕಾಯ್ಕಿಣಿ ಸೇರಿದಂತೆ ಹಿರಿಯರ ನೆನಪು ಮಾಡಿಕೊಳ್ಳಬೇಕಿದೆ. ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಲು ಜಿಲ್ಲೆಯ ಸಾಹಿತಿಗಳ ಕೊಡುಗೆ ದೊಡ್ಡದು , ವಿದ್ಯಾರ್ಥಿಗಳು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕು. ಆಂಗ್ಲ ಭಾಷೆಯ ಬಳಕೆ ಇಲ್ಲದೇ ಕನ್ನಡದ ಶ್ರೇಷ್ಠತೆ ಹೆಚ್ಚಿಸುವ ಕಲಾ ಮಾಧ್ಯಮ ಯಕ್ಷಗಾನ. ಕನ್ನಡಕ್ಕೋಸ್ಕರ ಮೀಸಲಿರುವ ಕನ್ನಡದ ಕಲೆ ನಮ್ಮದು ಎಂಬ ಹೆಮ್ಮೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಧಾರ್ಮಿಕ ನೆಲವಾದ ಶಿರಸಿಯಲ್ಲಿ ಸಮ್ಮೇಳನ ನಡೆಸುತ್ತಿರುವದುೆ. ನನ್ನ ಹುಮ್ಮಸನ್ನು ಹೆಚ್ಚಿಸಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ಆರ್.ಡಿ.ಹೆಗಡೆ ಆಲ್ಮನೆ ಸರ್ವಾಧ್ಯಕ್ಷತೆ ವಹಿಸಿದ್ದರು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್ಟ, ಸಹಾಯಕ ಆಯುಕ್ತೆ ಕಾವ್ಯಾರಾಣಿ, ಡಿಡಿಪಿಐ ಬಸವರಾಜ, ಅರಣ್ಯಾಧಿಕಾರಿ ವಸಂತ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ಬಿಇಓ ನಾಗರಾಜ ನಾಯ್ಕ, ಸಾಹಿತಿ ಭಾಗೀರಥಿ ಹೆಗಡೆ, ಶ್ರೀಪಾದ ಶೆಟ್ಟಿ, ಜಗದೀಶ ಗೌಡ, ಎನ್.ಆರ್.ನಾಯಕ, ಡಾ.ಸುಮನ್ ಹೆಗಡೆ, ಡಾ.ವೆಂಕಟೇಶ ನಾಯ್ಕ ಮುಂತಾದವರು ಪಾಲ್ಗೊಂಡರು.
ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಸ್ವಾಗತಿಸಿದರು. ಜಾರ್ಜ ಫರ್ನಾಂಡೀಸ್ ಸಮ್ಮೇಳನದ ಅಧ್ಯಕ್ಷರ ಪರಿಚಯ ಮಾಡಿದರು. ಪ್ರೊ.ಕೆ.ಎನ್.ಹೊಸಮನಿ , ಭವ್ಯಾ ಹಳೆಯೂರು ನಿರೂಪಿಸಿದರು. ತಾಲೂಕು ಕಸಾಪ ಅಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ ವಂದಿಸಿದರು.
ಇದನ್ನು ಓದಿ : ಬಿಗ್ ಬಾಸ್ ನಟಿ ಶೋಭಾಗೆ ಅನಾರೋಗ್ಯ