ಇ ಸಮಾಚಾರ ಡಿಜಿಟಲ್ನ್ಯೂಸ್ (esamachara digital news) ಮುಂಬೈ(Mumbai): ವಿಮಾನ ದುರಂತದಲ್ಲಿ(Plane Tragedy) ಮಹಾರಾಷ್ಟ್ರ ಉಪ ಮುಖ್ಯಮಂತ್ರಿ(Maharashtra DCM) ಅಜಿತ್ ಪವಾರ್(Ajeet Pawar) ಸೇರಿದಂತೆ ಆರು ಮಂದಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಬಾರಾಮತಿ(Maharashtra Baramati) ಬಳಿ ಸಂಭವಿಸಿದೆ.
ಈ ಬಗ್ಗೆ ನಾಗರೀಕ ವಿಮಾನಯಾನ ನಿರ್ದೇಶನಾಲಯ ದುರಂತದ ಬಗ್ಗೆ ತಿಳಿಸಿದೆ. ಮುಂಬೈನಿಂದ ಬಾರಾಮತಿಗೆ(Mumbai To Baramati) ವಿಮಾನ ತೆರಳುತ್ತಿತ್ತು. ಅಜಿತ್ ಪವಾರ್(Ajeet Pawar) ಮತ್ತು ಇನ್ನೂ ಐವರು ವಿಮಾನದಲ್ಲಿದ್ದರು. ಏರ್‌ಕ್ರಾಫ್ಟ್ ಲ್ಯಾಂಡಿಂಗ್(Aircraft Landing) ಆಗುವ ವೇಳೆ ಬಾರಾಮತಿಯ ಹೊಲದಲ್ಲಿ ಅಪಘಾತಕ್ಕೆ ಈಡಾಗಿದೆ.
ಬೆಳಗ್ಗೆ 8.30ಕ್ಕೆ ದುರಂತ ಸಂಭವಿಸಿದೆ. ಈ ವಿಮಾನ ಬೆಳಗ್ಗೆ 8.10ಕ್ಕೆ ಮುಂಬೈನಿಂದ ಬಾರಾಮತಿ ಕಡೆ ಪ್ರಯಾಣ ಮಾಡಿತ್ತು. ಇನ್ನೇನು ಬಾರಾಮತಿಯಲ್ಲಿ ಲ್ಯಾಂಡಿಂಗ್ ಆಗಬೇಕೆನ್ನುವಾಗಲೇ ಘಟನೆ ಸಂಭವಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಅಜಿತ್ ಪವಾರ್(Sheet Pawar) ನಾಲ್ಕು ಪ್ರಮುಖ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ನಿರ್ಧರಿಸಿದ್ದರು. ಹೀಗಾಗಿ ಜಿಲ್ಲಾ ಪರಿಷತ್‌ಗಳು ಮತ್ತು ಪಂಚಾಯತ್ ಸಮಿತಿಗಳಿಗೆ ನಡೆಯುತ್ತಿರುವ ಚುನಾವಣೆಗಳ ಮಧ್ಯೆ, ಪವಾರ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದರು.
ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ(Maharashtra DCM) ಸತತವಾಗಿ ದೀರ್ಘಕಾಲ ಸೇವೆ ಸಲ್ಲಿಸಿದವರಲ್ಲಿ ಒಬ್ಬರು. ಅಜಿತ್ ಅವರು ಮುಖ್ಯಮಂತ್ರಿಗಳಾದ ಪೃಥ್ವಿರಾಜ್ ಚವಾಣ್, ದೇವೇಂದ್ರ ಫಡ್ನವೀಸ್, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಅವರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಅವರು 1991 ರಲ್ಲಿ ಬಾರಾಮತಿ ಸಂಸದೀಯ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆಗೆ(Parliamentary) ಆಯ್ಕೆಯಾದರು. ನಂತರ ತಮ್ಮ ಚಿಕ್ಕಪ್ಪ ಶರದ್ ಪವಾರ್(Sharad Pawar) ಅವರಿಗೆ ಆ ಸ್ಥಾನವನ್ನು ಬಿಟ್ಟುಕೊಟ್ಟರು. ಅವರು ಬಾರಾಮತಿ ವಿಧಾನಸಭಾ(Baramati Constantly) ಕ್ಷೇತ್ರದಿಂದಲೇ ಏಳು ಬಾರಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಎನ್ಸಿಪಿಯಲ್ಲಿ (NCP) ನವೆಂಬರ್ 2019 ರಲ್ಲಿ ಒಡಕು ಮೂಡಿದಾಗ ಭಾರತೀಯ ಜನತಾ ಪಕ್ಷದ(BJP) ನೇತೃತ್ವದ ಸರ್ಕಾರವನ್ನು ಸೇರಿಕೊಂಡು ಉಪಮುಖ್ಯಮಂತ್ರಿಯಾಗಿದ್ದರು. ಫೆಬ್ರವರಿ 2024 ರಲ್ಲಿ, ಚುನಾವಣಾ ಆಯೋಗವು ಅಜಿತ್ ಪವಾರ್ ನೇತೃತ್ವದ ಬಣಕ್ಕೆ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನೀಡಿತ್ತು. ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಮತ್ತು ಜಯ್ ಮತ್ತು ಪಾರ್ಥ್ ಪವಾರ್ ಎಂಬ ಇಬ್ಬರು ಗಂಡು ಮಕ್ಕಳನ್ನ ಅಗಲಿದ್ದಾರೆ. ಅಜಿತ್ ಪವಾರ್ ಅವರ ಸಾವಿಗೆ ನಾಡಿನ ಗಣ್ಯರು ಕಂಬನಿ(Demise) ಮಿಡಿದಿದ್ದಾರೆ.
ಇದನ್ನು ಓದಿ : ಜಾತ್ರೆಗೆ ತೆರಳಿದ್ದಾಗ ಮನೆಗೆ ಬೆಂಕಿ. ಅನ್ಯ ಕೋಮಿನ ಕುಟುಂಬದ ಕೃತ್ಯ ಎಂದ ಮನೆಯವರು. ಎಸ್ಪಿ ಭೇಟಿ.
ಬಂದರಿನಲ್ಲೊಂದು ವಿಸ್ಮಯ. ಕತ್ತರಿಸದ ಮೇಲೂ ಜೀವಂತವಿದ್ದ ಬಂಗಡೆ ಮೀನು.
