ಕಾರವಾರ: ಆಂಕೋಲಾ ತಾಲೂಕಿನ ಶಿರೂರು ಗುಡ್ಡಕುಸಿತ ಸ್ಥಳಕ್ಕೆ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ ಭೇಟಿ ನೀಡಿ, ಮುಳುಗು ತಜ್ಞ ಈಶ್ವರ್ ಮಲ್ಪೆ ಅವರೊಂದಿಗೆ ಚರ್ಚಿಸಿದರು.
ಶಿರೂರು ಗುಡ್ಡ ಕುಸಿತದಲ್ಲಿ ಹನ್ನೆರಡಕ್ಕೂ ಹೆಚ್ಚು ಜನ ಕೊಚ್ಚಿ ಹೋಗಿದ್ದು, ಎಂಟು ಜನರ ಮೃತದೇಹ ಪತ್ತೆಯಾಗಿದೆ. ಉಳಿದ ನಾಲ್ಕು ಮಂದಿಯ ಮೃತದೇಹಕ್ಕೆ ನಿರಂತರ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಭಾರತೀಯ ಸೇನೆ ಎಡೆಬಿಡದೆ ಶ್ರಮಿಸುತ್ತಿದೆ.
ಗಂಗಾವಳ ನದಿಯ ಹರಿವಿನ ಮಟ್ಟ ಹೆಚ್ಚಿದ್ದು, ಶೋಧ ಕಾರ್ಯಕ್ಕೆ ಆಡಚಣೆಯಾಗಿದೆ ಎನ್ನಲಾಗಿದ್ದು, ಕೇರಳ ಮೂಲದ ಅರ್ಜುನನ ಲಾರಿ 20 ಮೀಟರ್ ಆಳದಲ್ಲಿ ಮುಳುಗಿರುವ ಬಗ್ಗೆ ಸೇನೆ ದೃಢಪಡಿಸಿದ್ದು, ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಕಾರ್ಯಾಚರಣೆಗೆ ಇಳಿದಿತ್ತು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಶಾಸಕರಾದ ಗಣಪತಿ ಉಳ್ವೇಕರ ಅವರು ಮುಳುಗು ತಜ್ಞ ಈಶ್ವರ ಮಲ್ಪೆ ಅವರ ತಂಡದವರೊಂದಿಗೆ ಚರ್ಚಿಸಿ ಗಂಗಾವಳಿ ನದಿಯ ಪರಿಸ್ಥಿತಿ ಬಗ್ಗೆ ತಿಳಿ ಹೇಳಿದರು.