ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ಕನ್ನಡ ಭಾಷೆಗೆ ವಿಶ್ವದಲ್ಲಿ ಪ್ರತಿಷ್ಠಿತ ಸ್ಥಾನವಿದ್ದು ಕನ್ನಡ ಭಾಷಾ ಪಂಡಿತರು ರಾಷ್ಟ್ರದ ಮತ್ತು ವಿಶ್ವದ ಗಮನ ಸೆಳೆದಿದ್ದಾರೆ, ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲ ಕವಿಯಿತ್ರಿ ಶರಣೆ ಅಕ್ಕಮಹಾದೇವಿಯಿಂದ ಹಿಡಿದು ಇಂದಿನ ಯುವ ಮಹಿಳಾ ಸಾಹಿತಿಗಳವರೆಗೆ ಮಹಿಳಾ ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಆದರೂ ಸಹ ಮಹಿಳಾ ಸಾಹಿತಿಗಳಿಗೆ ಸಿಗಬೇಕಾದಂತಹ ಉತ್ಕೃಷ್ಟ ಸ್ಥಾನಮಾನ ದೊರೆತಿಲ್ಲವೆಂದು ಮಹಿಳಾ ಸಾಹಿತ್ಯ ಪರಿಷತ್ ಸಂಸ್ಥಾಪಕ ಗಂಗಾಧರ ದೊಡ್ಡವಾಡ ಕಳವಳ ವ್ಯಕ್ತಪಡಿಸಿದರು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ನಗರದ ಸುಮುಖ ಹಾಲ್ ಜಿ ಜಿ ಭಟ್ ವಕೀಲರ ನಿವಾಸದಲ್ಲಿ ಉತ್ತರ ಕನ್ನಡ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪುರುಷ ಪ್ರಧಾನ ವ್ಯವಸ್ಥೆಯು ಸಾಹಿತ್ಯರಂಗದಲ್ಲೂ ಬೆಳೆದು ಬಂದಿದೆ. ಇದನ್ನು ತಡೆದು ಮಹಿಳಾ ಸಾಹಿತ್ಯ ಬೆಂಬಲಿಸುವ ಉದ್ದೇಶದಿಂದ ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ ಉದಯವಾಗಿದೆ ಎಂದೂ ಹೇಳಿದರು.
ಉತ್ತರ ಕರ್ನಾಟಕ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಮಾರ್ಗದರ್ಶಕರಾದ ನೇತ್ರಾವತಿ ಶ್ಯಾನಭಾಗ್ ಮಾತನಾಡಿ, ಸಾಹಿತ್ಯದ ಆಧಾರದಲ್ಲಿ ಮಾತೃ ಸಮಾಜ ಒಂದಾಗಬೇಕು. ಕನ್ನಡ ಸಾಹಿತ್ಯ ಬಳಸಿ, ಬೆಳೆಸುವುದಕ್ಕೆ ಕಂಕಣ ಬದ್ಧರಾಗಿ ಮಹಿಳಾ ಸಾಹಿತ್ಯ ಮುಖ್ಯವಾಹಿನಿಗೆ ಬಂದು ಮಹಿಳೆಯರ ಸ್ಥಾನ ಮಾನ ತ್ಯಾಗ ಧೈರ್ಯ ಸಮಾಜಕ್ಕೆ ಕೊಡುಗೆಯಾಗಿ ಕೊಡಲ್ಪಡಬೇಕು ಎಂದು ಹೇಳಿದರು.
ಉತ್ತರ ಕನ್ನಡ ಜಿಲ್ಲಾಧ್ಯಕ್ಷೆ ಸಂದ್ಯಾ ಭಟ್, ರಾಜ್ಯಾಧ್ಯಕ್ಷೆ ಪ್ರಭಾವತಿ ಹಾದಿಮನಿ, ನಗರಸಭಾ ಸದಸ್ಯೆ ಮೇಧಾ ನಾಯ್ಕ ಶಾರದಾ ನಾಯ್ಕ ಡಾ ಪಲ್ಲವಿ ಅಶ್ವಥ್, ರಜನಿ ನಾಯ್ಕ ವಿಜಯಲಕ್ಷ್ಮಿ ಹೆಗಡೆ, ವೀಣಾ ಜಗದೀಶ ವಿಮಲಾ ಗೌಡ, ಪ್ರಿಯಾಂಕಾ ಸಾಳೆಹಿತ್ತಲ, ಅನುಪಮಾ ಹಂಸಬಾವಿ, ಅನಸೂಯಾ ನವಲಗುಂದ, ಗಿರಿಜಾ ಮುಗಳಿ, ಮಂಗಲಾ ತಿಪ್ಪಶೆಟ್ಟಿ, ಮಂಜುಳಾ ಹೊನಕೇರಿ, ಶಿಕ್ಷಕಿ ಸೀಮಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಏರ್ಪಡಿಸಲಾಯಿತು.
ಇದನ್ನು ಓದಿ : ಅಬಕಾರಿ ಕಾರ್ಯಾಚರಣೆ. ಸ್ಪೀರಿಟ್ ತುಂಬಿದ ಎರಡು ಟ್ಯಾಂಕರ್ ಗೆ ಬ್ರೇಕ್. ಇಬ್ಬರ ಬಂಧನ
ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಮುಂದಿನ ಬಜೆಟ್ನಲ್ಲಿ ಮಂಜೂರು – ಸಿಎಂ ಸಿದ್ದರಾಮಯ್ಯ ಭರವಸೆ
