ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಇಂದು ಅಪರೂಪದ ಚಂದ್ರ ಗ್ರಹಣ(Lunars Eclipse) ನಡೆಯಲಿದೆ. ಭೂಮಿಯ ನೆರಳಿನಲ್ಲಿ ಚಂದ್ರನು ಸಂಪೂರ್ಣವಾಗಿ ಹಾದು ಹೋಗಲಿದ್ದಾನೆ. ಸುಮಾರು 58 ನಿಮಿಷಗಳ ಕಾಲ ಗಾಢ ಕೆಂಪು ಬಣ್ಣಕ್ಕೆ ತಿರುಗಲಿದ್ದಾನೆ.
ಮಧ್ಯಾಹ್ನ 03-18 ನಿಮಿಷಕ್ಕೆ ಸ್ಪರ್ಶಕಾಲವಾಗಿದ್ದು, ಸಾಯಂಕಾಲ 05-03 ಮಧ್ಯ ಕಾಲವಾಗಿದೆ. ಸಾಯಂಕಾಲ 06-48 ಗ್ರಹಣದ ಮೋಕ್ಷ ಕಾಲವಾಗಿದೆ.
ಬೆಳಿಗ್ಗೆ 09-47 ನಿಮಿಷದ ನಂತರ ಗ್ರಹಣ, ಮೋಕ್ಷ ಪರ್ಯಂತ ಭೋಜನ ನಿಷಿದ್ಧವಾಗಿದೆ. (ಬಾಲ,ವೃದ್ಧ,ಗರ್ಭಿಣಿ, ರೋಗಿಗಳಿಗೆ ಮಧ್ಯಾಹ್ನ 12-45 ರ ತನಕ ಭೋಜನಕ್ಕೆ ಅವಕಾಶವಿದೆ).
ಉತ್ತರಕನ್ನಡ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಗ್ರಹಣ ನಿಮಿತ್ತ ಪೂಜಾ, ದರ್ಶನದಲ್ಲಿ ಬದಲಾವಣೆ ಮಾಡಲಾಗಿದೆ.
ಇಡಗುಂಜಿ ವಿನಾಯಕ ದೇವಸ್ಥಾನದಲ್ಲಿ(Idagungi Vinayak Temple) ಬೆಳಗ್ಗೆ 9.15ಕ್ಕೆ ಪೂಜೆ ಮಾಡಲಾಗಿದೆ. ಮಧ್ಯಾಹ್ನ 2 ರಿಂದ 4ರವರೆಗೆ ದೇವಾಲಯ ಬಾಗಿಲು ಮುಚ್ಚಲಿದೆ. ಇಂದು ಗ್ರಹಣದ ದಿನ ಯಾವುದೇ ಸೇವೆಗಳು ಇರುವುದಿಲ್ಲ. ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ. ಗ್ರಹಣ ಮೋಕ್ಷದ ನಂತರ ಶುದ್ದೀಕರಣ ಕಾರ್ಯಗಳ ಬಳಿಕ ಮಹಾಪೂಜೆ ನಡೆಸಲಾಗುತ್ತದೆ.
ಗೋಕರ್ಣ ಮಹಾಬಲೇಶ್ವರ ದೇವಾಲಯದಲ್ಲಿ(Gokarn Mahabaleshwar Temple) ಮುಂಜಾನೆ 6ರಿಂದ 11.30ರವರೆಗೆ ಸ್ಪರ್ಶ ದರ್ಶನಕ್ಕೆ ಮಾತ್ರ ಅವಕಾಶ. ಇನ್ನೂ ಸಂಜೆ 5ರಿಂದ 7ರವರೆಗೆ ದರ್ಶನ ಇರಲಿದೆ. ಇವತ್ತು ಮಧ್ಯಾಹ್ನ ಪ್ರಸಾದ ವಿತರಣೆ ಇರುವುದಿಲ್ಲ. ರಾತ್ರಿ ಗ್ರಹಣ ಮೋಕ್ಷದ ನಂತರ ಶುದ್ದೀಕರಣ ಕಾರ್ಯಗಳ ಬಳಿಕ ಮಹಾಪೂಜೆ ನಡೆಯಲಿದೆ ಎಂದು ಮಾಹಿತಿ ಲಭಿಸಿದೆ.
ಮುರ್ಡೇಶ್ವರ ದೇವಸ್ಥಾನದಲ್ಲಿ(Murdeshwar Temple) ಬೆಳಗ್ಗೆ 8.30ಕ್ಕೆ ಪೂಜೆ ಪೂರ್ಣಗೊಂಡಿದೆ. ಮಧ್ಯಾಹ್ನ 1ರವರೆಗೆ ಭಕ್ತರು ದರ್ಶನ ಮಾಡಬಹುದು. ಮಧ್ಯಾಹ್ನ 3 ಗಂಟೆಗೆ ದೇವಾಲಯ ಬಾಗಿಲು ಬಂದ್ ಮುಚ್ಚಲಾಗುತ್ತದೆ. ಗ್ರಹಣ ಸಮಯ ವಿಶೇಷ ಆರತಿ ನಡೆಯಲಿದ್ದು, ರಾತ್ರಿ ಶುದ್ದೀಕರಣದ ಬಳಿಕ ಮಹಾಪೂಜೆ ನೆರವೇರಿಸಲಾಗುತ್ತದೆ.
ಶಿರಸಿ ಶ್ರೀಮಾರಿಕಾಂಬಾ ದೇವಾಲಯದಲ್ಲಿ(Sirsi Sri Marikamba Temple) ಚಂದ್ರಗ್ರಹಣದ ನಿಮಿತ್ತ ಶ್ರೀ ದೇವಿ ಮಾರಿಕಾಂಬೆಯ ಜಾತ್ರೆಯಲ್ಲಿ, ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಶ್ರೀ ದೇವಿಯ ಪೂಜೆ ಹಾಗೂ ದರ್ಶನಕ್ಕೆ ಅವಕಾಶವಿದೆ. ಮಧ್ಯಾಹ್ನದ ನಂತರ ಗ್ರಹಣ ಆರಂಭವಾಗುವುದರಿಂದ 2 ಗಂಟೆಯಿಂದ ಸಂಜೆ ಗ್ರಹಣ ಬಿಡುವ 7 ಗಂಟೆಯವರೆಗೂ ಕೂಡ ದೇವಿಯ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸಂಜೆ 7.30 ರ ನಂತರ ರಾತ್ರಿ 10 ಗಂಟೆಯವರೆಗೂ ಮತ್ತೆ ಶ್ರೀ ದೇವಿಯ ಪೂಜೆ, ಸೇವೆ, ದರ್ಶನ ಮುಂದುವರೆಯಲಿದೆ. ಮಧ್ಯಾಹ್ನ ದೇವಾಲಯದ ವತಿಯಿಂದ ನಡೆಯುವ ಅನ್ನಪ್ರಸಾದ ಸೇವೆ ಇರುವುದಿಲ್ಲ.
ಇದನ್ನು ಓದಿ : ನಾನು ಹೆಬ್ಬೆಟ್ ಅಲ್ಲ. ಸ್ಟಡಿ ಮಾಡದೇ ಮಾತಾಡಲ್ಲ. ಸಚಿವ ಮಂಕಾಳ ವೈದ್ಯಗೆ ಟಾಂಗ್ ನೀಡಿದ ಶಾಸಕ ಸತೀಶ್ ಸೈಲ್.
